ಮದುವೆಯಾದ ಎರಡು ವರ್ಷದ ನಂತರ, 49ನೇ ವಯಸ್ಸಿನಲ್ಲಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಖ್ಯಾತ ನಟ

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಮದುವೆಯಾಗಿ ಒಂದು ವರ್ಷ ತುಂಬಿರುವುದಿಲ್ಲ ಆಗಲೇ ಮದುವೆ ಮುಂಚೆ ಗರ್ಭಿಣಿಯಾಗುವ ಟ್ರೆಂಡ್ ಇರುವ..

ಈ ಸಮಯದಲ್ಲಿ ಯಾಕೆ ಇಷ್ಟು ತಡ ಮಾಡ್ತಿದ್ದೀರಾ ಎಂದು ಕೇಳಿ ಹಿಂಸೆ ಕೊಡುತ್ತಾರೆ. ಸುಖಾ ಸುಮ್ಮನೆ ಕೆಲವರ ಪಿತ್ತ ನೆತ್ತಿಗೇರಿಸುತ್ತಾರೆ. ಇನ್ನೂ ವಯಸ್ಸಾಗಿದ್ದರಂತೂ ಮುಗಿದೇ ಹೋಯ್ತು. ಗೆದ್ದಲು ಹುಳಗಳಂತೆ ಕೊರೆಯಲು ಶುರು ಮಾಡುತ್ತಾರೆ. ಕೆಲವರು ಈ ಪ್ರಶ್ನೆ ಸಹಿಸಿಕೊಳ್ಳಲು ಸಾಧ್ಯವಾಗದೇ ರೇಗಿದ್ದು ಇದೆ. ಮಾರ್ಮಿಕವಾಗಿ ಉತ್ತರ ನೀಡಿದ್ದು ಇದೆ.

Two Years Two Hearts Three Soon Randeep Hooda amp amp Lin Laishram Announce Pregnancy


ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳುವವರಿಗೆ ಈಗ ರಣ್‌ದೀಪ್ ಹೂಡ ಉತ್ತರ ನೀಡಿದ್ದಾರೆ. 49ನೇ ವಯಸ್ಸಿನಲ್ಲಿ ತಾವು ತಂದೆಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಹೌದು,ರಣ್‌ದೀಪ್ ಹೂಡ.. ಸಿನಿಮಾಗಾಗಿ 'ಬೆವರು' ಅಷ್ಟೇ ಅಲ್ಲ ಕೆಲವರು 'ರಕ್ತ' ಬಸಿದು ಕೆಲಸ ಮಾಡುತ್ತಾರೆ. ಆ ಪೈಕಿ ಇವರು ಕೂಡ ಒಬ್ಬರು. ಪಾತ್ರಕ್ಕಾಗಿ 'ತನು-ಮನ'ವನ್ನೇ ಅರ್ಪಿಸುವ ರಣ್‌ದೀಪ್ ಹೂಡ ಬಾಲಿವುಡ್‌ನ ಪ್ರತಿಭಾವಂತ ನಾಯಕರಲ್ಲಿ ಒಬ್ಬರು.

ಕೇವಲ ನಾಯಕನ ಪಾತ್ರಗಳಿಗೆ ಸೀಮಿತವಾಗದ ರಣ್‌ದೀಪ್ ಹೂಡ, ಇಲ್ಲಿಯವರೆಗೆ ಹಲವು ಬಗೆಯ ವಿಭಿನ್ನ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಅಭಿನಯ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹಲವು ಚಿತ್ರಪ್ರೇಮಿಗಳ ಹೃದಯವನ್ನು ಕೂಡ ಗೆದ್ದಿದ್ದಾರೆ.

''ಡಿ''.. ''ರಿಸ್ಕ್''.. ''ಓನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ''.. ''ಜನ್ನತ್ 2''.. ''ಜಿಸ್ಮ್ 2''.. ''ಕಾಕ್‌ಟೇಲ್''..'' ಲಾಲ್ ರಂಗ್''.. ''ಹೀರೋಯಿನ್''.. ''ಜಾಟ್''.. ''ಮರ್ಡರ್ 3''.. ''ಸಾಹೇಬ್ ಬೀವಿ ಔರ್ ಗ್ಯಾಂಗ್‌ಸ್ಟರ್''.. ''ರಂಗ್ ರಸಿಯಾ''.. ''ಸರಬ್ಜೀತ್''.. ''ಕಿಕ್''.. ''ಸುಲ್ತಾನ್''.. ''ಬಾಘಿ 2''.. ''ಮೇ ಔರ್ ಚಾರ್ಲ್ಸ್‌''.. ''ಸ್ವಾತಂತ್ರ್ಯ ವೀರ್ ಸಾವರ್ಕರ್''.. ರಣ್‌ದೀಪ್ ಹೂಡ ಅಭಿನಯದ ಕೆಲ ಪ್ರಮುಖ ಚಿತ್ರಗಳು.

