ಮೈತುಂಬಾ ಬಟ್ಟೆ ತೊಟ್ಟು ಗೋಲ್ಡನ್ ಟೆಂಪಲ್‌ಗೆ ಹೋದ ಉರ್ಫಿ ಜಾವೇದ್: ಶಾಕ್ ಆದ ನೆಟ್ಟಿಗರು!

ನಟಿ ಉರ್ಫಿ ಜಾವೇದ್ ಎಂದರೆ ತಕ್ಷಣ ಕಣ್ಣ ಮುಂದೆ ಬರುವುದು ಆಕೆಯ ವಿಚಿತ್ರ ಬಟ್ಟೆಗಳು. ಹೊಸ ಫ್ಯಾಷನ್ ಎನ್ನುತ್ತಾ ಕೈಗೆ ಸಿಕ್ಕ ವಸ್ತುಗಳಿಂದ ಬಟ್ಟೆ ತಯಾರಿಸಿ ಅದನ್ನು ಧರಿಸುವುದು ಆಕೆಯ ಕಲೆ. ಗೋಣಿ ಚೀಲವೇ ಆಗಿರಲಿ, ಸಿಗರೇಟ್ ತುಂಡೆ ಆಗಿರಲಿ.. ಸಿಮ್ ಕಾರ್ಡ್‌ಗಳೇ ಆಗಿರಲಿ ಎಲ್ಲವೂ ಆಕೆಯ ಕೈಯಲ್ಲಿ ಬಟ್ಟೆಯ ರೂಪ ಪಡೆಯುತ್ತವೆ.

ಉರ್ಫಿ ಜಾವೇದ್ ತಮ್ಮ ಫ್ಯಾಷನ್ ಸೆನ್ಸ್‌ನಿಂದಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಯಾವಾಗಲೂ ಏನಾದರೂ ಒಂದು ಕ್ರಿಯೆಟಿವ್ ಅವತಾರದ ಮೂಲಕ ಜನರ ಮುಂದೆ ಬಂದು ನಿಲ್ಲುವ ಆಕೆ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಕೂಡ ಬಟ್ಟೆ ಜಾಸ್ತಿ ಧರಿಸಿರುವುದಕ್ಕೆ. ಹೌದು, ಉರ್ಫಿ ಜಾವೇದ್ ಮೈತುಂಬಾ ಬಟ್ಟೆ ಹಾಕಿಕೊಂಡಿರುವುದಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ.

Uorfi Javed visits Golden Temple in Amritsar in pink salwar suit, fans reaction

ಸಲ್ವಾರ್ ಕಮೀಜ್ ತೊಟ್ಟು ಗೋಲ್ಡನ್ ಟೆಂಪಲ್‌ಗೆ ಹೋದ ಉರ್ಫಿ ಜಾವೇದ್

ನಟಿ ಉರ್ಫಿ ಜಾವೇದ್ ಇತ್ತೀಚೆಗೆ ತನ್ನ ಸಹೋದರಿ ಅಮೃತಸರದ ಡಾಲಿಯೊಂದಿಗೆ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಉರ್ಫಿ ಗುಲಾಬಿ ಬಣ್ಣದ ಸಲ್ವಾರ್ ಕಮೀಜ್‌ ತೊಟ್ಟಿದ್ದಾರೆ. ಇದು ಎಲ್ಲರನ್ನು ಆಶ್ಚರ್ಯಕ್ಕೆ ಇಡು ಮಾಡಿದೆ. ಉರ್ಫಿಯನ್ನು ಹೀಗೆ ಮೈತುಂಬಾ ಬಟ್ಟೆಯಲ್ಲಿ ನೋಡಿದ ನೆಟ್ಟಿಗರು ಇದೇನು ಉರ್ಫಿಯಾ ಇಲ್ಲ ಬೇರೆಯವರಾ ಎಂದು ಪ್ರಶ್ನಿಸಿದ್ದಾರೆ.

ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿರುವ ಫೋಟೋಗಳನ್ನು ಉರ್ಫಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ಗೆ "ವಾಹೆಗುರು" ಎಂದು ಶೀರ್ಷಿಕೆ ನೀಡಿದ್ದಾರೆ. ಫೋಟೋಗಳಲ್ಲಿ, ಉರ್ಫಿ ಗುಲಾಬಿ ಬಣ್ಣದ ಚೂಡಿದಾರ್ ಧರಿಸಿ ಮುದ್ದಾಗಿ ಕಾಣುತ್ತಿದ್ದಾರೆ. ಗೋಲ್ಡನ್ ಟೆಂಪಲ್ ಬಳಿ ಕೈ ಜೋಡಿಸಿ ನಮಿಸಿ ಆಶೀರ್ವಾದ ಪಡೆಯುತ್ತಿದ್ದಾರೆ. ಜೊತೆಗೆ ದೇವಸ್ಥಾನದಲ್ಲಿ ನಡೆದ ಗಾಯನ ಮತ್ತು ದೇವಸ್ಥಾನದಲ್ಲಿನ ಪ್ರಸಾದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Uorfi Javed visits Golden Temple in Amritsar in pink salwar suit, fans reaction

ಉರ್ಫಿ ನೋಡಿ ಫ್ಯಾನ್ಸ್ ಫುಲ್ ಶಾಕ್!

