For Quick Alerts
  ALLOW NOTIFICATIONS  
  For Daily Alerts

  ಚಾಕುವಿನೊಂದಿಗೆ ನಟಿ ಮನೆಗೆ ನುಗ್ಗಿದ ವ್ಯಕ್ತಿ: ತಡೆಯಲು ಹೋದ ತಂದೆಗೆ ಪೆಟ್ಟು

  |

  ಅನಾಮಿಕ ವ್ಯಕ್ತಿಯೊಬ್ಬ ಚಾಕು ಹಾಗೂ ನಕಲಿ ಗನ್ ಹಿಡಿದು ಮರಾಠಿ ಸಿನಿಮಾ ನಟಿ ಸೊನಾಲಿ ಕುಲಕರ್ಣಿ ಮನೆಗೆ ನುಗ್ಗಿರುವ ಘಟನೆ ನಡೆದಿದೆ. ಈ ವೇಳೆ ಆ ವ್ಯಕ್ತಿಯನ್ನು ಹಿಡಿಯಲು ಹೋದ ನಟಿಯ ತಂದೆಗೆ ಚಾಕುವಿನಿಂದ ಗಾಯವಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

  ಮಹಾರಾಷ್ಟ್ರದ ಪುಣೆಯಲ್ಲಿರುವ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಟಿ ಹಾಗೂ ಕುಟುಂಬ ನೆಲೆಸಿದೆ. ವಿಷಯ ತಿಳಿದ ನಂತರ ಘಟನೆ ಸ್ಥಳಕ್ಕೆ ಬಂದ ಪೊಲೀಸರು ಆ ವ್ಯಕ್ತಿಯನ್ನ ವಶಕ್ಕೆ ಪಡೆದುಕೊಂಡಿದ್ದು, ಆರೋಪಿ ನಟಿಯ ಮನೆಗೆ ನುಗ್ಗಲು ಕಾರಣ ಏನು ಎಂದು ತನಿಖೆ ಮುಂದುವರಿಸಿದ್ದಾರೆ. ಮುಂದೆ ಓದಿ...

  ನಟಿ ಮನೆಗೆ ನುಗ್ಗಿ ಗಲಾಟೆ

  ನಟಿ ಮನೆಗೆ ನುಗ್ಗಿ ಗಲಾಟೆ

  ಅಪಾರ್ಟ್‌ಮೆಂಟ್‌ನ ಮೇಲ್ಚಾವಣಿ ಮೂಲಕ ಮನೆಯೊಳಗೆ ವ್ಯಕ್ತಿ ನುಗ್ಗಿರುವುದು ತಿಳಿದಿದೆ. ಈ ವೇಳೆ ಆ ವ್ಯಕ್ತಿಯನ್ನು ಹಿಡಿಯಲಯ ನಟಿಯ ತಂದೆ ಪ್ರಯತ್ನಿಸಿದಾಗ ಸಣ್ಣಪುಟ್ಟ ಗಾಯವಾಗಿದೆ. ಗಲಾಟೆಯಲ್ಲಿ ನಟಿಯ ತಂದೆಗೆ ಗಾಯವಾಗುತ್ತಿದ್ದಂತೆ ಆರೋಪಿ ಓಡಿ ಹೋಗಲು ಪ್ರಯತ್ನಿಸಿದ. ಆಗ ಅಕ್ಕಪಕ್ಕದ ನಿವಾಸಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವ್ಯಕ್ತಿಯ ಹಿಡಿದು ಕೇಳಿದಾಗ 'ನಾನು ಅಭಿಮಾನಿ' ಎಂದು ಹೇಳಿಕೊಂಡಿದ್ದಾನೆ. ಆತನ ಹೇಳಿಕೆ ಮೇಲೆ ಪೊಲೀಸರಿಗೆ ಅನುಮಾನ ಉಂಟಾಗಿದ್ದು, ಪರಿಶೀಲನೆ ಮುಂದುವರಿಸಿದ್ದಾರೆ.

