»   » ಚಿತ್ರಗಳು: 8 ದಿನದ ಪುಟ್ಟ ಅಳಿಯನಿಗೆ ಸಲ್ಲು ಕೊಟ್ರು ದುಬಾರಿ ಗಿಫ್ಟ್

ಚಿತ್ರಗಳು: 8 ದಿನದ ಪುಟ್ಟ ಅಳಿಯನಿಗೆ ಸಲ್ಲು ಕೊಟ್ರು ದುಬಾರಿ ಗಿಫ್ಟ್

Posted By:
Subscribe to Filmibeat Kannada

ಬಾಲಿವುಡ್ ನ ಬಾಕ್ಸಾಫೀಸ್ ಕಿಂಗ್ ಸಲ್ಮಾನ್ ಖಾನ್ ಅವರು ಮಾವ ಆದ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇದೀಗ ಅದೇ ಖುಷಿಯಲ್ಲಿ ಬಾಲಿವುಡ್ ನಟ ಭಾಯ್ ಜಾನ್ ಅವರು ತಮ್ಮ ಮುದ್ದಾದ 8 ದಿನಗಳ ಪುಟ್ಟ ಅಳಿಯನಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ.

ಹೌದು ನಟ ಸಲ್ಮಾನ್ ಖಾನ್ ಅವರು ಪುಟ್ಟ ಅಳಿಯ ಆಹಿಲ್ ಗೆ ಬರೋಬ್ಬರಿ 1.1 ಕೋಟಿ ರೂ ಬೆಲೆಬಾಳುವ ಕಪ್ಪು ಬಣ್ಣದ ಬಿಎಂಡಬ್ಲ್ಯೂ 7 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಈ ಕಾರನ್ನು ಅರ್ಪಿತಾ ಅವರು ಅಣ್ಣ ಸಲ್ಮಾನ್ ಅವರ ಮನೆಗೆ ಬರುವ ಸಂದರ್ಭದಲ್ಲಿ ನೀಡಲಿದ್ದಾರಂತೆ.[ಫೋಟೋಗಳಲ್ಲಿ...ಬಾಲಿವುಡ್ ನ 'ಮಾಮುಜಾನ್' ಆದ ಸಲ್ಮಾನ್ ಖಾನ್.!]

Uncle Salman Khan gifts a swanky new car to baby Ahil

ಭಾಯ್ ಜಾನ್ ನಿಂದ ಮಾಮುಜಾನ್ ಆಗಿ ಭಡ್ತಿ ಪಡೆದ ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಖಾನ್ ಅವರು ಮಾರ್ಚ್ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಸಲ್ಲು ಮುದ್ದಾದ ಅಳಿಯನಿಗೆ ದುಬಾರಿ ಉಡುಗೊರೆ ನೀಡಿದ್ದಾರೆ.[ಸಲ್ಮಾನ್ ರೀಮೇಕ್ ಮಾಡುತ್ತಿರುವ ಕನ್ನಡದ ಚಿತ್ರ ಯಾವುದು?]

ತಂಗಿಯನ್ನು ತುಂಬಾ ಪ್ರೀತಿಸುವ ಭಾಯ್ ಜಾನ್ ಈ ಹಿಂದೆ ಅರ್ಪಿತಾ ಖಾನ್ ಮತ್ತು ಆಯುಷ್ ಶರ್ಮಾ ಅವರ 3 ದಿನಗಳ ಮದುವೆಗೆ ಸುಮಾರು 3 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಅಲ್ಲದೇ ಅರ್ಪಿತಾಗೆ 16 ಕೋಟಿ ರೂಪಾಯಿ ಭಾರಿ ಮೊತ್ತದ ದುಬಾರಿ ಫ್ಲಾಟ್ ಮತ್ತು 8 ಕೋಟಿ ಬೆಲೆಬಾಳುವ ರೋಲ್ಸ್ ರಾಯ್ಸ್ ಪ್ಯಾಂತಮ್ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದರು.[ಬಾಲಿವುಡ್ ನ ಟಾಪ್ 10 ಶ್ರೀಮಂತರು ಇವರೇ ಸ್ವಾಮಿ]

ಸಲ್ಮಾನ್ ಖಾನ್ ಅವರ ಮುದ್ದಾದ ಅಳಿಯ ಆಹಿಲ್, ಸೂಪರ್ ಮ್ಯಾನ್ ಬೇಬಿ ಸೂಟ್ ಧರಿಸಿ ಬೆಚ್ಚಗೆ ನಿದ್ರೆ ಹೋಗುತ್ತಿರುವ ಫೊಟೋ ಗ್ಯಾಲರಿ ನೋಡಲು ಸ್ಲೈಡುಗಳನ್ನು ಕ್ಲಿಕ್ಕಿಸಿ...

-
-
-
-
-
-
-
-
-
-
-
-
-
-
English summary
Hindi Actor Salman Khan's Sister Arpita Khan delivered a baby boy recently. Arpita and Aayush named their little prince as Ahil. Salman has now gifted a swanky luxurious car to Arpita Khan as a token of celebration on the birth of Ahil.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada