ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಬಳಿ ಅಪರಿಚಿತರಿಂದ ಗುಂಡಿನ ದಾಳಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿ ಗುಂಡಿನ ಸದ್ದು ಕೇಳಿಬಂದಿದೆ. ಈ ಸಂಬಂಧ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇದೆ. ಸಾಕಷ್ಟು ಬಾರಿ ಆತನಿಗೆ ಬೆದರಿಕೆ ಮೇಲ್‌ಗಳು ಬಂದಿವೆ. ಹಾಗಾಗಿ ಗುಂಡಿನ ಸದ್ದಿನ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಬೆಳ್ಳಂಬೆಳಗ್ಗೆ ಮುಂಬೈನ ಬಾಂದ್ರಾದಲ್ಲಿರುವ ಸಲ್ಲು ಮನೆ ಬಳಿ ಗುಂಡಿನ ಸದ್ದು ಕೇಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 5 ಗಂಟೆ ಸುಮಾರಿಗೆ ಸಲ್ಮಾನ್ ಖಾನ್ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ವ್ಯಕ್ತಿ ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸದ್ಯ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.

Two unidentified people opened fire outside the house of Salman Khan in Bandra

ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋವ್ ಹಲವರನ್ನು ಕೊಲ್ಲಲು ಉದ್ದೇಶಿಸಿದ್ದು ಆ ಲಿಸ್ಟ್‌ನಲ್ಲಿ ಸಲ್ಮಾನ್ ಖಾನ್ ಹೆಸರು ಇದೆ. ಈ ವಿಚಾರವನ್ನು ಕಳೆದ ವರ್ಷ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಹೇಳಿತ್ತು. 1998 ರ ಕೃಷ್ಣಮೃಗ ಬೇಟೆಯ ಘಟನೆ ಹಿನ್ನೆಲೆಯಲ್ಲಿ ಆತ ಸಲ್ಲುನ ಟಾರ್ಗೆಟ್ ಮಾಡಿದ್ದಾನೆ. ಈ ಸಂಬಂಧ ಬೆದರಿಕೆ ಮೇಲ್‌ಗಳು ಬಂದಿತ್ತು.

ತನ್ನ ಸಹಚರ ಸಂಪತ್ ನೆಹ್ರಾ ಎಂಬಾತ ಸಲ್ಮಾನ್ ಖಾನ್ ನಿವಾಸದ ಮೇಲೆ ಕಣ್ಣಿಟ್ಟಿರುವುದಾಗಿ ಬಿಷ್ಣೋವ್ ಹೇಳಿದ್ದ. ಆದರೆ ಹರ್ಯಾಣ ಪೊಲೀಸರು ನೆಹ್ರಾನನ್ನು ಬಂಧಿಸಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಸಲ್ಮಾನ್‌ ಖಾನ್‌ಗೆ ಬೆದಿರಿಕೆ ಮೇಲ್ ಬಂದ ಬಳಿಕ ಭದ್ರತೆಯನ್ನು Y+ಗೆ ಏರಿಸಲಾಗಿದೆ. ಸಲ್ಮಾನ್ ಖಾನ್ ತಮ್ಮ ರಕ್ಷಣೆಗಾಗಿ ಬಂದೂಕು ಇಟ್ಟುಕೊಟ್ಟಲು ಪರವಾನಗಿ ಸಹ ಸಿಕ್ಕಿದೆ. ಬುಲೆಟ್ ಫ್ರೂಪ್ ವಾಹನವನ್ನು ಕೂಡ ಖರೀದಿಸಿದ್ದಾರೆ.

ಗುಂಡು ಹಾರಿಸಿದ ಅಪಚಿತರು ಹೆಲ್ಮೆಟ್ ಧರಿಸಿದ್ದರು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಅವರ ಬಗ್ಗೆ ಹುಡುಕಾಟ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಸಲ್ಮಾನ್ ಖಾನ್ ಸಿನಿಮಾಗಳ ವಿಚಾರಕ್ಕೆ ಬಂದರೆ ಇತ್ತೀಚೆಗೆ 'ಸಿಕಂದರ್' ಸಿನಿಮಾ ಘೋಷಣೆ ಆಗಿದೆ. ಈ ವರ್ಷ ಸಲ್ಮಾನ್ ಖಾನ್ ನಟನೆಯ ಯಾವುದೇ ಸಿನಿಮಾ ತೆರೆಗರ ಬರುವ ಸುಳಿವು ಸಿಗುತ್ತಿಲ್ಲ. ಮುಂದಿನ ವರ್ಷ ಈದ್ ಸಂಭ್ರಮದಲ್ಲಿ 'ಸಿಕಂದರ್' ಆಗಿ ಸಲ್ಲು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ತಮಿಳು ನಿರ್ದೇಶಕ ಎ. ಆರ್ ಮುರುಗದಾಸ್ 'ಸಿಕಂದರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈದ್ ಸಂಭ್ರಮದಲ್ಲಿ ತೆರೆಗೆ ಬಂದಿರುವ ಸಲ್ಲು ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡಿವೆ. ಆದರೆ ಈ ವರ್ಷ ಅದನ್ನು ಮಿಸ್ ಮಾಡಿಕೊಂಡರು. ಕಳೆದ ವರ್ಷ ದೀಪಾವಳಿ ಸಂಭ್ರಮದಲ್ಲಿ ಸಲ್ಲು ನಟಿಸಿದ 'ಟೈಗರ್-3' ಸಿನಿಮಾ ತೆರೆಗೆ ಬಂದಿತ್ತು. ಆದರೆ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಸಾಜಿದ್ ನಾಡಿಯಾವಾಲ 'ಸಿಕಂದರ್' ಸಿನಿಮಾ ನಿರ್ಮಾಣ ಮಾಡಲಿದ್ದಾರೆ.

ತಮಿಳಿನಲ್ಲಿ 'ರಮಣ', 'ಗಜಿನಿ', 'ತುಫಾಕಿ', 'ಕತ್ತಿ' ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ಮುರುಗದಾಸ್ ಕಟ್ಟಿಕೊಟ್ಟಿದ್ದಾರೆ. ತಮ್ಮದೇ 'ಗಜಿನಿ' ಹಾಗೂ 'ತುಫಾಕಿ' ಸಿನಿಮಾಗಳನ್ನು ಬಾಲಿವುಡ್‌ಗೆ ರೀಮೆಕ್ ಮಾಡಿದ್ದಾರೆ. ಹಾಗಾಗಿ ನಿರ್ದೇಶಕರಿಗೆ ಬಾಲಿವುಡ್ ಹೊಸತಲ್ಲ. ಈ ಬಾರಿ ಸಲ್ಮಾನ್ ಖಾನ್ ಜೊತೆ ಮುರಗದಾಸ್ ಹೊಸ ಸಾಹಸ ಮಾಡುತ್ತಿದ್ದಾರೆ.

More from Filmibeat

English summary
2 unidentified men opened fire outside the house of Salman Khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X