ಸಿಂಗಂ ಅಗೇನ್ + ಭೂಲ್ ಭುಲಯ್ಯ 03 = ₹500 ಕೋಟಿ, ಬಾಲಿವುಡ್‌ನಲ್ಲಿ ಬ್ಲಾಕ್ ಬಸ್ಟರ್ ದೀಪಾವಳಿ..!
ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂಡ ಇನ್ನೊಂದು ಚಿತ್ರದ ಮುಂದೆ ಮತ್ತೊಂದು ಚಿತ್ರ ಸೋಲುವ ಹೆದರಿಕೆ ಇರುತ್ತೆ. ಯಾವ ಚಿತ್ರ ನೋಡಬೇಕು, ಯಾವ ಚಿತ್ರ ನೋಡಬಾರದು ಎನ್ನುವ ಗೊಂದಲ ಪ್ರೇಕ್ಷಕರಿಗೆ ಕಾಡುತ್ತೆ. ಈ ಕಾರಣಕ್ಕೆ ಒಂದೇ ದಿನ ದೊಡ್ಡ ದೊಡ್ಡ ಚಿತ್ರಗಳನ್ನು ಒಟ್ಟೊಟ್ಟಿಗೆ ಬಿಡುಗಡೆ ಮಾಡಬೇಡಿ ಎಂದು ಎಲ್ಲ ಭಾಷೆಯಲ್ಲಿ ಚಿತ್ರಪ್ರೇಮಿಗಳು ಮನವಿಯನ್ನು ಮಾಡಿಕೊಳ್ಳುತ್ತಾರೆ. ಆಯಾ ಚಿತ್ರರಂಗದ ದೊಡ್ಡವರು ಕೂಡ ಈ ಸಲಹೆಯನ್ನೇ ನೀಡುತ್ತಾರೆ.
ಆದರೆ. ಪ್ರೇಕ್ಷಕರ ಅಭಿಲಾಷೆ ಮತ್ತು ಚಿತ್ರರಂಗದವರ ಸಲಹೆಯನ್ನು ಕಡೆಗಣಿಸಿ ಅನೇಕರು ತಮ್ಮ ಚಿತ್ರವನ್ನು ಮತ್ತೊಂದು ಚಿತ್ರದ ಎದುರು ಬಿಡುಗಡೆ ಮಾಡುತ್ತಾರೆ. ಅದರಲ್ಲಿಯೂ ಹಬ್ಬ ಹರಿದಿನ ಬಂದರೆ ಸಾಕು ಹಿಂದಡಿ ಇಡುವ ಪ್ರಶ್ನೆಯೇ ಇರಲ್ಲ. ಜಿದ್ದಿಗೆ ಬಿದ್ದವರಂತೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ. ಹೀಗೆ ಬಿಡುಗಡೆ ಮಾಡಿದಾಗೆಲ್ಲ ಬಹುತೇಕ ಬಾರಿ ಒಬ್ಬರಿಗೆ ಸೋಲಾಗಿದೆ. ಆದರೆ ಈ ಬಾರಿ ಮಾತ್ರ ಇಬ್ಬರಿಗೂ ಭರ್ಜರಿ ಲಾಭವಾಗಿದೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆಯನ್ನು ಬರೆದಿವೆ.

ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಎರಡು ದೊಡ್ಡ ಮತ್ತು ನಿರೀಕ್ಷಿತ ಚಿತ್ರಗಳು ಬಾಲಿವುಡ್‌ನಲ್ಲಿ ಬಿಡುಗಡೆಯಾಗಿದ್ದವು. ಎರಡು ಮಲ್ಟಿಸ್ಟಾರರ್ ಸಿನಿಮಾಗಳೇ. ಆ ಪೈಕಿ ಸಿಂಗಂ ಅಗೇನ್‌ನಲ್ಲಿ ಅಜಯ್ ದೇವಗನ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಖಾನ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಮತ್ತು ರಣ್ವೀರ್ ಸಿಂಗ್ ಇದ್ದರೆ, ಭೂಲ್ ಭುಲಯ್ಯ 3ದಲ್ಲಿ ಕಾರ್ತಿಕ್ ಆರ್ಯನ್, ಮಾಧುರಿ ದೀಕ್ಷಿತ್, ವಿದ್ಯಾ ಬಾಲನ್ ಮತ್ತು ತೃಪ್ತಿ ದಿಮ್ರಿ ಇದ್ದರು.
