ಅಮೆರಿಕದಲ್ಲಿ ಬಾಲಿವುಡ್ ನಟಿಗೆ ಚಕ್ಮಾ ಕೊಟ್ಟ ಕ್ಯಾಬ್ ಚಾಲಕ

ಬಾಲಿವುಡ್ ನಟಿ ಸ್ವರಾ ಭಾಸ್ಕರ್‌ಗೆ ಅಮೆರಿಕದಲ್ಲಿ ಕ್ಯಾಬ್ ಚಾಲಕನೊಬ್ಬ ಚಕ್ಮಾ ಕೊಟ್ಟಿದ್ದಾನೆ. ಕ್ಯಾಬ್ ಚಾಲಕ ಕೊಟ್ಟ ಚಕ್ಮಾಗೆ ಹೈರಾಣಾಗಿರುವ ನಟಿ ಸ್ವರಾ ಊಬರ್‌ ಸಂಸ್ಥೆಗೆ ದೂರು ಬರೆದಿದ್ದಾರೆ.

ಆಗಿದ್ದಿಷ್ಟು, ಪ್ರಸ್ತುತ ಅಮೆರಿಕ ನಿವಾಸಿಯಾಗಿರುವ ಸ್ವರಾ ಭಾಸ್ಕರ್‌ ಅಲ್ಲಿ ದಿನಸಿ ಖರೀದಿಸಿ ಊಬರ್‌ ಮೂಲಕ ಕ್ಯಾಬ್ ಬುಕ್‌ ಮಾಡಿ ಮನೆಗೆ ವಾಪಸ್ಸಾಗಿದ್ದಾರೆ. ಮನೆಯ ಬಳಿ ಬಂದು ಕಾರಿನಿಂದ ಇಳಿದಿದ್ದಾರೆ. ಅದೇ ಸಮಯಕ್ಕೆಂದು ಕಾಯುತ್ತಿದ್ದ ಕ್ಯಾಬ್ ಚಾಲಕ ಸ್ವರಾ ಭಾಸ್ಕರ್‌ ದಿನಸಿ ಸಾಮಾನುಗಳೊಂದಿಗೆ ಪರಾರಿಯಾಗಿದ್ದಾನೆ.

ಊಬರ್‌ ಸಂಸ್ಥೆಗೆ ಟ್ವೀಟ್ ಮೂಲಕ ದೂರು ನೀಡಿರುವ ನಟಿ ಸ್ವರಾ ಭಾಸ್ಕರ್, ''ಲಾಸ್ ಏಂಜಲ್ಸ್‌ನಲ್ಲಿ ನಿಮ್ಮ ಸಂಸ್ಥೆಯ ಚಾಲಕನೊಬ್ಬ ನನ್ನ ದಿನಸಿ ಸಾಮಾನುಗಳೊಂದಿಗೆ ಪರಾರಿಯಾಗಿದ್ದಾನೆ. ನಿಮ್ಮ ಅಪ್ಲಿಕೇಶನ್‌ನಲ್ಲಿ ಈ ಬಗ್ಗೆ ದೂರು ದಾಖಲಿಸಲು ಅವಕಾಶ ಇಲ್ಲ ಹಾಗಾಗಿ ಇಲ್ಲಿ (ಟ್ವಿಟ್ಟರ್) ದೂರು ಸಲ್ಲಿಸುತ್ತಿದ್ದೇನೆ'' ಎಂದಿದ್ದಾರೆ ಸ್ವರಾ ಭಾಸ್ಕರ್.

Uber Driver In America Took Away Actress Swara Bhaskars Grocery In His Cab

ಸ್ವರಾ ಭಾಸ್ಕರ್‌ಗೆ ಆಗಿರುವ ಅನುಭವಕ್ಕೆ ಖೇದ ವ್ಯಕ್ತಪಡಿಸಿರುವ ಊಬರ್ ಸಂಸ್ಥೆ. ನೀವು ಎದುರಿಸುವ ಸನ್ನಿವೇಶ ನಮ್ಮ ಸೇವಾ ಬದ್ಧತೆಗೆ ತಕ್ಕುದಾದುದಲ್ಲ. ನಾವು ನಿಮಗೆ ಖಾಸಗಿಯಾಗಿ ಸಂದೇಶ ಕಳಿಸಿದ್ದೇವೆ. ನಾವು ನಿಮಗೆ ಸಹಾಯ ಮಾಡಲಿಚ್ಚಿಸಿದ್ದೇವೆ. ನಿಮಗೆ ಆಗಿರುವ ನಷ್ಟವನ್ನು ಸರಿಪಡಿಸುವ ಉದ್ದೇಶ ನಮಗಿದೆ'' ಎಂದು ಊಬರ್, ಸ್ವರಾ ಭಾಸ್ಕರ್‌ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದೆ.

ಸ್ವರಾ ಭಾಸ್ಕರ್ ಮಾಡಿರುವ ಟ್ವೀಟ್‌ಗೆ ಹಲವರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ವರಾ ಭಾಸ್ಕರ್ ಎಡಪಂಥೀಯ ವಿಚಾರಗಳಿಂದಾಗಿ ಬಿಜೆಪಿ ಕಾರ್ಯಕರ್ತರಿಂದ ಟೀಕೆಗೆ ಒಳಪಟ್ಟಿದ್ದರು. ಅದೇ ವಿಷಯವನ್ನಿಟ್ಟುಕೊಂಡು ಸ್ವರಾ ಅವರನ್ನು ಟ್ರೋಲ್ ಮಾಡಲಾಗಿದೆ.

'ದಿನಸಿ ಕಳೆದುಕೊಂಡಿರುವ ಸ್ವರಾ ಭಾಸ್ಕರ್ ಈಗ ಅದಕ್ಕಾಗಿ ಜೆಎನ್‌ಯು ವಿದ್ಯಾರ್ಥಿಗಳನ್ನು ಒಟ್ಟು ಮಾಡಿಕೊಂಡು ಪ್ರತಿಭಟನೆ ನಡೆಸಲಿ'' ಎಂದು ಕೆಲವರು ಹೇಳಿದ್ದಾರೆ. ''ಆ ಕ್ಯಾಬ್ ಡ್ರೈವರ್‌ನ ಜಾತಿ, ಧರ್ಮ ಇತರೆ ವಿಷಯಗಳ ಮಾಹಿತಿ ಕಲೆ ಹಾಕಿ ಅದರ ಬಗ್ಗೆ ಸ್ವರಾ ಭಾಷಣ ಮಾಡಲಿದ್ದಾರೆ'' ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಸ್ವರಾ ಭಾಸ್ಕರ್ ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಿಗಿಂತಲೂ ತಮ್ಮ ಬಿಜೆಪಿ, ಮೋದಿ ವಿರೋಧಿ ಹೇಳಿಕೆಗಳು, ಟ್ವೀಟ್‌ಗಳಿಂದಲೇ ಹೆಚ್ಚು ಜನಪ್ರಿಯರು. ಪ್ರಸ್ತುತ 'ಶೀರ್ ಖೋಮಾ' ಹಾಗೂ 'ಜಹಾನ್ ಚಾರ್ ಯಾರ್' ಸಿನಿಮಾದಲ್ಲಿ ಸ್ವರಾ ನಟಿಸುತ್ತಿದ್ದಾರೆ.

More from Filmibeat

English summary
A Uber driver in America took away actress Swara Bhaskar's grocery in his cab. She complained Uber about the incident through twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X