For Quick Alerts
  ALLOW NOTIFICATIONS  
  For Daily Alerts

  ಮಗ ಸೊಸೆಯ ಲಿವಿಂಗ್ ಟುಗೆದರ್ ಸತ್ಯ ಬಿಚ್ಚಿಟ್ಟ ಖ್ಯಾತ ಗಾಯಕ ಉದಿತ್ ನಾರಾಯಣ್

  |

  ಖ್ಯಾತ ಗಾಯಕ ಉದ್ದಿತ್ ನಾರಾಯಣ್ ಪುತ್ರ, ಪ್ರಸಿದ್ಧ ನಿರೂಪಕ ಆದಿತ್ಯ ನಾರಾಯಣ್ ಇತ್ತೀಚಿಗಷ್ಟೆ (ಡಿಸೆಂಬರ್ 1) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದಿತ್ಯ ಬಹುಕಾಲದ ಗೆಳತಿ ಶ್ವೇತಾ ಅಗರ್ವಾಲ್ ಜೊತೆ ಮುಂಬೈನಲ್ಲಿ ಸಪ್ತಪದಿ ತುಳಿದಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ಆದಿತ್ಯ ನಾರಾಯಣ್ ಮತ್ತು ಶ್ವೇತಾ ಸತಿ-ಪತಿಯರಾಗಿದ್ದಾರೆ.

  ಆದಿತ್ಯ ತಂದೆ ಖ್ಯಾತ ಗಾಯಕ ಉದಿತ್ ನಾರಾಯಣ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಗ ಮತ್ತು ಸೊಸೆ ಶ್ವೇತಾ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಮಗ ಆದಿತ್ಯ ಮತ್ತು ಶ್ವೇತಾ ಸುಮಾರು 10 ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು ಎನ್ನುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯ

  ಈ ಮೊದಲು ಉದಿತ್ ನಾರಾಯಣ್ ಶ್ವೇತಾ ಬಗ್ಗೆ ಕೇಳಿದ್ದಕ್ಕೆ ಮಗನ ಸ್ನೇಹಿತೆ ಅಷ್ಟೆ ಎಂದು ಹೇಳಿದ್ದರು. ಆದರೀಗ ಸತ್ಯ ಬಿಚ್ಚಿಟ್ಟಿದ್ದಾರೆ. 'ನನಗೆ ಒಬ್ಬ ಮಗನಿದ್ದಾನೆ. ಅವನ ಮದುವೆ ಅದ್ದೂರಿಯಾಗಿ ನಡೆಯಬೇಕೆಂದು ನಾನು ಬಯಸಿದ್ದೆ. ಆದರೆ ಕೋವಿಡ್ ಎಲ್ಲಾ ಆಚರಣೆ, ಸಂತೋಷವನ್ನು ಕಿತ್ತುಕೊಂಡಿತು. ಈ ಸಾಂಕ್ರಾಮಿಕ ರೋಗವು ಮುಗಿಯುವವರೆಗೂ ಕಾಯಬೇಕೆಂದು ನಾನು ಬಯಸಿದ್ದೆ. ಆದರೆ ಶ್ವೇತಾ ಕುಟುಂಬ ಮತ್ತು ಆದಿತ್ಯ ಈಗಲೇ ಉತ್ಸುಕರಾಗಿದ್ದರು. ನನ್ನ ಮಗ ಮತ್ತು ಶ್ವೇತಾ 10 ವರ್ಷಗಳ ಕಾಲ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು' ಎಂದು ಹೇಳಿದ್ದಾರೆ.

  ನಂತರ ಮಾತನಾಡಿದ ಉದಿತ್ ನಾರಾಯಣ್, 'ಪ್ರಧಾನಿ ನರೇಂದ್ರ ಮೋದಿ, ಅಮಿತಾಬ್ ಬಚ್ಚನ್ ಅವರನ್ನು ಮದುವೆಗೆ ಆಹ್ವಾನ ನೀಡಿದ್ದೆ. ಆದರೆ ಕೊರೊನಾ ಕಾರಣ ಅವರು ಮದುವೆ ಹಾಜರಾಗುವುದು ಅನುಮಾನವಿತ್ತು. ಮದುವೆ ಆಹ್ವಾನ ನೀಡಿದ ಬಳಿಕ ಪ್ರಧಾನಿ ಮೋದಿ, ನನಗೆ ಪತ್ರ ಬರೆದಿದ್ದಿದ್ದಾರೆ. ಅಮಿತಾಬ್ ಬಚ್ಚನ್ ಹಾಗೂ ಅಂಬಾನಿ ಕೂಡ ಪತ್ರ ಬರೆದಿದ್ದಾರೆ' ಎಂದು ಹೇಳಿದ್ದಾರೆ.

  ಒಂದೇ ಸಿನಿಮಾದಲ್ಲಿ ಕುರಿ, ಶಿವರಾಜ್ K R ಪೇಟೆ, ರವಿಶಂಕರ್ | Filmibeat Kannada

  'ನಾನು ಶ್ವೇತಾಳನ್ನು ಹಲವು ವರ್ಷಗಳಿಂದ ತಿಳಿದಿದ್ದೇನೆ. ಆದರೆ ನನ್ನ ಮಗನ ಸ್ನೇಹಿತೆಯಾಗಿ ಮಾತ್ರ. ಆದಿತ್ಯ ಒಂದು ನನ್ನ ಬಳಿ ಬಂದು ಶ್ವೇತಾಳನ್ನು ಮದುವೆೆಯಾಬೇಕೆಂದು ಹೇಳಿದ. ನಂತರ ಏನಾದರೂ ಸಂಭವಿಸಿದ್ದಲ್ಲಿ ಪೋಷಕರನ್ನು ದೂಷಿಸಬೇಡಿ ಎಂದು ಆದಿತ್ಯಗೆ ಹೇಳಿದೆ' ಎಂದು ಮಗನ ಮತ್ತು ಸೊಸೆಯ ಬಗ್ಗೆ ಖ್ಯಾತ ಗಾಯಕ ಉದಿತ್ ನಾರಾಯಣ್ ವಿವರಿಸಿದ್ದಾರೆ.

  English summary
  Famous Singer Udit Narayan says Aditya And Shweta Agarwal were in a live in relationship for 10 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X