'ತಂದೆಗಿಂತ ನೀವು ಉತ್ತಮ ನಟ' ಎಂದವರಿಗೆ ಅಭಿಷೇಕ್ ಬಚ್ಚನ್ ಹೇಳಿದ್ದೇನು?

ಬಾಲಿವುಡ್ ಸ್ಟಾರ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಮಿತಾಬ್ ಬಚ್ಚನ್ ಸದಾ ಟ್ರೋಲ್ ಗೆ ಗುರಿಯಾಗುತ್ತಿರುತ್ತಾರೆ. ಒಂದಲ್ಲೊಂದು ವಿಚಾರಕ್ಕೆ ಅಭಿಷೇಕ್ ಅವರನ್ನು ನೆಟ್ಟಿಗರು ಕಾಲೆಳೆಯುತ್ತಿರುತ್ತಾರೆ. ಆದರೆ ಅಭಿಷೇಕ್ ಟ್ರೋಲಿಗರಿಗೆ ಕೂಲ್ ಆಗಿಯೇ ಪ್ರತಿಕ್ರಿಯೆ ಕೊಡುವ ಮೂಲಕ ತಿರುಗೇಟು ನೀಡುತ್ತಿರುತ್ತಾರೆ.

ಲೆಜೆಂಡ್ ನಟನ ಮಗನಾಗಿ ಅತೀ ಹೆಚ್ಚು ಟ್ರೋಲಿಗರಿಗೆ ಗುರಿಯಾಗುವ ಅಭಿಷೇಕ್ ಟ್ರೋಲ್ ಗಳನ್ನು ಎದುರಿಸಿರುವ ರೀತಿ ಅಭಿಮಾನಿಗಳಿಗೆ ಮೆಚ್ಚುಗೆ ಪಾತ್ರವಾಗಿದೆ. ಅಭಿಷೇಕ್ ನಟನೆಯ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಾಣದ ಕಾರಣ ಪರಿಣಾಮ ನೆಟ್ಟಿಗರಿಂದ ಆಗಾಗ ಟೀಕೆಗೆ ಗುರಿಯಾಗುತ್ತಿರುತ್ತಾರೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜೂ.ಬಚ್ಚನ್ ಟ್ರೋಲ್ ಗಳನ್ನು ಎದುರಿಸುವ ರೀತಿ ಅನೇಕರಿಗೆ ಮಾದರಿಯಾಗಿದೆ.

ಇದೀಗ ನೆಟ್ಟಿಗನೊಬ್ಬ ಅಭಿಷೇಕ್ ನಟನೆಯನ್ನು ತಂದೆ ಅಮಿತಾಬ್ ಬಚ್ಚನ್ ಅವರಿಗೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಅವರನ್ನು ಹೊಗಳುವ ಬರಾಟೆಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ನಟನೆಯನ್ನು ತೆಗಳಿದ್ದಾರೆ.

Twitter user says Abhishek Bachchan better Actor than Amitabh Bachchan

ಅಭಿಷೇಕ್ ಬಚ್ಚನ್ ಬಿಗ್ ಬುಲ್ ಸಿನಿಮಾ ವೀಕ್ಷಿಸಿದ ನೆಟ್ಟಿಗನೊಬ್ಬ, 'ನಿಮ್ಮ ಬಿಗ್ ಬುಲ್ ಸಿನಿಮಾ ವೀಕ್ಷಿಸಿದ್ದೇನೆ. ನಿಮ್ಮ ನಟನೆ ವಿಷಯಕ್ಕೆ ಬಂದಾಗ ನೀವು ಬಿಗ್ ಬಿ ಗಿಂತ ಉತ್ತಮವಾಗಿ ನಟಿಸುತ್ತೀರಿ ಎಂದು ಭಾವಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾನೆ.

ನೆಟ್ಟಿಗರ ಪ್ರಶ್ನೆಗೆ ಕೂಲ್ ಆಗಿಯೇ ಪ್ರತಿಕ್ರಿಯೆ ನೀಡಿರುವ ಅಭಿಷೇಕ್, 'ತುಂಬಾ ಅಭಿನಂದನೆಗಳು ಸರ್. ಆದರೆ ಅವರಿಗಿಂತ ಯಾರು ಉತ್ತಮವಾಗಿ ನಟಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಇದಕ್ಕೆ ಇನ್ನೊಬ್ಬ ನೆಟ್ಟಿಗ ಕಾಮೆಂಟ್ ಮಾಡಿ, 'ಅಭಿಷೇಕ್ ಬಚ್ಚನ್ ಇದಕ್ಕಿಂತ ಉತ್ತಮ ಮೆಚ್ಚುಗೆ ನಿಮಗೆ ಬೇಕಾ? ಬಿಗ್ ಬಿ ಉತ್ತಮ ನಟ ಎನ್ನುವುದರಲ್ಲಿ ಯಾವುದೇ ಅನುಮಾನ ವಿಲ್ಲ. ಆದರೆ ನೀವು ಕೂಡ ಅವರ ಹಾದಿಯಲ್ಲೇ ಸಾಗುತ್ತಿದ್ದೀರಿ' ಎಂದು ಸಮರ್ತನೆ ಮಾಡಿಕೊಂಡಿದ್ದಾರೆ.

ಈ ಮೊದಲು ಒಟಿಟಿಯಲ್ಲಿ ಬಿಡುಗಡೆಯಾದ ಬಿಗ್ ಬುಲ್ ಸಿನಿಮಾ ವೀಕ್ಷಿಸಿದ ಪ್ರೇಕ್ಷಕನೊಬ್ಬ ಅಭಿಷೇಕ್ ಅವರಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ. ಅಭಿಷೇಕ್ ಬಚ್ಚನ್ ನಟನೆಯನ್ನು 'ಥರ್ಡ್ ರೇಟ್' ನಟನೆ ಎಂದು ಜರಿದಿದ್ದರು. ಆದರೆ ಅಭಿಷೇಕ್ ಸಮಾಧಾನಕರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. 'ಹೇ ಮ್ಯಾನ್ ನಾನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ನನಗೆ ಸಂತೋಷವಾಗಿದೆ, ನಮ್ಮ ಚಿತ್ರ ನೋಡಲು ಸಮಯ ತೆಗೆದುಕೊಂಡಿದ್ದಕ್ಕಾಗಿ, ಧನ್ಯವಾದಗಳು' ಎಂದಿದ್ದರು.

ಈ ಹಿಂದೆ ಟ್ರೋಲ್ ಗಳ ಬಗ್ಗೆ ಮಾತನಾಡಿ ಇದು ನ್ಯಾಯಯುತ ಆಟ ಎಂದು ಅಭಿಷೇಕ್ ಹೇಳಿದ್ದರು. ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾದರು ಅಭಿಷೇಕ್ ಕೂಲ್ ಆಗಿಯೇ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಅಭಿಷೇಕ್ ಅವರ ಈ ಗುಣ ಅಭಿಮಾನಿ ಗಳ ಮೆಚ್ಚುಗೆಗೆ ಪಾತ್ರವಾಗಿದೆ.

More from Filmibeat

English summary
Twitter user says Abhishek Bachchan better Actor than Amitabh Bachchan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X