For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ಇಂಡಿಯನ್ ರೆಸ್ಟೋರೆಂಟ್ ನಲ್ಲಿ ಉಡುಪಿಯ ಬಾಣಸಿಗ: ಮೆನುನಲ್ಲಿ ಏನಿದೆ?

  |

  ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅಮೆರಿಕದ ಸೊಸೆಯಾದ ಬಳಿಕ ನ್ಯೂಯಾರ್ಕ್ ನಲ್ಲೇ ನೆಲೆಸಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿರುವ ಪ್ರಿಯಾಂಕಾ ಇತ್ತೀಚಿಗೆ ಹಿಂದೂ ಸಂಪ್ರದಾಯ ಪ್ರಕಾರ ತನ್ನ ಹೊಸ ಮನೆಯ ಗೃಹ ಪ್ರವೇಶ ಮಾಡಿ ಎಲ್ಲರ ಗಮನ ಸೆಳೆದಿದ್ದರು.

  ಬಳಿಕ ನ್ಯೂ ಯಾರ್ಕ್ ನಲ್ಲಿ ಇಂಡಿಯನ್ ರೆಸ್ಟೋರೆಂಟ್ ಶುರು ಮಾಡುವ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅಮೇರಿಕದ ನೆಲದಲ್ಲಿ ಭಾರತಿಯ ಸಂಸ್ಕೃತಿ ಪಸರಿಸುತ್ತಿರುವ ಪ್ರಿಯಾಂಕಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಪ್ರಿಯಾಂಕಾ ರೆಸ್ಟೋರೆಂಟ್ ನ ಮೆನು ಏನಿದೆ ಎನ್ನುವ ಫೋಟೋಗಳು ಬಹಿರಂಗವಾಗಿದೆ. ಮುಂದೆ ಓದಿ..

  ಅರ್ಹತೆ ಪ್ರಶ್ನಿಸಿದ ಪತ್ರಕರ್ತನಿಗೆ ಪ್ರಿಯಾಂಕಾ ಚೋಪ್ರಾ ದಿಟ್ಟ ಉತ್ತರಅರ್ಹತೆ ಪ್ರಶ್ನಿಸಿದ ಪತ್ರಕರ್ತನಿಗೆ ಪ್ರಿಯಾಂಕಾ ಚೋಪ್ರಾ ದಿಟ್ಟ ಉತ್ತರ

  ಸೋನಾ ರೆಸ್ಟೋರೆಂಟ್ ನಲ್ಲಿ ಉಡುಪಿಯ ಬಾಣಸಿಗ

  ಸೋನಾ ರೆಸ್ಟೋರೆಂಟ್ ನಲ್ಲಿ ಉಡುಪಿಯ ಬಾಣಸಿಗ

  ಅಂದಹಾಗೆ ಪ್ರಿಯಾಂಕಾ ಅವರ ಸೋನಾ ರೆಸ್ಟೋರೆಂಟ್ ನಲ್ಲಿ ಭಾರತೀಯ ಶೈಲಿಯ ಆಹಾರ ಪದ್ದತಿಗಳಿವೆ. ದಕ್ಷಿಣ ಭಾರತದಿಂದ ಮತ್ತು ಉತ್ತರ ಭಾರತದವರೆಗಿನ ಆಹಾರ ಪದ್ದತಿ ಸೋನಾ ರೆಸ್ಟೋರೆಂಟ್ ನಲ್ಲಿ ಸಿಗಲಿದೆ. ವಿಶೇಷ ಎಂದರೆ ನ್ಯೂ ಯಾರ್ಕ್ ನಲ್ಲಿರುವ ಈ ಸೋನಾ ರೆಸ್ಟೋರೆಂಟ್ ನಲ್ಲಿ ಉಡುಪಿ ಮೂಲಕ ಖ್ಯಾತ ಬಾಣಸಿಗ ಕೆಲಸ ಮಾಡುತ್ತಿದ್ದಾರೆ.

