For Quick Alerts
  ALLOW NOTIFICATIONS  
  For Daily Alerts

  ಟೀಕೆ, ಆರೋಪಕ್ಕೆ ಬಗ್ಗದ ಬಾಲಿವುಡ್: 10ಕ್ಕೂ ಹೆಚ್ಚು ಸಿನಿಮಾಗಳು ರಿಮೇಕ್

  |

  ಬಾಲಿವುಡ್ ಇಂಡಸ್ಟ್ರಿ ಮೇಲೆ ಬಹಳ ಗಂಭೀರವಾದ ಆರೋಪ ಇದೆ. ಹಿಂದಿ ಚಿತ್ರರಂಗದವರಿಗೆ ಹೊಸ ಹೊಸ ಕಥೆ ಮಾಡಲು ಬರಲ್ಲ. ದಕ್ಷಿಣದಲ್ಲಿ ಹಿಟ್ ಚಿತ್ರಗಳನ್ನು ರಿಮೇಕ್ ಮಾಡುವ ಅಭ್ಯಾಸ ಹೊಂದಿದ್ದಾರೆ ಎನ್ನುವ ಟೀಕೆ ಬಹಳ ದಿನಗಳಿಂದ ಇದೆ. ಈ ಮಾತಿಗೆ ತಕ್ಕಂತೆ ಬಿಟೌನ್ ನಿರ್ಮಾಪಕ-ನಿರ್ದೇಶಕರು ಸಹ ತೆಲುಗು-ತಮಿಳಿನಲ್ಲಿ ಹಿಟ್ ಆಗುತ್ತಿದ್ದಂತೆ ರಿಮೇಕ್ ಹಕ್ಕು ಖರೀದಿ ಮಾಡಿ ಬಿಡ್ತಾರೆ.

  ಇನ್ನು ಹಿಂದಿ ನಟರು ಸಹ ರಿಮೇಕ್ ಚಿತ್ರಗಳ ಕಡೆ ಒಲವು ತೋರುತ್ತಿದ್ದಾರೆ. ಸಲ್ಮಾನ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅಂತಹ ಸ್ಟಾರ್ ಹೀರೋಗಳೇ ರಿಮೇಕ್ ಹಿಂದೆ ಬಿದ್ದಿದ್ದಾರೆ.

  ಮಾಸ್ಟರ್ ರಿಮೇಕ್: ಸಲ್ಮಾನ್ ಖಾನ್ ಹೀರೋ, ಸೇತುಪತಿ ಪಾತ್ರಕ್ಕೆ ಯಾರು?ಮಾಸ್ಟರ್ ರಿಮೇಕ್: ಸಲ್ಮಾನ್ ಖಾನ್ ಹೀರೋ, ಸೇತುಪತಿ ಪಾತ್ರಕ್ಕೆ ಯಾರು?

  ಅಂದ್ಹಾಗೆ, ಸೌತ್ ಸಿನಿಮಾರಂಗದಲ್ಲಿ ಸೂಪರ್ ಹಿಟ್ ಎನಿಸಿಕೊಂಡ ಹತ್ತಕ್ಕೂ ಹೆಚ್ಚು ಚಿತ್ರಗಳ ರಿಮೇಕ್ ಹಕ್ಕು ಬಾಲಿವುಡ್ ಮಂದಿ ಬಳಿ ಇದೆ. ಇದರಲ್ಲಿ ಹಲವು ಸಿನಿಮಾಗಳು ಶುರುವಾಗಿದೆ. ಇನ್ನು ಕೆಲವು ಮಾತುಕತೆಯ ಹಂತದಲ್ಲಿದೆ. ಹಾಗಾದ್ರೆ, ದಕ್ಷಿಣದ ಯಾವ ಸಿನಿಮಾಗಳು ಹಿಂದಿಗೆ ಬರ್ತಿದೆ? ಮುಂದೆ ಓದಿ...

