ಕೇಂದ್ರ ಸಚಿವೆ ಸ್ಮೃತಿ ಇರಾನಿ 'ಮಿಸ್ ಇಂಡಿಯಾ' ಸ್ಪರ್ಧೆಯಲ್ಲಿ ಭಾಗವಹಿಸಿದ ಹಳೆಯ ವಿಡಿಯೋ ವೈರಲ್
ರಾಜಕೀಯ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಿರುವ ಮಾಜಿ ನಟಿ ಮತ್ತು ರೂಪದರ್ಶಿ ಸ್ಮೃತಿ ಇರಾನಿ ಅವರ ರ್ಯಾಂಪ್ ವಾಕ್ ವಿಡಿಯೋ ವೈರಲ್ ಆಗಿದೆ. ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವೆಯಾಗಿ ಕೆಲಸ ನಿರ್ವಹಿಸುತ್ತಿರುವ ಸ್ಮೃತಿ, ಅವರ ಹಳೆಯ ವಿಡಿಯೋ ಅಂದರೆ ಸುಮಾರು 22 ವರ್ಷದ ಹಿಂದಿನದ್ದು ಇದಾಗಿದೆ.
ಸಚಿವೆ ಸ್ಮೃತಿ ಇರಾನಿ ಕಿರುತೆರೆ ನಟಿಯಾಗಿ ಮತ್ತು ಮಾಡಲಿಂಗ್ ಕ್ಷೇತ್ರದಲ್ಲಿ ಖ್ಯಾತಿಗಳಿಸಿದ್ದರು. ಕಿರುತೆರೆ ಮೂಲಕ ಎಲ್ಲರ ಮನೆಮಾತಾಗಿದ್ದ ಸ್ಮೃತಿ ಇಂದು ಖ್ಯಾತ ರಾಜಕಾರಣಿಯಾಗಿ ಎಲ್ಲರ ಗಮನ ಸಳೆಯುತ್ತಿದ್ದಾರೆ. ಸ್ಮೃತಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ...

1998ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆ
1998ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯ ವಿಡಿಯೋವಿದು. ಈ ಸ್ಪರ್ಧೆಯಲ್ಲಿ ಸ್ಮೃತಿ ಇರಾನಿ ಸಹ ಭಾಗವಹಿಸಿದ್ದರು. ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತೆ ಆಗದಿದ್ದರು, ಎಲ್ಲರ ಗಮನ ಸೆಳೆದಿದ್ದರು. ವಿಶೇಷ ಅಂದರೆ ಅವತ್ತೆ ಅವರು ರಾಜಕೀಯ ಆಸಕ್ತಿಯ ಬಗ್ಗೆಯು ಹೇಳಿಕೊಂಡಿದ್ದರು. ಅದರಂತೆ ಇಂದು ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದು, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಏಕ್ತಾ ಕಪೂರ್ ಶೇರ್ ಮಾಡಿರುವ ವಿಡಿಯೋ
ಅಂದ್ಹಾಗೆ ಈ ವಿಡಿಯೋವನ್ನು ಹಿಂದಿ ಕಿರುತೆರೆಯ ಖ್ಯಾತ ನಿರ್ಮಾಪಕಿ ಏಕ್ತ ಕಪೂರ್ ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಏಕ್ತ ಕಪೂರ್ ಮತ್ತು ಸ್ಮೃತಿ ಇರಾನಿ ಇಬ್ಬರು ಉತ್ತಮ ಸ್ನೇಹಿತರು. ಸ್ನೇಹಿತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವಿಡಿಯೋ ಹಂಚಿಕೊಂಡಿದ್ದಾರೆ.

ಸ್ನೇಹಿತೆ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದ ಏಕ್ತಾ
ಸ್ಮಿೃತಿ ಇರಾನಿ ಬಗ್ಗೆ ಮೆಚ್ಚುಗೆ ಪೋಸ್ಟ್ ಎಂದು ಬರೆದುಕೊಂಡಿರುವ ಏಕ್ತಾ, "ಯಶಸ್ಸು ಸುಲಭ ಎಂದು ಭಾವಿಸುವ ಜನರಿಗೆ ಇದು. ಇದು ಕಷ್ಟ, ಕಠಿಣ ಆದರೆ ಕಷ್ಟಪಟ್ಟು ಕೆಲಸ ಮಾಡುವ ಎಲ್ಲರಿಗೂ ಇದು ಬರುತ್ತೆ. ಸ್ಮೃತಿ ಮನೆಯ ಹೆಸರಾದರು. ಇಂದು ಮತ್ರಿಯಾಗಿದ್ದಾರೆ. ಇವರ ಇಡೀ ವ್ಯಕ್ತಿತ್ವವು ಪ್ರಭಲ ಮತ್ತು ವಿನಮ್ರ ರಾಜಕಾರಣಿಯಾಗಿ ಬದಲಾಗಿಸಿದೆ" ಎಂದಿದ್ದಾರೆ.

ನನ್ನ ಸ್ನೇಹಿತಿ ಬಗ್ಗೆ ನನಗೆ ಹೆಮ್ಮೆ
"ಬಾಲಾಜಿಗೆ ಎಂಟ್ರಿ ಕೊಟ್ಟಾಗ ತುಂಬಾ ಸೌಮ್ಯ, ನಾಚಿಕೆ ಮತ್ತು ಸರಳ ಹುಡುಗಿಯಾಗಿದ್ದರು. ಅವರ ನಗು ಎಲ್ಲರ ಹೃದಯ ಗೆಲ್ಲುತ್ತೆ. ಇಂದಿಗೂ ಅವರು ತನ್ನ ಜೊತೆ ಕೆಲಸ ಮಾಡುತ್ತಿದ್ದರ ಜನರ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಈ ನಮ್ರತೆ ಅವಳನ್ನು ಅದ್ಭುತ ವ್ಯಕ್ತಿಯಾಗಿ ಮಾಡುತ್ತೆ. ನನ್ನ ಸ್ನೇಹಿತೆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ" ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.


Click it and Unblock the Notifications