Two Years Two Hearts Three Soon Randeep Hooda amp amp Lin Laishram Announce Pregnancy

ಇಂಥಾ ರಣ್‌ದೀಪ್ ಹೂಡ ಎರಡು ವರ್ಷಗಳ ಹಿಂದೆ ನಟಿ ಮತ್ತು ಮಾಡೆಲ್ ಆದ ಮಣಿಪುರ ಮೂಲದ ಲಿನ್ ಲೈಶ್ರಾಮ್ ಅವರ ಜೊತೆ ಮದುವೆಯಾಗಿದ್ದರು. ತಮ್ಮ 47ನೇ ವಯಸ್ಸಿನಲ್ಲಿ ಗುರು ಹಿರಿಯರ ಆಶೀರ್ವಾದ ಪಡೆದು ತಮ್ಮ ಸ್ನೇಹಿತರ ಸಮ್ಮುಖದಲ್ಲಿ ಮಣಿಪುರಿದ ಮೈಥಿಯಿ ಸಂಪ್ರದಾಯದಂತೆ ಸಪ್ತಪದಿಯನ್ನು ತುಳಿದಿದ್ದರು.

ಇದೀಗ ಮದುವೆಯಾದ ಎರಡು ವರ್ಷಗಳ ನಂತರ ರಣ್‌ದೀಪ್ ಹೂಡ ತಮ್ಮ ಅಭಿಮಾನಿಗಳಿಗೆ ಮತ್ತು ಹಿತೈಶಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ತಾವು ತಂದೆಯಾಗುತ್ತಿರುವುದಾಗಿ ಹೇಳಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಣ್‌ದೀಪ್ ಹೂಡಎರಡು ವರ್ಷಗಳ ಪ್ರೀತಿ, ಸಾಹಸ.. ಈಗ ಚಿಕ್ಕ ಮಗು ಬರಲಿದೆ.. ಎಂದು ಬರೆದುಕೊಂಡಿದ್ದಾರೆ. ಪತ್ನಿ ಲಿನ್ ಜೊತೆ ಕಾಡಿನಲ್ಲಿ ಕ್ಯಾಂಪ್‌ಫೈರ್ ಹಾಕಿಕೊಂಡು ಈ ಸಂತೋಷದ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಸದ್ಯ ರಣ್‌ದೀಪ್ ಹೂಡ ಮತ್ತು ಲಿನ್ ಅವರಿಗೆ ಚಿತ್ರರಂಗದ ಹಲವರು ಶುಭಾಶಯವನ್ನು ಕೋರುತ್ತಿದ್ದಾರೆ. ಅಭಿಮಾನಿಗಳೂ ಕೂಡ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇನ್ನುಳಿದಂತೆ ಸದ್ಯ ರಣ್‌ದೀಪ್ ಹೂಡ ಸದ್ಯ ''ಮ್ಯಾಚ್ ಬಾಕ್ಸ್'' ಎಂಬ ಇಂಗ್ಲಿಷ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸ್ಯಾಮ್ ಹರ್‌ಗ್ರೇವ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ WWE ಸೂಪರ್ ಸ್ಟಾರ್ ಜಾನ್ ಸೀನಾ.. ಜೆಸ್ಸಿಕಾ ಬೆಲ್.. ಸ್ಯಾಮ್ ರಿಚರ್ಡ್‌ಸನ್ ಮುಂತಾದವರು ಇದ್ದಾರೆ. ಮುಂದಿನ ವರ್ಷ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

More from Filmibeat

English summary
'A little wild one on the way': Randeep Hooda and Lin Laishram confirm their pregnancy in a heartwarming post marking their second anniversary. Find out when the baby is due!
Read more about: pregnancy pregnent randeep hooda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X