  ಅಯ್ಯಪ್ಪನಂ ಕೊಶಿಯಮ್

  ಅಯ್ಯಪ್ಪನಂ ಕೊಶಿಯಮ್

  ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ನಟನೆಯಲ್ಲಿ ತೆರೆಗೆ ಬಂದಿದ್ದ 'ಅಯ್ಯಪ್ಪನಂ ಕೊಶಿಯಮ್' ಸಿನಿಮಾ ಈಗ ಹಿಂದಿಗೆ ರಿಮೇಕ್ ಆಗುತ್ತಿದೆ. ಬಾಲಿವುಡ್ ವರ್ಷನ್‌ನಲ್ಲಿ ಜಾನ್ ಅಬ್ರಾಹಂ ಮತ್ತು ಅಭಿಷೇಕ್ ಬಚ್ಚನ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ತಮಿಳಿನ 'ವಿಕ್ರಂ-ವೇದ'

  ತಮಿಳಿನ 'ವಿಕ್ರಂ-ವೇದ'

  ತಮಿಳಿನ ಹಿಟ್ ಸಿನಿಮಾ 'ವಿಕ್ರಂ ವೇದ' ಹಿಂದಿಯಲ್ಲಿ ತಯಾರಾಗುತ್ತಿದೆ. ವಿಜಯ್ ಸೇತುಪತಿ ಮತ್ತು ಆರ್ ಮಾಧವನ್ ಕಾಣಿಸಿಕೊಂಡಿದ್ದ ಪಾತ್ರಗಳಲ್ಲಿ ಹೃತಿಕ್ ರೋಷನ್ ಮತ್ತು ಸೈಪ್ ಅಲಿ ಖಾನ್ ನಟಿಸುತ್ತಿದ್ದಾರೆ. ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.

  'ಅಲಾ ವೈಕುಂಠಪುರಂಲೋ' ಹಿಂದಿ ರಿಮೇಕ್‌ಗೆ ಎಂಟ್ರಿಯಾದ ಸ್ಟಾರ್ ನಟಿ?'ಅಲಾ ವೈಕುಂಠಪುರಂಲೋ' ಹಿಂದಿ ರಿಮೇಕ್‌ಗೆ ಎಂಟ್ರಿಯಾದ ಸ್ಟಾರ್ ನಟಿ?

  ತಮಿಳಿನ 'ಖೈದಿ'

  ತಮಿಳಿನ 'ಖೈದಿ'

  ತಮಿಳು ನಟ ಕಾರ್ತಿ ನಟಿಸಿದ್ದ ಸೂಪರ್ ಹಿಟ್ ಚಿತ್ರ 'ಖೈದಿ'. ಸೌತ್ ಇಂಡಸ್ಟ್ರಿಯಲ್ಲಿ ಈ ಸಿನಿಮಾ ದೊಡ್ಡ ಸಕ್ಸಸ್ ಕಂಡಿತ್ತು. ಈಗ ಈ ಸಿನಿಮಾದ ರಿಮೇಕ್‌ನಲ್ಲಿ ಅಜಯ್ ದೇವಗನ್ ಅಭಿನಯಿಸುತ್ತಿದ್ದಾರೆ.

  ಹಿಂದಿಗೆ 'ಅಲಾ ವೈಕುಂಠಪುರಂಲೋ'

  ಹಿಂದಿಗೆ 'ಅಲಾ ವೈಕುಂಠಪುರಂಲೋ'

  ಅಲ್ಲು ಅರ್ಜುನ್-ಪೂಜಾ ಹೆಗ್ಡೆ ನಟಿಸಿದ್ದ 'ಅಲಾ ವೈಕುಂಠಪುರಂಲೋ' ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ. ಮ್ಯೂಸಿಕಲಿ ದೊಡ್ಡ ಹಿಟ್ ಆಗಿದ್ದ ಈ ಚಿತ್ರವನ್ನು ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ಮಾಡುತ್ತಿದ್ದಾರೆ. ಕೃತಿ ಸನೂನ್ ನಾಯಕಿಯಾಗಿ ನಟಿಸುತ್ತಿದ್ದಾರೆ.

