28 ವರ್ಷದಿಂದ ಅಜ್ಞಾತವಾಸದಲ್ಲಿರುವ ಮಿಸ್ ಇಂಡಿಯಾ ; ಎಲ್ಲಿದ್ದಾರೆ ಅಂದಕಾಲತ್ತಿಲ್ ನ ಬಿಟೌನ್ ಬ್ಯೂಟಿ ಸೋನು ವಾಲಿಯಾ..?

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ಪ್ರತಿಭೆ ಇದ್ದೋರಿಗೆ ಪ್ರತಿಫಲ ಕಟ್ಟಿಟ್ಟ ಬುತ್ತಿ. ಆದರೆ ಯಾರು ಎಷ್ಟು ದಿನ ಈ ರಂಗೀನ್ ಲೋಕದಲ್ಲಿ ಉಳೀತಾರೆ ಅನ್ನೋದನ್ನ ಮಾತ್ರ ನಾವು ಹೇಳೋಕಾಗಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಸೋನು ವಾಲಿಯಾ

ಸೋನು ವಾಲಿಯಾ, ಒಂದ್ಕಾಲದಲ್ಲಿ ಮಿಸ್ ಇಂಡಿಯಾ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದ ನಟಿ. ತನ್ನ ಸೌಂದರ್ಯದಿಂದನೇ ಆ ಕಾಲದಲ್ಲಿ ಹಿಂದಿ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದ ಖ್ಯಾತಿ ಇವರದ್ದು. ಹೆಚ್ಚು ಕಡಿಮೆ ಆರು ಅಡಿ ಎತ್ತರ ಇದ್ದ ಸೋನು ವಾಲಿಯಾ 'ಖೂನ್ ಭರಿ ಮಾಂಗ್ ' ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ವಿಶೇಷ ಅಂದರೆ ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರಿಂದ ಇವರಿಗೆ ಬ್ಲಾಕ್ ಬಸ್ಟರ್ ರೆಸ್ಫಾನ್ಸ್ ಸಿಕ್ಕಿತ್ತು. ಫಿಲ್ಮ್ ಫೇರ್ ನ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯೂ ಸೋನು ಪಾಲಾಯಿತು.

 Unknown facts of 90s Bollywood Actress Sonu Walia

ಖೂನ್ ಭರೀ ಮಾಂಗ್ ನಂತರ ಸೋನುಗೆ ಅಕ್ಷರಶ ಬಾಲಿವುಡ್ ನಲ್ಲಿ ಸೋನಾ [ ಚಿನ್ನ ] ಸಿಕ್ಕಿತ್ತು. ಒಂದಾದ ಮೇಲೊಂದು ಸಿನಿಮಾ ಸೋನು ಅವರನ್ನ ಅರಸಿ ಬಂದವು. ಆ ಪೈಕಿ ಅಟ್ರಾಕ್ಷನ್, ಹಾತಿಮ್ ತೈ, ದಿಲ್ ಆಶ್ನಾ ಹೈ, ತೇಜಾ, ಖೇಲ್, ಜೀವನ್ ದಾತಾ, ಅಪ್ನಾ ದೇಶ್ ಪರೇ ಲೋಗ್, ತೆಹಲ್ಕಾ, ಸ್ವರ್ಗ್ ಜೈಸಾ ಘರ್ ಪ್ರಮುಖ ಸಿನಿಮಾಗಳು. ಆದರೆ ಹಣೆ ಬರಹಕ್ಕೆ ಹೊಣೆ ಯಾರು..? ಇದೇ ಸಮಯದಲ್ಲಿ ಸೋನು ಬೆನ್ನ ಹಿಂದೆ ದುರಾದೃಷ್ಟ ಬೆನ್ನು ಹತ್ತಿತ್ತು.


ಎತ್ತರ ಜಾಸ್ತಿ ಇದೆ ಎಂದು ದೂರ ತಳ್ಳಿದ ಬಾಲಿವುಡ್..!

ಆರಂಭದಲ್ಲಿ ತನ್ನ ಎತ್ತರದಿಂದ ಎಲ್ಲರನ್ನೂ ಆಯಸ್ಕಾಂತದಿಂದ ಸೆಳೆದಿದ್ದ ಸೋನುಗೆ ಆ ನಂತರ ಅವರ HEIGHT ಮುಳುವಾಯಿತು. ಖುದ್ದು ಸಂದರ್ಶನವೊಂದರಲ್ಲಿ ಸೋನು ಈ ಮಾತನ್ನ ಹೇಳಿದ್ದಾರೆ ಕೂಡ. ಅವರೇ ಹೇಳಿಂದತೆ 5 ಅಡಿ 8 ಇಂಚುಗಳಿದ್ದ ಸೋನು ಅವರನ್ನ ಬಾಲಿವುಡ್ ಕಡೆಗಣಿಸಲಾರಂಭಿಸಿತು. ಯಾಕೆಂದರೆ ಆ ನಂತರ ಬಂದ ನಾಯಕ ನಟರ ಎತ್ತರ ಸೋನು ಅವರಿಗಿಂತ ತುಂಬಾ ಕಡಿಮೆ ಇರ್ತಿತ್ತು. ಈ ಕಾರಣಕ್ಕಾಗಿ ಅವಕಾಶ ವಂಚಿತರಾಗತೊಡಗಿದ ಸೋನು ಆ ನಂತರ ಬಿ-ಗ್ರೇಡ್ ಸಿನಿಮಾದಲ್ಲಿ ನಟಿಸಬೇಕಾಗಿ ಬಂದಿದ್ದು ದುರಂತ.

