ನನಗೆ ಭಯ ಆಗ್ತಿದೆ, ನನ್ನ ಪ್ರಾಣಕ್ಕೆ ಅಪಾಯ ಇದೆ ; ನನಗೆ ಗನ್ ಕೊಡಿ- ಪೊಲೀಸರ ಮೊರೆ ಹೋದ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ

ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಮನೆಗಳಿಗೆ ಕೂಡ ಕಳ್ಳಕಾಕರು ಯಾವ ಭಯ ಇಲ್ಲದೇ ನುಗ್ಗುತ್ತಿದ್ದಾರೆ. ಭದ್ರತೆಯ ನಡುವೆಯೇ ಸೆಲೆಬ್ರಿಟಿಗಳ ಐಶಾರಾಮಿ ಮನೆಯಲ್ಲಿರುವ ವಸ್ತುಗಳನ್ನೆಲ್ಲ ದೋಚಿಕೊಂಡು ಪರಾರಿಯಾಗುತ್ತಿದ್ದಾರೆ. ವಿಪರ್ಯಾಸ ಅಂದರೆ ಈ ಕಳ್ಳರ ಸುಳಿವು ಕೂಡ ಪೊಲೀಸರಿಗೆ ಸಿಗುವುದಿಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ....

ಸಲ್ಮಾನ್ ಖಾನ್ ಅವರ ಮಾಜಿ ಪ್ರೇಯಸಿ, ಭಾರತದ ಖ್ಯಾತ ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಅವರ ಮಾಜಿ ಪತ್ನಿ, ಮತ್ತು ಅಂದಕಾಲತ್ತಿಲ್‌ನ ಖ್ಯಾತ ನಾಯಕಿ ಸಂಗೀತಾ ಬಿಜಲಾನಿ ಅವರ ಫಾರ್ಮ್‌ಹೌಸ್‌ನಲ್ಲಿ ಕಳ್ಳತನವಾಗಿದೆ. ತಮ್ಮ ಫಾರ್ಮ್‌ಹೌಸ್‌ನಲ್ಲಿ ನಡೆದ ಈ ಕಳ್ಳತನದಿಂದ ಸಂಗೀತಾ ವಿಚಲಿತರಾಗಿದ್ದು ಒಂಟಿಯಾಗಿ ವಾಸ ಮಾಡುವ ಮಹಿಳೆಯರು ಈಗ ಸುರಕ್ಷಿತರಲ್ಲ ಎಂದು ಹೇಳಿದ್ದಾರೆ. ಸುರಕ್ಷತೆಗಾಗಿ ಶಸ್ತ್ರಾಸ್ತ್ರ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.

Unsafe as a Woman Sangeeta Bijlani Seeks Firearm License Following Pune Robbery

ಈ ಕುರಿತು ಮಾತನಾಡಿರುವ ಸಂಗೀತಾ ಬಿಜಲಾನಿ ಫಾರ್ಮ್‌ಹೌಸ್ ಇರುವ ಪಾವನಾ ನಗರದಲ್ಲಿ ಈಗ ಅಸುರಕ್ಷತೆಯ ಭಾವ ಕಾಡುತ್ತಿದೆ ಎಂದು ಹೇಳಿದ್ದಾರೆ. ನಾನು ಇಪ್ಪತ್ತು ವರ್ಷಗಳಿಂದ ಇಲ್ಲಿ ವಾಸ ಮಾಡಿದ್ದೇನೆ ಆದರೆ ಯಾವತ್ತು ಈ ತರಹದ ಘಟನೆ ನಡೆದಿಲ್ಲ. ಇದೇ ಮೊದಲ ಬಾರಿ ನನಗೆ ನಾನು ಸುರಕ್ಷಿತವಾಗಿಲ್ಲ ಎಂಬ ಭಾವನೆ ಮೂಡಿದೆ ಎಂದು ಹೇಳಿರುವ ಸಂಗೀತಾ ಬಿಜಲಾನಿ ಇದು ಕೇವಲ ಕಳ್ಳತನದ ವಿಚಾರ ಅಲ್ಲ ಪ್ರತ್ಯೇಕ ಬಂಗಲೆಯಲ್ಲಿ ಮತ್ತು ಫಾರ್ಮ್‌ಹೌಸ್‌ನಲ್ಲಿ ವಾಸ ಮಾಡುವ ಮಹಿಳೆಯರ ಮತ್ತು ಅವರ ಕುಟುಂಬದ ಭದ್ರತೆಯ ಪ್ರಶ್ನೆ ಎಂದು ಹೇಳಿದ್ದಾರೆ.