ಉರ್ಫಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೇ, ಅಭಿಮಾನಿಗಳು ಕಾಮೆಂಟ್ ಹಾಕಲು ಶುರು ಮಾಡಿದ್ದಾರೆ. "ನನಗೂ ಅಕೆ ಇಷ್ಟವಾಗುತ್ತಾಳೆ. ಆಕೆಯ ಬಟ್ಟೆಯ ಬಗ್ಗೆ ನನಗೆ ಗೊತ್ತಿಲ್ಲ ಆದರೆ... ಅವಳ ಆತ್ಮಸ್ಥೈರ್ಯ...ಅವಳು ಹೇಳಿದ ಮಾತುಗಳು ಅವಳನ್ನು ದ್ವೇಷಿಸುವವರ ಮಾತುಗಳನ್ನು ಬಂದ್ ಮಾಡುತ್ತವೆ. ಆಕೆ ಏನನ್ನಾದರೂ ಸರಿ ಮಾಡಬಲ್ಲಳು ಆದರೆ, ಬಟ್ಟೆಗಳನ್ನು ಬಿಟ್ಟು" ಎಂದಿದ್ದಾರೆ.

ಮತ್ತೊಬ್ಬರು, "ಅನೇಕ ಜನರು ಅವಳ ಬಟ್ಟೆಗಾಗಿ ಆಕೆಯನ್ನು ಟ್ರೋಲ್ ಮಾಡುತ್ತಾರೆ. ಆಕೆ ವಿಭಿನ್ನವಾದ ಫ್ಯಾಶನ್ ಸೆನ್ಸ್ ಹೊಂದಿದ್ದು, ಅದನ್ನು ಎಲ್ಲೆಡೆ ಪ್ರಚಾರ ಮಾಡುತ್ತಿದ್ದಾಳೆ. ಆದರೆ ಅವಳು ಹುಡುಗರನ್ನು ಆಕರ್ಷಿಸಲು ಆ ಬಟ್ಟೆಗಳನ್ನು ಧರಿಸಲಿಲ್ಲ. ನಮಗೆಲ್ಲರಿಗೂ ತಿಳಿದಿರುವಂತೆ ಉರ್ಫಿ ಹಾಗೆ ಮಾಡುವುದಿಲ್ಲ ಅಥವಾ ಜನರ ಮುಂದೆ ಕೀಳು ರೀತಿಯ ಸನ್ನೆಗಳನ್ನು ಮಾಡುವುದಿಲ್ಲ" ಎಂದು ಹೊಗಳಿದ್ದಾರೆ. ಇನ್ನೊಬ್ಬರು, ಈಕೆ ಮಾಡ್ರನ್ ಮತ್ತು ಟ್ರಡಿಷನಲ್ ಎರಡನ್ನೂ ನಿಭಾಯಿಸುತ್ತಾಳೆ ಎಂದು ಹೇಳಿದ್ದಾರೆ.

ಉರ್ಫಿ ಜಾವೇದ್

ನಟಿ ಉರ್ಫಿ ಜಾವೇದ್ ಹಿಂದಿಯ 'ಬಿಗ್ ಬಾಸ್ ಒಟಿಟಿ' ಯಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿ ಪಡೆದವರು. ಇದಕ್ಕೂ ಮುಂಚೆ ಹಲವು ಧಾರಾವಾಹಿಗಳಿಗೆ ಬನ್ಣ ಹಚ್ಚಿದ್ದರು. 'ಬಡೆ ಭಯ್ಯಾ ಕಿ ದುಲ್ಹನಿಯಾ', 'ಮೇರಿ ದುರ್ಗಾ', 'ಬೇಪನ್ನಾ', 'ಪಂಚ್ ಬೀಟ್ ಸೀಸನ್ 2', 'ಚಂದ್ರ ನಂದಿನಿ', 'ಸಾತ್ ಫೆರೋ ಕಿ ಹೇರಾ ಫೆರಿ', 'ಕಸೌತಿ ಜಿಂದಗಿ ಕೇ', 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ', ಸೇರಿ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ಹಲವು ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Uorfi Javed visits Golden Temple in salwar suit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X