  ತಂದೆ-ತಾಯಿ ವಿಚ್ಛೇದನ ಪಡೆದು ದೂರ ಆದಾಗ ಸಂತೋಷ ಪಟ್ಟಿದ್ದೆ; ಶ್ರುತಿ ಹಾಸನ್ತಂದೆ-ತಾಯಿ ವಿಚ್ಛೇದನ ಪಡೆದು ದೂರ ಆದಾಗ ಸಂತೋಷ ಪಟ್ಟಿದ್ದೆ; ಶ್ರುತಿ ಹಾಸನ್

  ಇತ್ತೀಚಿಗಷ್ಟೆ ಮದುವೆಯಾದ ನಟಿ

  ಇತ್ತೀಚಿಗಷ್ಟೆ ಮದುವೆಯಾದ ನಟಿ

  ನಟಿ ಸೊನಾಲಿ ಕುಲಕರ್ಣಿ ಇತ್ತೀಚಿಗಷ್ಟೆ ದುಬೈ ಉದ್ಯಮಿ ಕುನಾಲ್ ಜೊತೆ ವಿವಾಹವಾಗಿದ್ದರು. ಲಾಕ್‌ಡೌನ್ ಹಿನ್ನೆಲೆ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ ಮೇ 7 ರಂದು ಈ ವಿವಾಹ ಜರುಗಿದೆ. ಆದರೆ, ತಡವಾಗಿ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ವಿಷಯ ತಿಳಿಸಿದ್ದಾರೆ ನಟಿ.

  ಮದುವೆಗಾಗಿ ಇಟ್ಟಿದ್ದ ಹಣ ಜನಸೇವೆಗೆ ಮೀಸಲು

  ಮದುವೆಗಾಗಿ ಇಟ್ಟಿದ್ದ ಹಣ ಜನಸೇವೆಗೆ ಮೀಸಲು

  ಎರಡು ಕುಟುಂಬದವರು ಒಪ್ಪಿ ಸರಳವಾಗಿ ವಿವಾಹ ನಡೆದಿದೆ ಎಂದು ನಟಿ ಮಾಹಿತಿ ತಿಳಿಸಿದ್ದು, ಅದ್ಧೂರಿಯಾಗಿ ವಿವಾಹ ಆಗಬೇಕು ಎಂಬ ಉದ್ದೇಶದಿಂದ ಸಂಗ್ರಹಿಸಿದ್ದ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸುವುದಾಗಿ ಪ್ರಕಟಿಸಿದ್ದಾರೆ. ಪ್ರಸ್ತುತ, ಕೋವಿಡ್‌ನಿಂದ ಜನರು ಸಂಕಷ್ಟದಲ್ಲಿರುವ ಕಾರಣ ಆ ಹಣವನ್ನು ಅಗತ್ಯವಾಗಿ ಜನರ ಸೇವೆಗೆ ಖರ್ಚು ಮಾಡಲು ನಟಿ ತೀರ್ಮಾನಿಸಿದ್ದಾರೆ.

  ಈಗಿನ ಗಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ ಹಿರಿಯ ಗಾಯಕ ಕುಮಾರ್ ಸಾನುಈಗಿನ ಗಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ ಹಿರಿಯ ಗಾಯಕ ಕುಮಾರ್ ಸಾನು

  Recommended Video

  ಮತ್ತೊಂದು ಮೈಲಿಗಲ್ಲು ತಲುಪಿದ ಉಪೇಂದ್ರ | Filmibeat Kannada
  ಯಾರು ಈ ಸೊನಾಲಿ ಕುಲಕರ್ಣಿ?

  ಯಾರು ಈ ಸೊನಾಲಿ ಕುಲಕರ್ಣಿ?

  2006ರಲ್ಲಿ ಮರಾಠಿ ಚಿತ್ರರಂಗ ಪ್ರವೇಶಿಸಿದ ನಟಿ ಸೊನಾಲಿ ಕುಲಕರ್ಣಿ ಸುಮಾರು 50ಕ್ಕೂ ಅಧಿಕ ಸಿನಿಮಾಗಳಲ್ಲಿ ಸೋನಾಲಿ ಅಭಿನಯಿಸಿದ್ದಾರೆ. ಹಿಂದಿಯಲ್ಲಿ ಗ್ರ್ಯಾಂಡ್ ಮಸ್ತಿ ಹಾಗೂ ಸಿಂಗಂ ರಿಟರ್ನ್ಸ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ ಜಿಮ್ಮ ಸಿನಿಮಾದಲ್ಲಿ ನಟಿಸಿದ್ದರು. ಕೆಲವು ಟಿವಿ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದು, ತಮ್ಮ ಅಭಿನಯಕ್ಕಾಗಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.

  English summary
  Unknown Man Enters marathi actress Sonalee Kulkarni House With Knife and injured her father.
  Tuesday, May 25, 2021, 17:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X