ಅಂದ್ಹಾಗೇ ಸಂಗೀತಾ ಬಿಜಲಾನಿ ಅವರ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಸಂಗೀತಾ ಬಿಜಲಾನಿ ಕಳ್ಳತನ ನಡೆಯುವಾಗ ಫಾರ್ಮ್‌ಹೌಸ್‌ನಲ್ಲಿ ಇರಲಿಲ್ಲ. ಬದಲಿಗೆ ಕಳೆದ ನಾಲ್ಕು ತಿಂಗಳಿಂದ ತಂದೆಯ ಯೋಗ-ಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಫಾರ್ಮ್‌ಹೌಸ್‌ಗೆ ನಾಲ್ಕು ತಿಂಗಳಿಂದ ಬಾರದ ಸಂಗೀತಾ ಮೊನ್ನೆ ತಮ್ಮ ಇಬ್ಬರು ಮನೆ ಕೆಲಸದವರ ಜೊತೆ ಫಾರ್ಮ್‌ಹೌಸ್‌ನ ಸ್ಥಿತಿ ಗತಿಯನ್ನು ನೋಡಲು ಬಂದಿದ್ದರು. ಆಗ ಈ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಮುಖ್ಯ ಬಾಗಿಲು ಒಡೆದು ಹಾಕಿರುವ ಕಳ್ಳರು ಮನೆಯಲ್ಲಿರುವ ಗಾಜುಗಳನ್ನೆಲ್ಲಾ ಪುಡಿ ಪುಡಿ ಮಾಡಿದ್ದಾರೆ. ಮನೆಯ ಗೋಡೆಗಳ ಮೇಲೆ ಅಶ್ಲೀಲ ಬರಹಗಳನ್ನು ಬರೆದಿದ್ದಾರೆ. ಮನೆಯ ವಸ್ತುಗಳನ್ನೆಲ್ಲಾ ಚಿಲ್ಲಾಪಿಲ್ಲಿ ಮಾಡಿದ್ದಾರೆ. ₹7,000 ಮೌಲ್ಯದ ಹಳೆಯ ಟಿವಿ ಮತ್ತು ಅವರ ತಂದೆಯ ಕೋಣೆಯಲ್ಲಿದ್ದ ₹50,000 ಹಣ ಇದರ ಜೊತೆಯಲ್ಲಿ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಕದ್ದಿರುವ ಕಳ್ಳರು ಸಂಗೀತಾ ಕೋಣೆಯಲ್ಲಿದ್ದ ಟಿವಿಯನ್ನು ಒಡೆದು ಹಾಕಿದ್ದಾರೆ.

ತಮ್ಮ ಮನೆಯ ಈ ಸ್ಥಿತಿಯನ್ನು ಕಂಡು ಗಾಬರಿ ಬಿದ್ದಿರುವ ಸಂಗೀತಾ ಬಿಜಲಾನಿ ಯಾರೋ ಬೇಕು ಅಂತಲೇ ಈ ಕೆಲಸ ಮಾಡಿದ್ದಾರೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಸಂಗೀತಾ ಬಿಜಲಾನಿ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಲೋನಾವಾಲಾದ ಗ್ರಾಮಾಂತರ ಪೊಲೀಸರು ಫಾರ್ಮ್‌ಹೌಸ್ ಸುತ್ತ ಮುತ್ತ ಇರುವ ಸಿಸಿಟಿವಿ ಕ್ಯಾಮರಾಗಳನ್ನು ನಾಶ ಪಡಿಸಲಾಗಿದೆ, ಮನೆಯಲ್ಲಿನ ಹಾಸಿಗೆಗಳನ್ನು ಹರಿದು ಹಾಕಲಾಗಿದ್ದು, ರೆಫ್ರಿಜರೇಟರ್ ಒಡೆದು ಹಾಕಲಾಗಿದೆ, ಮನೆಯಲ್ಲಿನ ಎಲ್ಲ ಕೋಣೆಯಲ್ಲಿ ಕೂಡ ಸಿಕ್ಕ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ಇದೊಂದು ಪೂರ್ವನಿಯೀಜಿತ ಕೃತ್ಯ ಮಾರ್ಚ್ 7ರಿಂದ ಜುಲೈ 18 ರ ನಡುವೆ ಫಾರ್ಮ್‌ಹೌಸ್ ಖಾಲಿಯಾಗಿದ್ದಾಗ ಈ ಕೃತ್ಯ ನಡೆದಿದೆ ಎಂದು ಹೇಳಿದ್ಧಾರೆ.

Unsafe as a Woman Sangeeta Bijlani Seeks Firearm License Following Pune Robbery

ಸದ್ಯ ಭಾರತೀಯ ನ್ಯಾಯ ಸಂಹಿತೆ (BNS) ಯ ಸೆಕ್ಷನ್‌ಗಳು 331(3), 331(4), 305(a), 324(4), ಮತ್ತು 324(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪುಣೆ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಸಂದೀಪ್ ಸಿಂಗ್ ಗಿಲ್ ಕಳ್ಳರನ್ನು ಆದಷ್ಟು ಬೇಗ ಹಿಡಿಯುವ ಭರವಸೆಯನ್ನು ಸಂಗೀತಾ ಬಿಜಲಾನಿ ಅವರಿಗೆ ನೀಡಿದ್ದಾರೆ.

More from Filmibeat

English summary
After a terrifying home invasion, Sangeeta Bijlani says, 'I feel very unsafe' and is now seeking an arms license for protection. Learn why the robbery at her Pune home forced this drastic decision.
Read more about: robbery sangeetha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X