ಆಮಿರ್ ಖಾನ್ ತಾತ ಯಾರು ? ಬಾಲಿವುಡ್ ಪರ್ಫೆಕ್ಷನಿಸ್ಟ್ ಬಗ್ಗೆ ನಿಮಗೆ ಗೊತ್ತಿರದ ವಿಚಾರ..!

ಆಮಿರ್ ಖಾನ್, ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್. ಪಾತ್ರಕ್ಕೆ ಹಾಗೂ ಚಿತ್ರಕ್ಕೆ ತನು, ಮನವನ್ನಷ್ಟೇ ಅಲ್ಲ ತಾವು ಒಪ್ಪಿಕೊಳ್ಳುವ ಸಿನಿಮಾಗಳಿಗೆ ತಕ್ಕಂತೆ ತಮಗಿರುವ ಪಾತ್ರಕ್ಕೆ ಅನುಸಾರವಾಗಿ ತೂಕ ಹೆಚ್ಚಿಸಿ, ಇಳಿಸಿಕೊಳ್ಳುವ, ಆಮೀರ್ ಖಾನ್ ಕೇವಲ ನಟ, ನಿರ್ಮಾಪಕ, ನಿರ್ದೇಶಕರಷ್ಟೇ ಅಲ್ಲ ಬದಲಿಗೆ ಅತ್ಯುತ್ತಮ ಟೆನಿಸ್ ಆಟಗಾರ ಕೂಡ ಹೌದು ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ.

ಹೌದು, ಇಂದು 59ನೇ ವಸಂತಕ್ಕೆ ಕಾಲಿಟ್ಟಿರುವ ಆಮಿರ್ ಖಾನ್, ಒಂದ್ಕಾಲದಲ್ಲಿ ಟೆನಿಸ್ ಅಂಗಳದಲ್ಲಿ ಮಿಂಚಿದವರು. ತಮ್ಮ ಸ್ಕೂಲ್ ಡೇಸ್ ನಲ್ಲಿ, ಟೆನಿಸ್ ಪರ ಅಪಾರ ಒಲವನ್ನ ಹೊಂದಿದ್ದ ಆಮೀರ್ ಖಾನ್ ರಾಜ್ಯ ಮಟ್ಟದ ಪಂದ್ಯಾವಳಿಗಳನ್ನ ಆಡಿದ್ದರು. ಇಷ್ಟೇ ಅಲ್ಲ ಆಮೀರ್ ಖಾನ್ ರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರ ಕೂಡ ಆಗಿದ್ದರು. ಹಿಂದೆ ಸಂದರ್ಶನವೊಂದರಲ್ಲಿ ಆಮೀರ್ ತಂದೆ ತಾಹಿರ್ ಹುಸೇನ್ ಈ ವಿಚಾರವನ್ನ ಹೇಳಿದ್ದರು.

Unknown Facts Of Mr Perfectionist Aamir Khan

ಇನ್ನೂ ಆಮಿರ್ ಖಾನ್ ಅವರ ಗುಲಾಮ್ ಸಿನಿಮಾ ನಿಮಗೆ ನೆನಪಿರಬೇಕು. 1998ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರದ ಹಾಡುಗಳು ಇವತ್ತಿಗೂ ಕೂಡ ಜನಪ್ರಿಯ. ಗಲ್ಲಾಪೆಟ್ಟಿಗೆಯಲ್ಲಿಯೂ ಯಶಸ್ವಿಯಾಗಿದ್ದ ಈ ಚಿತ್ರದಲ್ಲಿನ ಸಾಹಸ ಸನ್ನಿವೇಶವೊಂದಕ್ಕೆ, ಆಮಿರ್ ಖಾನ್ ಹನ್ನೆರಡು ದಿನ ಸ್ನಾನ ಮಾಡುವುದನ್ನೇ ಬಿಟ್ಟಿದ್ದರು.