ವಿಶೇಷ ಅಂದರೆ ಈ ಎರಡು ಚಿತ್ರಗಳಿಗೆ ಪ್ರೇಕ್ಷಕರು ಬಹುಪರಾಕ್ ಹಾಕಿದ್ದಾರೆ. ಎರಡು ಚಿತ್ರಗಳನ್ನು ಕಣ್ತುಂಬಿಕೊಂಡು ರಣಕೇಕೆ ಹಾಕಿದ್ದಾರೆ. ಪರಿಣಾಮ, ಭಾರತದ ಮಾರುಕಟ್ಟೆಯಲ್ಲಿ ಸಿಂಗಂ ಅಗೇನ್ ಮತ್ತು ಭೂಲ್ ಭುಲಯ್ಯ 03 ಎರಡು ಚಿತ್ರಗಳು ₹250 ಕೋಟಿಯನ್ನು ಕೊಳ್ಳೆ ಹೊಡೆದಿವೆ. ಆ ಪೈಕಿ ಸಿಂಗಂ ಅಗೇನ್ ಚಿತ್ರದ ಗಳಿಕೆ ₹254.34 ಕೋಟಿ ಆದರೆ ಭೂಲ್ ಭುಲಯ್ಯ 03 ₹251.65 ಕೋಟಿಯನ್ನು ಗಳಿಸಿದೆ. ಈ ಮೂಲಕ ದೀಪಾವಳಿ ಹಬ್ಬದ ನೆಪದಲ್ಲಿ ಬಾಲಿವುಡ್‌ಗೆ ₹500 ಕೋಟಿಯನ್ನು ಇವೆರಡು ಚಿತ್ರಗಳು ಸೇರಿ ಕಾಣಿಕೆಯನ್ನಾಗಿ ನೀಡಿವೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಇದು OTT ಯುಗ. ಈ ಯುಗದಲ್ಲಿ ಕೈಯಲ್ಲಿಯೇ ಮನರಂಜನೆ ಇದೆ. ಹತ್ತು ಹಲವು ಆಯ್ಕೆಗಳಿವೆ. ಈ ಕಾರಣಕ್ಕೆ.. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ಮಾತುಗಳನ್ನು ಆಗಾಗ ಅನೇಕರು ಹೇಳುತ್ತಾರೆ. ಸಿಂಗಂ ಅಗೇನ್ ಮತ್ತು ಭೂಲ್ ಭುಲಯ್ಯ 3 ಚಿತ್ರಗಳ ಫಲಿತಾಂಶ ಇದನ್ನು ಸುಳ್ಳಾಗಿಸಿವೆ. ಕಾಲ ಎಷ್ಟೇ ಬದಲಾದರೂ ಚಿತ್ರಮಂದಿರಕ್ಕೆ ಬೆಲೆ ಇದ್ದೇ ಇದೆ ಎನ್ನುವುದನ್ನು ಸಾಬೀತು ಮಾಡಿವೆ. ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಓಟಿಟಿಗೆ ಕಾಯದೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎನ್ನುವುದನ್ನು ಕೂಡ ಇವೆರಡು ಚಿತ್ರಗಳು ರುಜುವಾತು ಮಾಡಿವೆ.
ಅಂದ್ಹಾಗೇ ಬಾಲಿವುಡ್‌ನಲ್ಲಿ ಇಂತಹದ್ದೊಂದು ದಾಖಲೆ 2574 ದಿನಗಳ ಹಿಂದೆ ನಿರ್ಮಾಣವಾಗಿತ್ತು. ಆಗ ಬಂದಿದ್ದ ಚಿತ್ರಗಳು ಮತ್ತು ನಿರ್ಮಾಣವಾಗಿದ್ದ ದಾಖಲೆ ಈ ಕೆಳಗಿನಂತೆ ಇದೆ.
1. ಸಿಂಗಂ ಅಗೇನ್ (₹254.34) + Bhool Bhulaiyaa 3 (₹251.65) - ₹ 506crore*
2. ಗೋಲ್‌ಮಾಲ್ ಅಗೇನ್ (₹205.72) +ಸಿಕ್ರೇಟ್ ಸೂಪರ್ ಸ್ಟಾರ್ (₹62) - ₹267.72 crore
3. ಸನ್ ಆಫ್ ಸರ್ದಾರ್ (₹105.13) + ಜಬ್ ತಕ್ ಹೈ ಜಾನ್ (₹120.65) - ₹225.78 crore
4. ಶಿವಾಯ್ (₹100.35) + ಏ ದಿಲ್ ಹೈ ಮುಶ್ಕೀಲ್ (₹112.50) - ₹212.85 crore
5. ಗೋಲ್‌ಮಾಲ್ 03 (₹106.30) + ಆಕ್ಷನ್ ರಿಪ್ಲೈ (₹28.12) - ₹134 Crore


Click it and Unblock the Notifications










