ಕಲೆಯನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ, ಧರ್ಮದ ಕಾರ್ಡ್ ಆಡ್ತಿದ್ದಾರೆ: ಕಂಗನಾ ವಿರುದ್ಧ ಉರ್ಫಿ ಕಿಡಿ
ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಕಂಗನಾ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಕುರಿತು ಸಾಲು-ಸಾಲು ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. ಪಠಾಣ್ ಯಶಸ್ಸಿನ ಕುರಿತು ಟ್ವೀಟ್ ಮಾಡಿದ್ದ ಕಂಗನಾ, ದೇಶವೂ ಖಾನ್ ಗಳನ್ನೂ ಪ್ರೀತಿಸುತ್ತದೆ. ಆದ್ದರಿಂದ ಪಠಾಣ್ ಸಿನಿಮಾ ಗೆದ್ದಿದೆ ಎಂದು ಹೇಳಿದ್ದರು. ಇದಕ್ಕೆ ಕಿರುತೆರೆ ನಟಿ ಉರ್ಫಿ ಜಾವೇದ್ ತಿರುಗೇಟು ನೀಡಿದ್ದಾರೆ.
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಪಠಾಣ್ ಗೆಲುವಿನ ಟಾನಿಕ ನೀಡಿದೆ. ಹಿಂದಿ ಚಿತ್ರರಂಗದಲ್ಲಿ ಒಂದೊಳ್ಳೆ ಹಿಟ್ ಸಿನಿಮಾ ಬಂದುವರ್ಷಗಳೇ ಕಳೆದಿತ್ತು. ಆದರೆ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಸಿದ್ದಾರ್ಥ್ ಆನಂದ್ ಎಂಟರ್‌ಟೈನರ್ ಪಠಾಣ್ ಗೆಲುವಿನ ನಗೆ ಬೀರಿದ್ದು, ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಬಾಕ್ಸಾಫೀಸ್ ನಲ್ಲಿ ಕೋಟಿ-ಕೋಟಿ ಗಳಿಸುತ್ತಿದೆ. ಈ ಕುರಿತು ಟ್ವೀಟ್ ಮಾಡಿದ್ದ ಕಂಗನಾ ರಣಾವತ್, ದೇಶವು ಎಲ್ಲಾ ಖಾನ್ ಗಳನ್ನು ಮತ್ತು ಬರೀ ಖಾನ್ ಗಳನ್ನು ಪ್ರೀತಿಸುತ್ತದೆ. ಅಷ್ಟೇ ಅಲ್ಲದೆ, ಮುಸ್ಲಿಂ ಸಮುದಾಯದ ನಟಿಯರ ಮೇಲೂ ವ್ಯಾಮೋಹ ಹೊಂದಿದೆ. ಭಾರತವನ್ನು ದೂಷಿಸುವುದು ಅನ್ಯಾಯ. ವಿಶ್ವದಲ್ಲೇ ಭಾರತದಂತಹ ಮತ್ತೊಂದು ದೇಶವಿಲ್ಲ. ಇದು ಬಹಳ ಒಳ್ಳೆಯ ವಿಶ್ಲೇಷಣೆ ಎಂದಿದ್ದರು. ಕಂಗನಾ ಟ್ವೀಟ್ ಗೆ ನಟಿ ಉರ್ಫಿ ಜಾವೇದ್ ಪ್ರತಿಕ್ರಿಯಿಸಿದ್ದು, ಕಂಗನಾ ಕಲೆಯನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ, ಧರ್ಮದ ಕಾರ್ಡ್ ಆಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಉರ್ಫಿ ಟ್ವೀಟ್ ನಲ್ಲಿ ಏನಿದೆ?
ಕಂಗನಾ ರಣಾವತ್ ಟ್ವೀಟ್ ವೈರಲ್ ಆದ ಹಿನ್ನೆಯಲ್ಲಿ ನಟಿ ಉರ್ಫಿ ಜಾವೇದ್ ಟ್ವೀಟರ್ ಮೂಲಕ ಪ್ರಶ್ನಿಸಿದ್ದಾರೆ. ಅಯ್ಯೋ ದೇವರೇ, ಈ ವಿಭಜನೆ ಏನು? ಮುಸ್ಲಿಂ ನಟರು, ಹಿಂದೂ ನಟರು? ಕಲೆಯನ್ನು ಧರ್ಮದಿಂದ ವಿಂಗಡಿಸಲಾಗಿಲ್ಲ. ಕಲಾವಿದರು ಮಾತ್ರ ಇದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕಂಗನಾ ರೀ ಟ್ವೀಟ್
ಉರ್ಫಿ ಜಾವೇದ್ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ರೀ ಟ್ವೀಟ್ ಮಾಡಿರುವ ಕಂಗನಾ, ಹೌದು ನನ್ನ ಪ್ರೀತಿಯ ಉರ್ಫಿ. ಇದು ಆದರ್ಶ ಜಗತ್ತು. ಆದರೆ, ನಾವು ಏಕರೂಪ ನಾಗರಿಕ ಸಂಹಿತೆ ಇಲ್ಲದಿದ್ದರೆ ಅದು ಸಾಧ್ಯವಿಲ್ಲ. ಸಂವಿಧಾನದಲ್ಲಿಯೇ ದೇಶ ವಿಭಜನೆಯಾಗಿದೆ. ಅದು ವಿಭಜನೆಯಾಗಿಯೇ ಉಳಿಯುತ್ತದೆ. 2024ರ ಪ್ರಣಾಳಿಕೆಯಲ್ಲಿ ನರೇಂದ್ರ ಮೋದಿಜಿ ಅವರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಎಲ್ಲರೂ ಒತ್ತಾಯಿಸೋಣ. ಇದನ್ನು ಮಾಡೋಣವೇ ಎಂದು ಉತ್ತರಿಸಿದ್ದಾರೆ.


Click it and Unblock the Notifications











