For Quick Alerts
  ALLOW NOTIFICATIONS  
  For Daily Alerts

  'ಒಂದು ಮೊಟ್ಟೆಯ ಕಥೆ' ಹಿಂದಿ ರೀಮೇಕ್ ಚಿತ್ರಕ್ಕೆ ಪ್ರೇಕ್ಷಕರ ಕೊರತೆ

  |

  'ಒಂದು ಮೊಟ್ಟೆಯ ಕಥೆ' ಸಿನಿಮಾ ಕನ್ನಡದಲ್ಲಿ ಸೂಪರ್ ಹಿಟ್ ಆಗಿತ್ತು. ಆದರೆ, ಇದೇ ಸಿನಿಮಾ ಹಿಂದಿ ಪ್ರೇಕ್ಷಕರ ಕೊರತೆಯನ್ನು ಎದುರಿಸುತ್ತಿದೆ.

  'ಉಜ್ಡಾ ಚಮನ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕ ವರ್ಗ ಕಡಿಮೆ ಆಗುತ್ತದೆ. ಪರಿಣಾಮ ಸಿನಿಮಾ ಕಲೆಕ್ಷನ್ ನಲ್ಲಿ ಇಳಿಮುಖ ಆಗುತ್ತಿದೆ. ವಾರಾಂತ್ಯದಲ್ಲಿ ಸಾಧಾರಣ ಮೊತ್ತ ಕಲೆಹಾಕಿದ್ದ ಸಿನಿಮಾಗೆ ಸೋಮವಾರ ಮೇಲೆ ಏಳಲು ಆಗಲಿಲ್ಲ.

  ಕನ್ನಡ ಚಿತ್ರಕ್ಕೆ ಹೋಲುತ್ತಿದೆ ಹಿಂದಿ ಸಿನಿಮಾದ ಪೋಸ್ಟರ್ಕನ್ನಡ ಚಿತ್ರಕ್ಕೆ ಹೋಲುತ್ತಿದೆ ಹಿಂದಿ ಸಿನಿಮಾದ ಪೋಸ್ಟರ್

  ಮೊದಲ ದಿನ 2.35 ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ ಸದ್ಯಕ್ಕೆ, 8.05 ಕೋಟಿ ಗಳಿಸಿದೆ. ಸಿನಿಮಾ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿದ್ದು, ಚಿತ್ರತಂಡಕ್ಕೆ ದೊಡ್ಡ ಮಟ್ಟದ ಒತ್ತಡ ಆಗುವುದಿಲ್ಲ. ಯಾಕೆಂದರೆ, ಕೇವಲ 1 ಕೋಟಿಯಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.

  'ಬಾಲ' ಸಿನಿಮಾ 'ಉಜ್ಡಾ ಚಮನ್'ಗೆ ಪೈಪೋಟಿ ನೀಡುತ್ತಿವೆ. ಈ ಎರಡು ಸಿನಿಮಾಗಳು ಒಂದೇ ವಿಷಯದ ಮೇಲೆ ಇದೆ. ಒಂದೇ ಸಮಯದಲ್ಲಿ ಎರಡು ಸಿನಿಮಾಗಳು ಬಂದ ಕಾರಣ ಅವರ ಪರಿಣಾಮ 'ಉಜ್ಡಾ ಚಮನ್' ಮೇಲೆ ಬಿದ್ದಿದೆ. 'ಬಾಲ' ಸಿನಿಮಾ ನವೆಂಬರ್ 7 ರಂದು ಬಿಡುಗಡೆ ಆಗುತ್ತಿದೆ.

  ಕನ್ನಡದಲ್ಲಿ ರಾಜ್ ಬಿ ಶೆಟ್ಟಿ, ಕಥೆ ಬರೆದು, ನಿರ್ದೇಶನ ಮಾಡಿ, ಹೀರೋ ಆಗಿ ನಟಿಸಿದ್ದರು. ರಾಜ್ ಬಿ ಶೆಟ್ಟಿ ಪಾತ್ರದಲ್ಲಿ ಸನ್ನಿ ಸಿಂಗ್ ಕಾಣಿಸಿಕೊಂಡಿದ್ದಾರೆ.

  English summary
  Ujda Chaman drops in box office collection.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X