  ತಮಿಳಿನ 'ಅನ್ನಿಯನ್'

  ತಮಿಳಿನ 'ಅನ್ನಿಯನ್'

  15 ವರ್ಷಗಳ ಹಿಂದೆ ತಮಿಳು ಚಿತ್ರರಂಗದಲ್ಲಿ ದಾಖಲೆ ಬರೆದಿದ್ದ 'ಅನ್ನಿಯನ್' ಸಿನಿಮಾ ಈಗ ಹಿಂದಿಯಲ್ಲಿ ತಯಾರಾಗಲಿದೆ. ನಿರ್ದೇಶಕ ಶಂಕರ್ ಈ ಚಿತ್ರವನ್ನು ಬಾಲಿವುಡ್‌ ತೆಗೆದುಕೊಂಡು ಬಂದಿದ್ದು, ರಣ್ವೀರ್ ಸಿಂಗ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

  ವಿಜಯ್ 'ಮಾಸ್ಟರ್'

  ವಿಜಯ್ 'ಮಾಸ್ಟರ್'

  ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯಿಸಿದ್ದ 'ಮಾಸ್ಟರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬಿಸಿನೆಸ್ ಮಾಡಿತ್ತು. ಈ ಚಿತ್ರದ ಹಿಂದಿ ರಿಮೇಕ್ ಹಕ್ಕು ಸೇಲ್ ಆಗಿದ್ದು, ಸಲ್ಮಾನ್ ಖಾನ್ ನಟಿಸುವ ಸಾಧ್ಯತೆ ಹೆಚ್ಚಿದೆ.

  ನೀನಾದೇನ ಹಾಡಿಗೆ ಧ್ವನಿಯಾದ ಕೊರಿಯನ್ ಬೆಡಗಿ | Filmibeat Kannada
  ಥ್ರಿಲ್ಲರ್-ಕಾಮಿಡಿ ಸಿನಿಮಾಗಳು

  ಥ್ರಿಲ್ಲರ್-ಕಾಮಿಡಿ ಸಿನಿಮಾಗಳು

  ಈ ಚಿತ್ರಗಳ ಜೊತೆ ಇನ್ನಷ್ಟು ಥ್ರಿಲ್ಲರ್ ಹಾಗೂ ಕಾಮಿಡಿ ಸಿನಿಮಾಗಳು ಹಿಂದಿಗೆ ರಿಮೇಕ್ ಆಗುತ್ತಿದೆ. ಮೋಹನ್ ಲಾಲ್ ನಟನೆಯಲ್ಲಿ ಇತ್ತೀಚಿಗಷ್ಟೆ ಬಂದಿದ್ದ 'ದೃಶ್ಯಂ 2' ಹಿಂದಿಗೆ ಬರಲಿದೆ. ಯೋಗಿಬಾಬು, ನಯನತಾರ ನಟಿಸಿದ್ದ 'ಕೋಲಮಾವು ಕೋಕಿಲಾ' ಚಿತ್ರದ ರಿಮೇಕ್ ಹಕ್ಕು ಹಿಂದಿಗೆ ಮಾರಾಟವಾಗಿದೆ. ತೆಲುಗಿನ ಯಶಸ್ವಿ ಸಿನಿಮಾಗಳಾದ 'ನಾಂದಿ', 'ಹಿಟ್' ಸಿನಿಮಾನೂ ಬಿಟೌನ್‌ಗೆ ರಿಮೇಕ್ ಆಗುತ್ತಿದೆ. ರವಿತೇಜ ಅಭಿನಯಿಸಿ ಇನ್ನು ಬಿಡುಗಡೆಯಾಗದ 'ಖಿಲಾಡಿ' ಚಿತ್ರದ ರಿಮೇಕ್ ಹಕ್ಕು ಅದಾಗಲೇ ಸೋಲ್ಡ್ ಆಗಿದೆ.

  English summary
  Upcoming Bollywood remake of popular South Indian movies. Master, Ayyappanum Koshiyum, Vikram Vedha, ala vaikunthapurramuloo films are in the list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X