Urfi Javed: ಉರ್ಫಿ ಜಾವೇದ್ ಇನ್‌ಸ್ಟಾಗ್ರಾಮ್ ಖಾತೆ ಅಮಾನತು! ನಟಿ ಹೇಳಿದ್ದೇನು?

ಉರ್ಫಿ ಜಾವೇದ್ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅಮಾನತು: ಜನಪ್ರಿಯ ಸೋಷಿಯಲ್ ಮೀಡಿಯಾ ಇನ್‌ಫ್ಲುಯೇನ್ಸರ್ ಮತ್ತು ನಟಿ ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಪದೇ ಪದೇ ತಮ್ಮ ವಿಚಿತ್ರ, ವಿಭಿನ್ನ ಬಟ್ಟೆಗಳ ಆಯ್ಕೆಯಿಂದ ಸುದ್ದಿಯಲ್ಲಿರುತ್ತಿದ್ದ ಇವರು, ಈ ಬಾರಿ ಬೇರೆ ವಿಷಯಕ್ಕೆ ಚರ್ಚೆಯಲ್ಲಿದ್ದಾರೆ. ಅದೇನೆಂದರೆ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ಉರ್ಫಿ ಜಾವೇದ್ ಇನ್‌ಸ್ಟಾಗ್ರಾಮ್ ಅಮಾನತು

ತನ್ನ ಅಸಾಂಪ್ರದಾಯಿಕ ಡ್ರೆಸ್ಸಿಂಗ್ ಸೆನ್ಸ್‌ನಿಂದಾಗಿ ಯಾವಾಗಲು ವಿವಾದದಲ್ಲಿರುವ ನಟಿ ಉರ್ಫಿ ಜಾವೇದ್‌ಗೆ ಇನ್ನು 26 ವರ್ಷ. ತನ್ನ ಇನ್‌ಸ್ಟಾಗ್ರಾಮ್ ಅಕೌಂಟ್ ಅಮಾನತಾಗಿರುವ ಬಗ್ಗೆ ಅವರೆ ತಮ್ಮ ಅಭಿಮಾನಿಗಳು ಮತ್ತು ಫಾಲೋವರ್ಸ್‌ಗಳಿಗೆ ಸುದ್ದಿ ನೀಡಿದ್ದರು. ತನ್ನ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು.

Urfi Javed Instagram Account Temporarily Suspended: actress Reacts

ಇನ್‌ಸ್ಟಾಗ್ರಾಮ್ ವೇದಿಕೆಯಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವುದಕ್ಕೆ ಅದರದ್ದೇ ಆದ ನಿಯಮಗಳಿವೆ. ಆದರೆ, ಉರ್ಫಿ ಜಾವೇದ್ ಅವರು, ತಮ್ಮ ಖಾತೆಯಲ್ಲಿ ಸಕತ್ ಬೋಲ್ಡ್ ಆಗಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಆದರೆ, ಇದೇ ಕಾರಣಕ್ಕೆ ಅವರ ಖಾತೆಯನ್ನು ಅಮಾನತು ಮಾಡಲಾಗಿತ್ತೇ ಎಂಬ ನಿಖರವಾದ ಕಾರಣಗಳು ತಿಳಿದಿಲ್ಲ.

ಮತ್ತ ಉರ್ಫಿ ಜಾವೇದ್ ಖಾತೆ ಸಕ್ರಿಯ

ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿದ ನಂತರ, ನಟಿ, ಅದರ ಬಗ್ಗೆ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ಕಳಿಸಿರುವ ಮೆಸೇಜ್ ಒಂದರ ಸ್ಕ್ರೀನ್‌ಶಾಟ್ ಅನ್ನು ತನ್ನ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಈ ಪೋಸ್ಟ್‌ಗೆ ಸಕತ್ ಶೀರ್ಷಿಕೆ ಕೊಟ್ಟು ತನ್ನನ್ನು ದ್ವೇಷಿಸುವವರನ್ನು ವ್ಯಂಗ್ಯವಾಡಿದ್ದಾರೆ.

ತನ್ನ ಇನ್‌ಸ್ಟಾಗ್ರಾಮ್ ಖಾತೆ ಅಮಾನತು ಆಗಿರುವುದಕ್ಕೆ ಹಲವರ ಬಹುದಿನಗಳ ಆಸೆ ಈಡೇರಿದೆ ಎಂದು ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ, ಉರ್ಫಿ ಇನ್‌ಸ್ಟಾಗ್ರಾಮ್‌ನಿಂದ ಬಂದ ಮತ್ತೊಂದು ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕೆಲವು ತಪ್ಪಿನಿಂದಾಗಿ ಅವರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.

Urfi Javed Instagram Account Temporarily Suspended: actress Reacts

ಉರ್ಫಿ ಜಾವೇದ್ ಖಾತೆ ಅಮಾನತಿಗೆ ನೆಟಿಜನ್‌ಗಳ ಪ್ರತಿಕ್ರಿಯೆ

ಉರ್ಫಿ ಜಾವೇಸ್ ಅವರ ಇನ್‌ಸ್ಟಾಗ್ರಾಮ್ ಖಾತೆ ಅಮಾನತಿಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಅನೇಕ ಅಭಿಮಾನಿಗಳು ನಟಿಗೆ ಬೆಂಬಲ ವ್ಯಕ್ತಪಡಿಸಿದರೆ, ಕೆಲವರು ಅವರನ್ನು ಮತ್ತೆ ಟ್ರೋಲ್ ಮಾಡಲಿ ಈ ಅವಕಾಶವನ್ನು ಬಳಸಿಕೊಂಡಿದ್ದಾರೆ. ಅವರಿಗೆ ಹೀಗೆ ಆಗಬೇಕಿತ್ತು, ಅದೇ ಆಗಿದೆ ಎಂದು ಹೇಳಿದ್ದಾರೆ.

ಒಬ್ಬ ಇನ್‌ಸ್ಟಾಗ್ರಾಮ್ ಬಳಕೆದಾರರು, 'ಇದು ನಾನು ನೋಡಿದ 2023 ರ ಅತ್ಯುತ್ತಮ ಪೋಸ್ಟ್' ಎಂದು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು, 'ಅವರ ಖಾತೆ ಅಮಾನತು ಮಾಡಿರುವುದು ಒಳ್ಳೆಯದು' ಎಂದು ಹೇಳಿದರು. ಮತ್ತೊಬ್ಬ ಬಳಕೆದಾರರು, " ಉರ್ಫಿ ಮತ್ತಿ ಅವರಂತೆಯೇ ಇನ್‌ಸ್ಟಾಗ್ರಾಮ್‌ನಲ್ಲಿ ನಗ್ನತೆಯನ್ನು ಹಂಚುವವರ ಎಲ್ಲಾ ಖಾತೆಗಳನ್ನು ಅಮಾನತು ಮಾಡಬೇಕು" ಎಂದು ಆಗ್ರಹಿಸಿದ್ದಾರೆ.

ಇತ್ತ, ನಟಿ ಕಿರುತೆರೆ, ರಿಯಾಲಿಟಿ ಶೋ, ವೆಬ್ ಸೀರಿಸ್‌, ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಲ್ಳುತ್ತಿದ್ದ ಉರ್ಫಿ ಜಾವೇದ್ ಏಕ್ತಾ ಕಪೂರ್ ಅವರ ಲವ್ ಸೆಕ್ಸ್ ಔರ್ ಧೋಖಾ 2 ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.

More from Filmibeat

English summary
Urfi Javed Instagram account faced a temporary suspended.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X