For Quick Alerts
  ALLOW NOTIFICATIONS  
  For Daily Alerts

  ಹಿಂದಿಗೆ ರೀಮೇಕ್ ಆಗುತ್ತಿದೆ ಕನ್ನಡ ಸಿನಿಮಾ, ನಾಯಕಿ ಅಲಾಯಾ

  |

  ಐದು ವರ್ಷದ ಹಿಂದೆ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ 'ಯು-ಟರ್ನ್' ಇದೀಗ ಹಿಂದಿಗೆ ರೀಮೇಕ್ ಆಗುತ್ತಿದ್ದು ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿದ್ದ ಪಾತ್ರದಲ್ಲಿ ಯುವ ನಟಿ ಅಲಾಯಾ ನಟಿಸುತ್ತಿದ್ದಾರೆ.

  ಹಿಂದಿ ಸಿನಿಮಾ, ಟಿವಿ ರಂಗದ ಯಶಸ್ವೀ ನಿರ್ಮಾಪಕಿ ಏಕ್ತಾ ಕಪೂರ್ ಈ ಕನ್ನಡ ಸಿನಿಮಾ 'ಯು-ಟರ್ನ್' ಅನ್ನು ಹಿಂದಿಗೆ ರೀಮೇಕ್ ಮಾಡುತ್ತಿದ್ದು ನಿರ್ದೇಶನವನ್ನು ಆರಿಫ್ ಖಾನ್ ಮಾಡಲಿದ್ದಾರೆ. ಏಕ್ತಾ ಕಪೂರ್ ಒಡೆತನದ 'ಕಲ್ಟ್ ಮೂವೀಸ್' ಪ್ರೊಡಕ್ಷನ್‌ ಹೌಸ್‌ನಿಂದ ಈ ಸಿನಿಮಾ ನಿರ್ಮಾಣವಾಗುತ್ತಿದೆ.

  ಅಲಾಯಾಗೆ ಇದು ಎರಡನೇ ಸಿನಿಮಾ ಆಗಿದೆ. ಸೈಫ್ ಅಲಿ ಖಾನ್‌ ಜೊತೆಗೆ 'ಜವಾನಿ ಜಾನೇಮನ್' ಸಿನಿಮಾದಲ್ಲಿ ಅವರು ನಟಿಸಿದ್ದರು. 'ಯು-ಟರ್ನ್' ಸಿನಿಮಾದ ರೀಮೇಕ್ ಬಗ್ಗೆ ಮಾತನಾಡಿರುವ ಏಕ್ತಾ ಕಪೂರ್, 'ಅಲಾಯಾ' ತಮ್ಮ ಮೊದಲ ಸಿನಿಮಾದಲ್ಲಿ ಉತ್ತಮವಾಗಿ ನಟಿಸಿದ್ದರು, ಯಾವುದಾದರೂ ಪಾತ್ರವನ್ನು ಚೆನ್ನಾಗಿ ನಿಭಾಯಿಸುವ ಪ್ರತಿಭೆ ಅವರಿಗಿದೆ'' ಎಂದಿದ್ದಾರೆ.

  'ಯು-ಟರ್ನ್' ಹಿಂದಿ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವ ಬಗ್ಗೆ ಮಾತನಾಡಿರುವ ಅಲಾಯಾ, ''ನನ್ನ ವೃತ್ತಿ ಜೀವನದ ಆರಂಭದಲ್ಲಿಯೇ ಏಕ್ತಾ ಕಪೂರ್ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿರುವುದು ಅದೃಷ್ಟ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ'' ಎಂದಿದ್ದಾರೆ.

  ಕನ್ನಡದ 'ಯು-ಟರ್ನ್' ಸಿನಿಮಾವು 2016 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಿನಿಮಾವನ್ನು ಪವನ್ ಕುಮಾರ್ ನಿರ್ದೇಶನ ಮಾಡಿದ್ದರು.

  ಚಿರಂಜೀವಿ ಸರ್ಜಾ ರವರ ಮಿಸ್ ಮಾಡದೆ ನೋಡಲೇಬೇಕಾದ 5 ಚಿತ್ರಗಳು | Top 5 Best Movies of Chirusarja |Filmibeat

  'ಯು-ಟರ್ನ್' ಸಿನಿಮಾ ಈಗಾಗಲೇ ತೆಲುಗು, ತಮಿಳು ಭಾಷೆಗಳಿಗೆ ರೀಮೇಕ್ ಆಗಿದ್ದು ಮುಖ್ಯ ಪಾತ್ರದಲ್ಲಿ ಸಮಂತಾ ಅಕ್ಕಿನೇನಿ ನಟಿಸಿದ್ದಾರೆ. ಬೆಂಗಾಲಿ ಭಾಷೆಯಲ್ಲಿ 'ಫ್ಲೈಓವರ್' ಹೆಸರಿನಲ್ಲಿ ರೀಮೇಕ್ ಆಗಿದ್ದು ಕೋಯೆಲ್ ಮಲ್ಲಿಕ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂನಲ್ಲಿ 'ಕೇರ್‌ಫುಲ್' ಹೆಸರಿನಲ್ಲಿ ರೀಮೇಕ್ ಆಗಿದೆ. ಶ್ರೀಲಂಕಾದ ಸಿಂಹಳ ಭಾಷೆ, ಫಿಲಿಫಿನೋ ಭಾಷೆಗಳಲ್ಲಿಯೂ ಈ ಸಿನಿಮಾ ರೀಮೇಕ್ ಆಗಿ ಬಿಡುಗಡೆ ಆಗಿದೆ. ಗುಜರಾತಿ, ಮರಾಠಿ, ಮಲಯ, ಚೀನಿ, ಥಾಯ್ ಭಾಷೆಗಳಲ್ಲಿ ರೀಮೇಕ್ ಆಗಲಿದೆ ಎಂದು ಹಿಂದೊಮ್ಮೆ ಪವನ್ ಕುಮಾರ್ ಹೇಳಿದ್ದರು.

  English summary
  U Turn Hindi Remake: Ekta Kapoor to Remade Pawan Kumar's U Turn in Hindi. Actress Alaya to play lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X