  ಪ್ರಮುಖ ಬಾಣಸಿಗ ಹರಿ ನಾರಾಯಣ್

  ಪ್ರಮುಖ ಬಾಣಸಿಗ ಹರಿ ನಾರಾಯಣ್

  ಹರಿ ನಾರಾಯಣ್ ಸೋನಾ ರೆಸ್ಟೋರೆಂಟ್ ನ ಪ್ರಮುಖ ಬಾಣಸಿಗ. ಉಡುಪಿಯಲ್ಲಿ ಜನಿಸಿದ ಹರಿ ನಾರಾಯಣ್ ಅನೇಕ ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅನೇಕ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡಿರುವ ಹರಿ ನಾರಾಯಣ್ ಈಗ ಸೋನಾ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

  93ನೇ ಆಸ್ಕರ್: ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾ, ನಟ-ನಟಿಯರ ಪಟ್ಟಿ93ನೇ ಆಸ್ಕರ್: ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾ, ನಟ-ನಟಿಯರ ಪಟ್ಟಿ

  ಮೆನು ಹಂಚಿಕೊಂಡ ಹರಿ ನಾರಾಯಣ್

  ಮೆನು ಹಂಚಿಕೊಂಡ ಹರಿ ನಾರಾಯಣ್

  ಹರಿ ನಾರಾಯಣ್ ಸೋನಾ ರೆಸ್ಟೋರೆಂಟ್ ನ ಮೆನು ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೋಫ್ಟಾ ಕೂರ್ಮ, ಚಿಲ್ಲಿ ಚೀಸ್ ನಾನ್ ಸೇರಿದಂತೆ ಅನೇಕ ಖಾದ್ಯಗಳನ್ನು ಹಂಚಿಕೊಂಡಿದ್ದಾರೆ. ಹರಿ ನಾರಾಯಣ್ ಶೇರ್ ಮಾಡಿರುವ ಫೋಟೋಗಳು ನೋಡುಗರ ಬಾಯಲ್ಲಿ ನೀರೂರಿಸುತ್ತಿದೆ.

  ಅಹೋರಾತ್ರ ವಿರುದ್ಧ ಕಿಚ್ಚನ ಫ್ಯಾನ್ಸ್ ಕೊಟ್ಟಿರೋ ಕಂಪ್ಲೇಂಟ್ ಏನು? | Filmibeat Kannada
  ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

  ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

  ಇತ್ತೀಚಿಗೆ ರೆಸ್ಟೋರೆಂಟ್ ಪೂಜೆಯ ಫೋಟೋಗಳನ್ನು ಪ್ರಿಯಾಂಕಾ ಚೋಪ್ರಾ ಶೇರ್ ಮಾಡಿದ್ದರು. ಫೋಟೋ ಶೇರ್ ಮಾಡಿ, 'ಸೋನಾ ರೆಸ್ಟೋರಂಟ್ ಬಗ್ಗೆ ರೋಮಾಂಚನಗೊಂಡಿದ್ದೇನೆ. ನ್ಯೂ ಯಾರ್ಕ್ ನಲ್ಲಿ ಭಾರತೀಯ ಅಹಾರ ಪದ್ದತಿಯ ರೆಸ್ಟೋರೆಂಟ್ ಓಪನ್ ಮಾಡಿರುವುದು ತುಂಬಾ ಹೆಮ್ಮೆಯಾಗುತ್ತಿದೆ. ಸೋನಾ ನನ್ನ ಕನಸು. ರೆಸ್ಟೋರೆಂಟ್ ಕಿಚನ್ ಪ್ರಮುಖ ಬಾಣಸಿಗ ಹರಿನಾಯಕ್ ಎನ್ನುವವರು ನೋಡಿಕೊಳ್ಳುತ್ತಿದ್ದಾರೆ. ಅತ್ಯಂತ ರುಚಿಕರವಾದ ಮತ್ತು ನವೀನ ಮೆನುವನ್ನು ರಚಿಸಲಾಗಿದೆ' ಎಂದು ಬರೆದುಕೊಂಡಿದ್ದರು.

  English summary
  Udupi based Hari Narayana is maine chef of Priyanka Chopra's sona restaurant.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X