ನಿಕೃಷ್ಟ ಸ್ಥಿತಿಯಲ್ಲಿ ನಟ ಇರ್ಫಾನ್ ಖಾನ್ ಸಮಾಧಿ: ಪತ್ನಿ ಕೊಟ್ಟ ಕಾರಣವೇನು?

ಖ್ಯಾತ ನಟ ಇರ್ಫಾನ್ ಖಾನ್ ಅಭಿಮಾನಿಗಳನ್ನಗಲಿ ಕೆಲವು ತಿಂಗಳಷ್ಟೆ ಆಗಿವೆ. ಇರ್ಫಾನ್ ಅಗಲಿದಾಗ ಆತನನ್ನು ಹೊಗಳಿದ ಜನ, ಮಾಧ್ಯಮಗಳು, ಕುಟುಂಬ ದಿನಗಳು ಕಳೆಯುತ್ತಿದ್ದಂತೆ, ಇರ್ಫಾನ್ ಅನ್ನು ಮರೆತುಬಿಟ್ಟರೆ ಎಂಬ ಅನುಮಾನ ಎದ್ದಿದೆ.

ಹೌದು, ನಟ ಇರ್ಫಾನ್ ಖಾನ್ ಅವರ ಸಮಾಧಿ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದೆ. ಸ್ವಚ್ಛಗೊಳಿಸದೆ, ಸಮಾಧಿಯನ್ನು ಭದ್ರವೂ ಮಾಡದೆ ಬೇಕಾ-ಬಿಟ್ಟಿಯಾಗಿ ಬಿಡಲಾಗಿದೆ. ಇರ್ಫಾನ್ ಸಮಾಧಿ ಸುತ್ತ ಕಳೆ ಬೆಳೆದು ಕೆಟ್ಟದಾಗಿ ಕಾಣುತ್ತಿದೆ ಸಮಾಧಿ.

ಇರ್ಫಾನ್ ಸಮಾಧಿಯ ಕೆಟ್ಟ ಸ್ಥಿತಿಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ವೈರಲ್ ಆಗುತ್ತಿದೆ. ತಮ್ಮ ಅಭಿಮಾನದ ನಟನ ಸಮಾಧಿಗೆ ಇಂಥಹಾ ಸ್ಥಿತಿ ಒದಗಿದ್ದಕ್ಕೆ ಅಭಿಮಾನಿಗಳು ಅವರ ಕುಟುಂಬದವರನ್ನು, ಪತ್ನಿ ಸುತಾಪಾರನ್ನು ಪ್ರಶ್ನೆ ಮಾಡಿದ್ದಾರೆ.

ಇರ್ಫಾನ್ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ

ಇರ್ಫಾನ್ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ

ಇರ್ಫಾನ್ ಖಾನ್ ಸಮಾಧಿಗೆ ಭೇಟಿ ಕೊಟ್ಟಿದ್ದವರೊಬ್ಬರು, ಇರ್ಫಾನ್ ಪತ್ನಿ ಸುತಾಪಾಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದು, 'ಸಮಾಧಿಯ ಮೇಲೆ ರಾತ್‌ ಕೀ ರಾಣಿ' ಗಿಡ ನೆಟ್ಟುದಾಗಿ ಹೇಳಿದ್ದರಿ, ಅದು ಎಲ್ಲಿದೆ, ಸಮಾಧಿಯನ್ನು ಏಕೆ ಯಾರೂ ನೋಡಿಕೊಳ್ಳುತ್ತಿಲ್ಲ, ಏಕೆ ಇಷ್ಟು ಬೇಜವಾಬ್ದಾರಿ?' ಎಂದು ಪ್ರಶ್ನಿಸಿದ್ದಾರೆ.

