For Quick Alerts
  ALLOW NOTIFICATIONS  
  For Daily Alerts

  ತಾಯಿ ನಿಧನದ ಹೊಂದಿದ ಎರಡು ದಿನಗಳಲ್ಲೇ ಮತ್ತೆ ವಿದೇಶಕ್ಕೆ ಹಾರಿದ ಅಕ್ಷಯ್ ಕುಮಾರ್

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ನಿಧನ ಹೊಂದಿದ ಎರಡು ದಿನಗಳಲ್ಲೇ ಅಕ್ಷಯ್ ಕುಮಾರ್ ವಿದೇಶಕ್ಕೆ ಪಯಣ ಪಯಣ ಬೆಳೆಸಿದ್ದಾರೆ. ನಟ ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ಸೆಪ್ಟಂಬರ್ 8ರಂದು ಮುಂಜಾನೆ ನಿಧನ ಹೊಂದಿದರು.

  ತಾಯಿ ನಿಧನ ಹೊಂದುವ ಮೊದಲು ನಟ ಅಕ್ಷಯ್ ಕುಮಾರ್ ವಿದೇಶದಲ್ಲಿ ಶೂಟಿಂಗ್‌ನಲ್ಲಿದ್ದರು. ಲಂಡನ್‌ನಲ್ಲಿ ಚಿತ್ರೀಕರಣದಲ್ಲಿದ್ದ ಅಕ್ಷಯ್ ತಾಯಿಯ ಅನಾರೋಗ್ಯದ ವಿಚಾರ ತಿಳಿದು ದಿಢೀರ್ ಭಾರತಕ್ಕೆ ವಾಪಸ್ ಆಗಿದ್ದರು. ಸೆಪ್ಟೆಂಬರ್‌ 5 ರಂದು ಅಕ್ಷಯ್ ಕುಮಾರ್ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಮುಂಬೈನ ಹೀರಾನಂದಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  ಅಕ್ಷಯ್ ಕುಮಾರ್ ಹುಟ್ಟುಹಬ್ಬ: ತಾಯಿಯ ಅಗಲಿಕೆ ನೋವಿನಲ್ಲಿರುವ ಅಕ್ಷಯ್ ಭಾವುಕ ಪೋಸ್ಟ್ಅಕ್ಷಯ್ ಕುಮಾರ್ ಹುಟ್ಟುಹಬ್ಬ: ತಾಯಿಯ ಅಗಲಿಕೆ ನೋವಿನಲ್ಲಿರುವ ಅಕ್ಷಯ್ ಭಾವುಕ ಪೋಸ್ಟ್

  ತಾಯಿಯ ಆರೋಗ್ಯ ಕ್ಷೀಣಿಸಿದ ವಿಷಯ ತಿಳಿದ ಕೂಡಲೇ ಬ್ರಿಟನ್‌ನಲ್ಲಿ ಚಿತ್ರೀಕರಣದಲ್ಲಿದ್ದ ಅಕ್ಷಯ್ ಅರ್ಧಕ್ಕೆ ನಿಲ್ಲಿಸಿ ಸೆಪ್ಟೆಂಬರ್ 6ರಂದು ದಿಢೀರ್ ಭಾರತಕ್ಕೆ ವಾಪಸ್ಸಾಗಿದ್ದರು. ಬ್ರಿಟನ್‌ನಲ್ಲಿ 'ಸಿಂಡ್ರೆಲಾ' ಸಿನಿಮಾದ ಶೂಟಿಂಗ್‌ನಲ್ಲಿ ಅಕ್ಷಯ್ ಕುಮಾರ್ ತೊಡಿಗಿಸಿಕೊಂಡಿದ್ದರು.

  ಅಕ್ಷಯ್ ಕುಮಾರ್ ಭಾರತಕ್ಕೆ ಬರುವಾಗಲೇ ಅವರ ತಾಯಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಕ್ಷಯ್ ಕುಮಾರ್ ಮುಂಬೈಗೆ ವಾಪಸ್ ಆದ ಎರಡು ದಿನಗಳಲ್ಲೇ ತಾಯಿ ನಿಧನರಾದರು. ತಾಯಿಯ ಅಗಲಿಕೆಯ ಸುದ್ದಿಯನ್ನು ಅಕ್ಷಯ್ ಕುಮಾರ್ ಸೆಪ್ಟಂಬರ್ 8ರಂದು ಬೆಳಗ್ಗೆ ​ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದರು.

  ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿ ಬಂದಿದ್ದ ಅಕ್ಷಯ್ ಇದೀಗ ಮತ್ತೆ ಲಂಡನ್ ಗೆ ತೆರಳಿದ್ದಾರೆ. ಅಕ್ಷಯ್ ಕುಮಾರ್ ಸಂಪೂರ್ಣ ವೃತ್ತಿಪರರು. ತನ್ನಿಂದ ಸಿನಿಮಾ ಕೆಲಸ ನಿಲ್ಲುವುದನ್ನು ಅಕ್ಷಯ್ ಯಾವತ್ತು ಸಹಿಸುವುದಿಲ್ಲ. ಅರ್ಧಕ್ಕೆ ಚಿತ್ರೀಕರಣ ನಿಂತ ಕಾರಣ ತಂಡ ಭಾರಿ ನಷ್ಟ ಆಗಲಿದೆ. ಹಾಗಾಗಿ ಅರ್ಧಕ್ಕೆ ನಿಂತ ಚಿತ್ರೀಕರಣವನ್ನು ಪೂರ್ಣ ಮಾಡಲು ಮತ್ತೆ ವಾಪಸ್ ಆಗಿದ್ದಾರೆ.

  ಈ ಬಗ್ಗೆ ಅಕ್ಷಯ್ ಕುಮಾರ್ ತಂಡ ಆಂಗ್ಲ ವೆಬ್ ಪೋರ್ಟಲ್‌ಗೆ ಮಾಹಿತಿ ನೀಡಿ, ಅಕ್ಷಯ್ ಕುಮಾರ್ ಸಂಪೂರ್ಣ ವೃತ್ತಿಪರರು, ಚಿತ್ರೀಕರಣಕ್ಕೆ ತೊಂದರೆ ಆಗಬಾರದು ಎನ್ನುವುದು ಅವರ ಉದ್ದೇಶ. ಚಿತ್ರೀಕರಣ ನಿಂತರೆ ಆರ್ಥಿಕವಾಗಿ ತುಂಬಾ ನಷ್ಟವಾಗಲಿದೆ. ಕೊರೊನಾ ಸಮಯದಲ್ಲಿ ಅನುಭವಿಸಿದ ಕಷ್ಟ-ನಷ್ಟಗಳ ಬಗ್ಗೆ ಅಕ್ಷಯ್ ಕುಮಾರ್ ಅವರಿಗೆ ತಿಳಿದಿದೆ. ಹಾಗಾಗಿ ಎರಡು ದಿನಗಳಲ್ಲಿ ತಾಯಿ ಕಾರ್ಯವೆಲ್ಲ ಮುಗಿಸಿ ಇದೀಗ ಮತ್ತೆ ಚಿತ್ರೀಕರಣಕ್ಕೆ ಹೊರಟಿದ್ದಾರೆ" ಎಂದು ಹೇಳಿದ್ದಾರೆ.

  ಸೆಪ್ಟಂಬರ್ 9 ಅಕ್ಷಯ್ ಕುಮಾರ್ ಹುಟ್ಟುಹಬ್ಬ. ತಾಯಿಯ ಅಗಲಿಕೆಯ ನೋವಿನಲ್ಲಿದ್ದ ಅಕ್ಷಯ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಹುಟ್ಟುಹಬ್ಬದ ದಿನ ಅಕ್ಷಯ್ ​ಕುಮಾರ್ ತಾಯಿ ಜೊತೆ ಇರುವ ಸುಂದರ ಫೋಟೋವನ್ನು ಶೇರ್ ಮಾಡಿದ್ದರು. ಮಗನ ಕೆನ್ನೆಗೆ ಅರುಣಾ ಭಾಟಿಯಾ ಅವರು ಪ್ರೀತಿಯಿಂದ ಮುತ್ತಿಡುತ್ತಿರುವ ಫೋಟೋ ಇದಾಗಿತ್ತು. ತಾಯಿ ಜೊತೆಗಿನ ಸುಂದರ ಫೋಟೋವನ್ನು ಸೋಶಿಯಲ್​ಮೀಡಿಯಾದಲ್ಲಿ ಅಕ್ಷಯ್ ಶೇರ್​ಮಾಡಿ, "ಅಮ್ಮ ನನಗಾಗಿ ಮೇಲಿಂದಲೇ ಹುಟ್ಟುಹಬ್ಬದ ಶುಭಾಶಯ ಅಂತ ಹಾಡುತ್ತಿದ್ದಾರೆ ಎಂಬ ನಂಬಿಕೆ ನನಗಿದೆ. ಸಾಂತ್ವನ ಹೇಳಿದ ಮತ್ತು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಜೀವನ ಮುಂದೆ ಸಾಗಲೇಬೇಕು" ಎಂದು ಅಕ್ಷಯ್​ಕುಮಾರ್​ ಬರೆದುಕೊಂಡಿದ್ದರು.

  English summary
  Two Days After mother's death Akshay Kumar to jet off to UK for Shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X