ಲವ್-ದೋಖಾ ; 11 ನಿಮಿಷದ ವಿಡಿಯೋ ವೈರಲ್ - ಕಣ್ಣೀರಾದ ಖ್ಯಾತ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್
ಪ್ರೀತಿ - ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್‌ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಕೆಲ ವರ್ಷಗಳಲ್ಲಿ ಬಣ್ಣದ ಪ್ರಪಂಚದಲ್ಲಿ ಹಲವರ ಸಂಬಂಧ ಮುರಿದು ಬಿದ್ದಿದೆ. ಇನ್ನೇನು ಮದುವೆಯಾದರು ಎಂದು ಅಂದುಕೊಂಡಾಗಲೇ ಒಂದಿಲ್ಲೊಂದು ಕಾರಣದಿಂದ ಮದುವೆ ರದ್ದಾಗಿದೆ. ಇನ್ನು ಆದರ್ಷ ದಂಪತಿಯಂತೆ ಬದುಕುತ್ತೇವೆ ಎಂದು ಹೇಳಿ ಮದುವೆಯಾದರು ಕೂಡ ತಮ್ಮ ಸಂಬಂಧಗಳ ಮೇಲೆ ಡಿವೋರ್ಸ್ ಮುದ್ರೆಯನ್ನು ಒತ್ತಿದ್ದಾರೆ.

ಕೇವಲ ಬೆಳ್ಳಿತೆರೆ.. ಕಿರುತೆರೆ ಮಾತ್ರವಲ್ಲ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್ ಬದುಕಿನಲ್ಲಿಯೂ ಕೂಡ ಬ್ರೇಕಪ್ ತುಂಬಾನೇ ಕ್ಯಾಶುವಲ್ ಆಗಿದೆ. ಉದಾಹರಣೆಗೆ ದೀಕ್ಷಾ ಗುಲಾಟಿ ಮತ್ತು ಉದಿತ್ ರಾಜ್ ಪೂತ್ ಅವರನ್ನೇ ತೆಗೆದುಕೊಳ್ಳಿ.
ಹೌದು, ದೀಕ್ಷಾ ಮತ್ತು ಉದಿತ್.. ಸೋಷಿಯಲ್ ಮೀಡಿಯಾದ ಎರಡು ಪ್ರಖ್ಯಾತ ಹೆಸರು. ಹಾಸ್ಯ ವಿಡಿಯೋಗಳ ಮೂಲಕ ಉದಿತ್ ರಾಜ್ ಪೂತ್ ಮನೆ ಮಾತಾಗಿದ್ದರೆ ದಿಶಾ ಲೈಫ್ ಸ್ಟೈಲ್ ಮತ್ತು ಫ್ಯಾಶನ್‌ಗೆ ಸಂಬಂಧಿಸಿದಂತೆ ವಿಡಿಯೋವನ್ನು ಹಂಚಿಕೊಳ್ಳುತ್ತಾರೆ. ಇನ್ನು ಉದಿತ್ ರಂಗಭೂಮಿ ಕಲಾವಿದ ಕೂಡ ಹೌದು. ''ಸುಖಿಯಾ ಮರ್ ಗಯಾ'' ಇವರ ಜನಪ್ರಿಯ ನಾಟಕ. ದೀಕ್ಷಾ ಕೂಡ ಮಾಡೆಲ್. ಅಭಿನಯದಲ್ಲಿ ಇವರಿಗೆ ಕೂಡ ಆಸಕ್ತಿ ಇದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ 841,405 ಜನ ಇವರನ್ನು ಹಿಂಬಾಲಿಸುತ್ತಿದ್ದಾರೆ.