'ಮಹಿಳೆಯರನ್ನು ಮಸೀದಿ ಒಳಗೆ ಬಿಡುವುದಿಲ್ಲ, ಹಾಗಾಗಿ ನಾನು ಹೋಗಿಲ್ಲ'

'ಮಹಿಳೆಯರನ್ನು ಮಸೀದಿ ಒಳಗೆ ಬಿಡುವುದಿಲ್ಲ, ಹಾಗಾಗಿ ನಾನು ಹೋಗಿಲ್ಲ'

ಕಾರಣ ನೀಡಿರುವ ಸುತಾಪಾ, 'ಮಹಿಳೆಯರನ್ನು ಮಸೀದಿಯ ಒಳಗೆ ಬಿಡುವುದಿಲ್ಲ, ಹಾಗಾಗಿ ನಾನು ಇರ್ಫಾನ್ ಸಮಾಧಿಗೆ ಹೋಗಿಲ್ಲ. ಹಾಗೂ ನಾನು ರಾತ್‌ ಕೀ ರಾಣಿ ಗಿಡ ನೆಟ್ಟದ್ದು, ನಾನು ಇರ್ಫಾನ್‌ನ ನೆನಪಿಗಾಗಿ ನನ್ನದೇ ಜಮೀನಿನಲ್ಲಿ ನೆಟ್ಟಿದ್ದೇನೆ, ಅಲ್ಲಿ ನಾನು ಗಿಡ ನೆಟ್ಟಿದ್ದೇನೆ, ಅಲ್ಲಿ ಯಾರ ಅಂಜಿಕೆ ಇಲ್ಲದೆ ಗಂಟೆಗಳ ನಾನು ಕೂತಿರುತ್ತೇನೆ' ಎಂದಿದ್ದಾರೆ.

'ಮಳೆಯ ಕಾರಣ ಕಳೆ ಗಿಡಗಳು ಬೇಗ ಬೆಳೆಯುತ್ತಿವೆ'

'ಮಳೆಯ ಕಾರಣ ಕಳೆ ಗಿಡಗಳು ಬೇಗ ಬೆಳೆಯುತ್ತಿವೆ'

ಇನ್ನು ಸಮಾಧಿ ಸುತ್ತ ಕಳೆ ಬೆಳೆದಿರುವ ಬಗ್ಗೆ ಮಾತನಾಡಿದ ಸಫಾ, 'ಸಮಾಧಿಯನ್ನು ನೋಡಿಕೊಳ್ಳತ್ತಲೇ ಇದ್ದೇವೆ. ಆದರೆ ಮಳೆ ಬರುತ್ತಿರುವ ಕಾರಣ ಆ ಕಳೆ ಗಿಡಗಳು ಬಹುಬೇಗನೆ ಬೆಳೆಯುತ್ತಿವೆ. ಅವುಗಳನ್ನು ಸ್ವಚ್ಛ ಮಾಡಿದರೂ ಮತ್ತೆ-ಮತ್ತೆ ಬರುತ್ತವೆ' ಎಂದಿದ್ದಾರೆ ಸುತಾಪಾ.

Recommended Video

ಸಚಿವರ ಕೆಟ್ಟ ಅಂತ್ಯಕ್ರಿಯೆ ನೋಡಿ ಕಂಬನಿ ಮಿಡಿದ ಜಗ್ಗೇಶ್ | Filmibeat Kannada
ಯಾವುದೋ ಉದ್ದೇಶಕ್ಕೆ ಬೆಳೆದಿರಬಹುದು: ಸುತಾಫಾ

ಯಾವುದೋ ಉದ್ದೇಶಕ್ಕೆ ಬೆಳೆದಿರಬಹುದು: ಸುತಾಫಾ

'ಎಲ್ಲವೂ ನಿಯಮಬದ್ಧವಾಗಿಯೇ ಇರಬೇಕೆಂದು ಏಕೆ ಬಯಸುತ್ತೀರಿ. ಆ ಕಳೆಯ ಗಿಡಗಳು ಯಾವುದೋ ಉದ್ದೇಶಕ್ಕಾಗಿ ಬೆಳೆದಿರಬಹುದು ಒಮ್ಮೆ ಚಿತ್ರವನ್ನು ಗಮನವಿಟ್ಟು ನೋಡಿ' ಎಂದಿದ್ದಾರೆ ಸುತಾಪಾ.

More from Filmibeat

English summary
Irrfan Khan's grave is in bad state. Seems its been unattended, Netizen ask Sutapa for answer. She gave clarification.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X