ಅಸಲಿಗೆ ಆ ಫೈಟ್ ಸೀಕ್ವೆನ್ಸ್ ಅವಧಿ ತುಸು ಹೆಚ್ಚಿತ್ತು. ಈ ಕಾರಣಕ್ಕೆ ಮೇಕಪ್ ನ ಪದೇ ಪದೇ ಹಾಕಿಕೊಳ್ಳಲು ಆಮೀರ್ ಹಿಂದೇಟು ಹಾಕಿದ್ದರು. ಹಾಕಿದ್ದ ಮೇಕಪ್ ಹಾಳಾಗಬಾರದು ಎಂದು ಸ್ನಾನ ಮಾಡುವುದನ್ನೇ ಮರೆತಿದ್ದರು ಆಮಿರ್ ಖಾನ್. ಈ ಸಾಹಸ ಸನ್ನಿವೇಶದ ಚಿತ್ರೀಕರಣ ಬರೋಬ್ಬರಿ ಹನ್ನೆರಡು ದಿನ ನಡೆದಿತ್ತು. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಈ ವಿಚಾರವನ್ನ ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಬಹಿರಂಗಗೊಳಿಸಿದ್ದರು.

ಆಮಿರ್ ಖಾನ್ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರು ಎಂಬ ವಿಚಾರ ಕೂಡ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಹೌದು, ಖಿಲಾಫತ್ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೌಲಾನಾ ಅಬ್ದುಲ್ ಕಲಾಂ ಅವರ ಮೊಮ್ಮಗ ಈ ಆಮಿರ್ ಖಾನ್. ವಿಶೇಷ ಅಂದರೆ ಮೌಲಾನಾ ಅಬ್ದುಲ್ ಕಲಾಂ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರೂ ಆಗಿದ್ದರು.

Unknown Facts Of Mr Perfectionist Aamir Khan

ಅಂದು ತಾರೆ ಜಮೀನ್ ಪರ.. ಇಂದು ಸಿತಾರೆ ಜಮೀನ್ ಪರ್ ..!

ಖಯಾಮತ್ ಸೆ ಕಯಾಮತ್ ತಕ್ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಬಂದ ಆಮೀರ್ ಖಾನ್, ಲಾಲ್ ಸಿಂಗ್ ಚಡ್ಡಾ ಚಿತ್ರದ ಸೋಲಿನ ನಂತರ ಚಿತ್ರರಂಗದಿಂದ ದೂರ ಸರಿದಿದ್ದರು. ಮನೆ, ಮಕ್ಕಳು, ಮಗಳ ಮದುವೆ ಎಂದು ಕುಟುಂಬಕ್ಕೆ ಸಮಯವನ್ನ ಮೀಸಲಿಟ್ಟಿದ್ದರು. ಆದರೆ ಈಗ ಆಮೀರ್ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ತಾರೆ ಜಮೀನ್ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದ ಆಮೀರ್ ಖಾನ್ ಸದ್ಯಕ್ಕೆ ಸಿತಾರೆ ಜಮೀನ್ ಪರ್ ಬಣ್ಣ ಹಚ್ಚಿದ್ದಾರೆ.

ಒಟ್ಟಿನಲ್ಲಿ ತನ್ನ ಅಭಿನಯದಿಂದ ಅಸಂಖ್ಯಾತ ಅಭಿಮಾನಿಗಳನ್ನ ಹೊಂದಿರುವ ಆಮೀರ್ ಖಾನ್, ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸದಾ ಹೊಸತನಕ್ಕೆ ತುಡಿಯುವ, ಹೊಸ ಪ್ರಯತ್ನಗಳಿಗೆ ಬೆಂಬಲ ನೀಡುವ ಬಾಲಿವುಡ್ ನ ಈ ಮಿಸ್ಟರ್ ಪರ್ಫೆಕ್ಷನಿಸ್ಟ್ ಸಿತಾರೆ ಜಮೀನ್ ಪರ್ ಚಿತ್ರದ ಮೂಲಕ ಮತ್ತೆ ಪುಟಿದೇಳಲಿ, ಮತ್ತಷ್ಟು ಚಿತ್ರಗಳು ಇವರ ಬತ್ತಳಿಕೆಯಿಂದ ಹೊರ ಬರಲಿ ಅನ್ನುವುದು ಬಾಲಿವುಡ್ ಸಿನಿಮಾ ಪ್ರೇಮಿಗಳ ಆಶಯ.

More from Filmibeat

English summary
Did You Know, Aamir is an excellent lawn tennis player and during his school days, he participated in several championships. Here are few Unknown Facts Of Mr.Perfectionist Aamir Khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X