ಇಂಥಾ ಉದಿತ್ ರಾಜ್‌ಪೂತ್ ಮತ್ತು ದೀಕ್ಷಾ ಗುಲಾಟಿ ಕಳೆದೊಂದು ವರ್ಷದಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಇವರಿಬ್ಬರ ಹಾವ-ಭಾವಗಳನ್ನು ಕಂಡು ಇಬ್ಬರು ಮದುವೆಯಾಗುತ್ತಾರೆ ಎಂದೇ ಇವರ ಹಿಂಬಾಲಕರು ಅಂದುಕೊಂಡಿದ್ದರು. ಆದರೆ ಈ ಸಂಬಂಧ ಈ ವರ್ಷಾರಂಭದಲ್ಲಿ ಮುರಿದು ಬಿದ್ದಿದೆ. ಇದಕ್ಕೆ ಉದಿತ್ ಅವರ ಅನೈತಿಕ ಸಂಬಂಧವೇ ಕಾರಣ ಎಂದು ದೀಕ್ಷಾ ಆರೋಪ ಮಾಡಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಜನವರಿ 11ರಂದು ಮಾತನಾಡಿದ್ದ ದೀಕ್ಷಾ ನಾನು ಮನಸಾರೆ ಪ್ರೀತಿ ಮಾಡುತ್ತಿದ್ದೆ, ಇನ್ನೇನು ನನ್ನ ಹೆತ್ತವರ ಎದುರು ಮದುವೆ ವಿಷಯ ಪ್ರಸ್ತಾಪ ಮಾಡೋಣ ಎಂದುಕೊಂಡಿದ್ದೇ, ಆದರೆ ಉದಿತ್ ನನಗೆ ನಂಬಿಕೆ ದ್ರೋಹ ಮಾಡಿದ ಎಂದು ಹೇಳಿದ್ದರು. ನನ್ನ ಜೊತೆ ಸಂಬಂಧದಲ್ಲಿದ್ದಾಗ ಬೇರೆ ಹುಡುಗಿಯ ಜೊತೆ ಕೂಡ ಅವನಿಗೆ ಅಫೇರ್ ಇತ್ತು ಎಂದು ಬಿಕ್ಕಿದ್ದರು. ಅವನಿಗಾಗಿ ನಾನು ಎಲ್ಲವನ್ನೂ ಮಾಡಿದೆ, ಆದರೆ ಬದಲಾಗಿ ನನಗೆ ಸಿಕ್ಕಿದ್ದು ಮೋಸ ಮಾತ್ರ ಎಂದು ಒಂದಲ್ಲ.. ಎರಡಲ್ಲ.. ಹನ್ನೊಂದು ನಿಮಿಷ ಕಣ್ಣೀರು ಹಾಕಿದ್ದರು. ನನ್ನ ಖ್ಯಾತಿಯನ್ನು ಅವನ ಬೆಳವಣಿಗೆಗಾಗಿ ಮೆಟ್ಟಿಲನ್ನಾಗಿ ಬಳಸಿಕೊಂಡ ಎಂದು ಹೇಳಿದ್ದರು. ಆ ನಂತರ ವಿಡಿಯೋವನ್ನು ಡಿಲೀಟ್ ಕೂಡ ಮಾಡಿದರು.

ಆದರೆ ದೀಕ್ಷಾ ಅವರ ಈ ವಿಡಿಯೋ ನೋಡ ನೋಡುತ್ತಾ ವೈರಲ್ ಆಗಿತ್ತು. ಉದಿತ್ ವಿರುದ್ಧ ಆಕ್ರೋಶದ ಅಲೆ ಎದ್ದಿತ್ತು. ಹಲವರು ಉದಿತ್ ಅವರ ಮೇಲೆ ವ್ಯೆಯಕ್ತಿಕ ದಾಳಿ ಮಾಡಿದರು. ಟ್ರೋಲ್ ಮಾಡಿದರು. ಈ ಹಿನ್ನೆಲೆ ಜನವರಿ 13ರಂದು ಮತ್ತೊಮ್ಮೆ ಲೈವ್ ಬಂದ ದೀಕ್ಷಾ ನಮ್ಮ ವ್ಯೆಯಕ್ತಿಯ ವಿಷಯ ಮತ್ತು ವಿವಾದವನ್ನು ನಾವು ವ್ಯೆಯಕ್ತಿಕವಾಗಿ ಬಗೆಹರಿಸಿಕೊಂಡಿದ್ದೇವೆ ಎಂದು ಹೇಳಿದರು. ಉದಿತ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಬೇಡಿ ಅವರನ್ನು ಟ್ರೋಲ್ ಮಾಡಬೇಡಿ ಎಂದು ಮನವಿಯನ್ನು ಮಾಡಿಕೊಂಡರು. ನನ್ನ ಮನದ ನೋವು ನಿಮ್ಮ ಮನರಂಜನೆಯ ಸರಕಲ್ಲ, ಆ ಜೀವನದಿಂದ ಹೊರ ಬರಲು ಸತ್ಯ ಹೇಳಿದ್ದೇನೆ ಎಂದರು.
ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಉದಿತ್ ರಾಜ್‌ಪುತ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅತ್ಯಂತ ಖಾಸಗಿ ವಿಷಯವಾಗಿತ್ತು. ನಮ್ಮ ವ್ಯೆಯಕ್ತಿಕ ವಿಷಯ ಹೀಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದ್ದು ಬೇಸರ ಉಂಟು ಮಾಡಿದೆ ಎಂದು ಹೇಳಿರುವ ಉದಿತ್ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ನನ್ನ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನನ್ನ ಪಾಡಿಗೆ ಇರಲು ನನ್ನನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ. ಸದ್ಯ ಇವರಿಬ್ಬರ ಈ ಪ್ರೇಮ ಕತೆ ಮತ್ತು ವ್ಯಥೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೀಡಾಗಿದ್ದು ಹಲವರು ಪಬ್ಲಿಸಿಟಿ ಗಿಮಿಕ್ ಇರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











