ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆ ಮೇಲೆ ಬಾಂಬ್ ಬೆದರಿಕೆ ಕರೆ!

ಬಾಲಿವುಡ್‌ನ ಮೇರು ನಟ ಅಮಿತಾಬ್ ಬಚ್ಚನ್ ಹಾಗೂ ಧರ್ಮೇಂದ್ರ ಮನೆ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಕರೆಯೊಂದು ಬಂದಿರುವುದು ಇದೀಗ ಆತಂಕ ಸೃಷ್ಟಿಸಿದೆ. ನಾಗಪುರದ ಪೊಲೀಸ್ ಠಾಣೆಯೊಂದಕ್ಕೆ ಈ ಕರೆ ಬಂದಿದ್ದು, ಅಮಿತಾಬ್ ಬಚ್ಚನ್, ಧರ್ಮೇಂದ್ರ ಮಾತ್ರವಲ್ಲದೇ ಮುಖೇಶ್ ಅಂಬಾನಿ ಮನೆ ಮೇಲೂ ಸಹ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ.

ಮುಖೇಶ್ ಅಂಬಾನಿ ಒಡೆತನದ ಎಂಟಿಲಿಯಾ ಬಂಗಲೆ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಹೇಳಿದ ಅನಾಮಧ್ಯೇಯ ಅಮಿತಾಬ್ ಬಚ್ಚನ್ ಮನೆ ಹಾಗೂ ಧರ್ಮೇಂದ್ರ ಮನೆ ಮೇಲೆ ಸಹ ಬಾಂಬ್ ದಾಳಿ ನಡೆಸುತ್ತೇವೆ ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಮುಂಬೈ ಹಾಗೂ ದಡರ್‌ಗೆ ತಮ್ಮ ಕಡೆಯ ಸುಮಾರು 25 ಜನರು ಬಂದಿಳಿದಿದ್ದು ದೇಶದ ವ್ಯವಹಾರಿಕ ರಾಜಧಾನಿಯಾದ ಮುಂಬೈನಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಯೋಜನೆ ನಡೆದಿದೆ ಎಂದಿದ್ದಾನೆ.

Unknown caller threatens to blast Amitabh Bachchan, Dharmendra and Mukesh Ambani houses

ಈ ಬೆದರಿಕೆ ಕರೆ ಬಂದ ಕೂಡಲೇ ನಾಗಪುರ ಪೊಲೀಸರು ಮುಂಬೈ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇನ್ನು ಮುಂಬೈ ಪೊಲೀಸರು ಕರೆ ಮಾಡಿದವರಾರು ಎಂಬುದನ್ನು ಪತ್ತೆ ಹಚ್ಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇನ್ನು ಈ ಕರೆಯನ್ನು ಹುಸಿ ಬಾಂಬ್ ಕರೆ ಎಂದು ಪರಿಗಣಿಸುವುದು ತೀರಾ ಕಷ್ಟ. ಏಕೆಂದರೆ 2021ರಲ್ಲಿ ಇದೇ ರೀತಿ ಮುಂಬೈ ರೈಲು ನಿಲ್ದಾಣದಲ್ಲಿ ಹಾಗೂ ಅಮಿತಾಬ್ ಬಚ್ಚನ್ ಮನೆಯಲ್ಲಿ ಬಾಂಬ್ ದಾಳಿ ನಡೆಯಲಿದೆ ಎಂದು ಕರೆ ಮಾಡಿದವರನ್ನು ಬಂಧಿಸಲಾಗಿತ್ತು.

ಇದಾದ ಕೆಲ ದಿನಗಳ ಬೆನ್ನಲ್ಲೇ ಮುಖೇಶ್ ಅಂಬಾನಿ ಮನೆ ಬಳಿ ಎಸ್‌ಯುವಿ ಕಾರೊಂದರಲ್ಲಿ ಜಿಲಾಟಿನ್ ಸ್ಟಿಕ್‌ಗಳು ಸಿಕ್ಕಿದ್ದವು. ಹೀಗಾಗಿ ಈ ಬಾರಿಯ ಕರೆಯನ್ನು ತುಸು ಗಂಭೀರವಾಗಿಯೇ ಪರಿಗಣಿಸಿರುವ ಮುಂಬೈ ಪೊಲೀಸರು ಎಚ್ಚರ ವಹಿಸಿದ್ದಾರೆ. ಇನ್ನು ಪದೇ ಪದೇ ಅಮಿತಾಬ್ ಬಚ್ಚನ್ ಮನೆ ಮೇಲೆ ಬಾಂಬ್ ದಾಳಿ ನಡೆಸುತ್ತೇವೆ ಎಂದು ಕರೆ ಬರುತ್ತಿರುವುದು ಬಿಗ್ ಬಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

More from Filmibeat

English summary
Unknown caller threatens to blast Amitabh Bachchan, Dharmendra and Mukesh Ambani houses. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X