ಸನ್ನಿ ಲಿಯೋನ್ ಚಿತ್ರೀಕರಣ ಸೆಟ್‌ನಲ್ಲಿ ಗಲಾಟೆ: ವ್ಯಾನಿಟಿ ವ್ಯಾನ್ ಸೇರಿಕೊಂಡ ನಟಿ
ಸನ್ನಿ ಲಿಯೋನ್ ಯಾಕೋ ಟೈಮೇ ಸರಿಯಿದ್ದಂತಿಲ್ಲ್. ಮೊನ್ನೆಯಷ್ಟೆ ಕೇರಳಕ್ಕೆ ಚಿತ್ರೀಕರಣಕ್ಕೆ ಹೋಗಿದ್ದಾಗ ಪೊಲೀಸರು ಬಂದು ವಿಚಾರಣೆ ನಡೆಸಿದರು. ಈಗ ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ಗೆ ನುಗ್ಗಿದ ಜನ ಜೋರು ಗಲಾಟೆ ಮಾಡಿದ್ದಾರೆ.
ಆಗಿದ್ದಿಷ್ಟು, ಸನ್ನಿ ಲಿಯೋನ್ ನಟಿಸುತ್ತಿರುವ 'ಅನಾಮಿಕಾ' ವೆಬ್ ಸರಣಿಯ ಚಿತ್ರೀಕರಣ ನಡೆಯುತ್ತಿರುವ ಜಾಗಕ್ಕೆ ಬಂದ 'ಫೈಟರ್ಸ್ ಅಸೋಸಿಯೇಷನ್'ನ ಕೆಲವರು ಸೆಟ್‌ನಲ್ಲಿ ಜಗಳ ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ತೀವ್ರ ಹಂತಕ್ಕೆ ಹೋಗಿದೆ. ಕೂಡಲೇ ಸನ್ನಿ ಲಿಯೋನ್ ಅನ್ನು ಆಕೆಯ ವ್ಯಾನಿಟಿ ವ್ಯಾನ್‌ನಲ್ಲಿ ಕೂರಿಸಿ, ಅಲ್ಲಿಂದ ದೂರ ಕರೆದು ಹೋಗಲಾಗಿದೆ.
'ಅನಾಮಿಕ' ವೆಬ್ ಸರಣಿ ನಿರ್ದೇಶನ ಮಾಡುತ್ತಿರುವ ವಿಕ್ರಂ ಭಟ್ ವಿರುದ್ಧ ಫೈಟರ್ಸ್ ಅಸೋಸಿಯೇಷನ್ ಸದಸ್ಯರು ಸಿಟ್ಟಾಗಿದ್ದು, ವಿಕ್ರಂ ವಿರುದ್ಧ ಪ್ರತಿಭಟನೆ ನಡೆಸಲೆಂದು ಅವರುಗಳು ಗುಂಪು ಕಟ್ಟಿಕೊಂಡು ಶೂಟಿಂಗ್ ಸೆಟ್‌ಗೆ ಬಂದಿದ್ದರು.

ಫೈಟರ್ಸ್ ಅಸೋಸಿಯೇಷನ್ ನವರ ಗಲಾಟೆ
ಸಾಹಸ ನಿರ್ದೇಶಕ ಅಬ್ಬಾಸ್ ಅಲಿ ಮುಘಲ್ ಗೆ ನಿರ್ದೇಶಕ ವಿಕ್ರಂ ಭಟ್ ಸುಮಾರು 38 ಲಕ್ಷ ಸಂಭಾವನೆ ಬಾಕಿ ಉಳಿಸಿಕೊಂಡಿದ್ದು ಶೀಘ್ರವೇ ಆ ಹಣವನ್ನು ನೀಡಬೇಕು ಎಂದು ಫೈಟರ್ಸ್ ಅಸೋಸಿಯೇಷನ್ ಸದಸ್ಯರು ಗಲಾಟೆ ಆರಂಭಿಸಿದ್ದಾರೆ.

14 ಲಕ್ಷ ಹಣ ನೀಡಿದ ವಿಕ್ರಂ ಭಟ್
ಅಸೋಸಿಯೇಷನ್ ಸದಸ್ಯರ ಒತ್ತಾಯಕ್ಕೆ ಮಣಿದು ವಿಕ್ರಂ ಭಟ್ 14 ಲಕ್ಷ ಹಣವನ್ನು ಅಬ್ಬಾಸ್ ಅಲಿ ಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರೀಕರಣದ ಲೊಕೇಶನ್ ಅನ್ನು ಸಹ ಬದಲಾಯಿಸಿದ್ದಾರೆ.

ಆತನದ್ದು ರೌಡಿ ವ್ಯಕ್ತಿತ್ವ: ವಿಕ್ರಂ ಭಟ್
ಈ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ವಿಕ್ರಂ ಭಟ್, ನಾನು ಅಬ್ಬಾಸ್ ಗೆ ಹಣ ನೀಡಿದ್ದೇನೆ. ನಾನು ನೀಡಿರುವ ಚೆಕ್‌ಗಳ ಚಿತ್ರಗಳು ನನ್ನ ಬಳಿ ಇವೆ. ನಾನು ಅಬ್ಬಾಸ್‌ಗೆ 38 ಲಕ್ಷ ನೀಡಬೇಕಾಗಿಲ್ಲ. ಆತನ ರೌಡಿ ವರ್ತನೆ ಯಿಂದಾಗಿ ಇಡೀಯ ಚಿತ್ರರಂಗದಲ್ಲಿ ಯಾರೂ ಸಹ ಅಬ್ಬಾಸ್ ಜೊತೆ ಕೆಲಸ ಮಾಡಲು ಇಷ್ಟಪಡುತ್ತಿಲ್ಲ್ ಎಂದಿದ್ದಾರೆ ವಿಕ್ರಂ ಭಟ್.
Recommended Video

ಕೇರಳಕ್ಕೆ ಹೋಗಿದ್ದಾಗ ಪೊಲೀಸರಿಂದ ಸನ್ನಿ ವಿಚಾರಣೆ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಬ್ಬಾಸ್, ನಾನು ಫೈಟರ್ಸ್ ಅಸೋಸಿಯೇಷನ್‌ಗೆ ದೂರು ನೀಡಿದ್ದೇನೆ. ಈ ಬಗ್ಗೆ ಅವರು ನಿರ್ಣಯ ಕೈಗೊಳ್ಳುತ್ತಾರೆ ಎಂದಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ನಟಿ ಸನ್ನಿ ಲಿಯೋನ್ ಕೇರಳಕ್ಕೆ ಹೋಗಿದ್ದಾಗ, ಅಲ್ಲಿನ ಪೊಲೀಸರು, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸನ್ನಿ ಲಿಯೋನ್ ರ ವಿಚಾರಣೆ ನಡೆಸಿದ್ದರು.


Click it and Unblock the Notifications