ಹಾಗೂ ಹೀಗೂ 1995ರವರೆಗೆ ತಮ್ಮ ಅದೃಷ್ಟವನ್ನ ಪರೀಕ್ಷೆ ಮಾಡಿಕೊಂಡ ಸೋನು, ಕೊನೆಗೆ ಪ್ರಯತ್ನವನ್ನ ಕೈ ಚೆಲ್ಲಿದರು. ಉದ್ಯಮಿ ಸೂರ್ಯ ಪ್ರಕಾಶ್ ಸಿಂಗ್ ಅವರನ್ನು ವಿವಾಹವಾದರು.ಆದರೆ ಇಲ್ಲಿಯೂ ಕೂಡ ದುರಾದೃಷ್ಟ ಇವರ ಬೆನ್ನು ಬಿಡಲಿಲ್ಲ. ಮದುವೆಯಾದ ಕೇವಲ 07 ವರ್ಷಕ್ಕೆ ಸೂರ್ಯ ಪ್ರಕಾಶ್ ಉಸಿರು ಚೆಲ್ಲಿದರು. ಪತಿಯ ಅಕಾಲಿಕ ಮರಣದಿಂದ ದಿಕ್ಕೆಟ್ಟು ಹೋದ ಸೋನು, ಆ ನಂತರ ಅಮೆರಿಕಾಗೆ ತೆರಳಿದರು. 05 ವರ್ಷ ಅಲ್ಲಿಯೇ ಬಿಡಾರ ಹೂಡಿದರು. 2016ರಲ್ಲಿ ಭಾರತಕ್ಕೆ ಮರಳಿದರು. ಆದರೆ ಅಷ್ಟರಲ್ಲಿ ಬಣ್ಣದ ಲೋಕ ತನ್ನ ಬಣ್ಣವನ್ನ ಬದಲಾಯಿಸಿತ್ತು. ಸೋನು ಅವರನ್ನ ದೂರ ಇಟ್ಟಿತು. ಹೀಗಾಗಿಯೇ ಬಾಲಿವುಡ್ ಗೆ ಸೆಡ್ಡು ಹೊಡೆಯಲೆಂದೇ ನಿರ್ಮಾಣ ಸಂಸ್ಥೆಯನ್ನ ಕೂಡ ಹುಟ್ಟು ಹಾಕಿದರು. ಆದರೆ ಫಲಿತಾಂಶ ಅಷ್ಟಕಷ್ಟೇ.

 Unknown facts of 90s Bollywood Actress Sonu Walia

ಹೀಗೆ 1985ರಲ್ಲಿ ಭಾರತೀಯರ ಮನ ಗೆದ್ದ ಸೋನು ವಾಲಿಯಾ, ಸದ್ಯಕ್ಕೆ ಬದುಕು ಬಂದಂತೆ ಸ್ವೀಕರಿಸುತ್ತಿದ್ದಾರೆ. ಅಜ್ಞಾತವಾಸದಲ್ಲಿ ಬದುಕುತ್ತಿದ್ದಾರೆ. ಈ ಫೆಬ್ರವರಿ 19ಕ್ಕೆ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯ ಮಾಡಿಕೊಡುವ ಪ್ರಯತ್ನವನ್ನ ನಾವು ಈ ಮೂಲಕ ಮಾಡಿದ್ದೇವೆ. ಇವತ್ತು ಸೋನು ವಾಲಿಯಾ ಎಲ್ಲಿದ್ದಾರೆ..? ಏನ್ಮಾಡ್ತಿದ್ದಾರೆ..? ಈ ಪ್ರಶ್ನೆಗೆ ಉತ್ತರ ಸದ್ಯಕ್ಕೆ ಹಿಂದಿ ಚಿತ್ರರಂಗದವರ ಬಳಿಯೂ ಇಲ್ಲ.

More from Filmibeat

English summary
Former actress, model and beauty pageant titleholder Sonu Walia, who won the Femina Miss India Universe 1985 is remembered as one of the most beautiful, under-rated, and intriguing actresses to ever hit the Bollywood tinsel world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X