ಉರ್ಫಿ ಜಾವೆದ್ ಮೈತುಂಬಾ ಮುತ್ತು: ಟಾಪ್‌ಲೆಸ್ ಫೋಟೋ ಹಾಕಿ, ಅಕೌಂಟ್ ಡಿಲೀಟ್ ಮಾಡ್ತಿನಿ ಎಂದ ಬೆಡಗಿ!
ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ತಮ್ಮ ವಿಚಿತ್ರ ಮತ್ತು ವಿಭಿನ್ನ ಫೋಟೋಗಳಿಗೆ ಹೆಸರುವಾಸಿ. ಈ ಫೋಟೋ, ವಿಡಿಯೋಗಳಿಂದ ಟ್ರೋಲ್ ಆಗುವ ಅವರಿಗೆ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಕೂಡ ಇದೆ. ನಟಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಕತ್ ಬೋಲ್ಡ್ ಫೋಟೋ ಹಾಕಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಶಾಕ್ ಕೂಡ ನೀಡಿದ್ದಾರೆ.
ಉರ್ಫಿ ಜಾವೇದ್ ಇಲ್ಲಿಯವರೆಗೆ ತನ್ನ ಅನೇಕ ವಿಚಿತ್ರ ಅವತಾರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಉರ್ಫಿ ತಮ್ಮ ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಆಕೆ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳ ಜೊತೆಗೆ ಉರ್ಫಿ ತನ್ನ ಅಭಿಮಾನಿಗಳ ಜೊತೆಗೆ ಹೊಸ ವಿಷಯ ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಉರ್ಫಿಯ ಮೈ ತುಂಬಾ ಮುತ್ತುಗಳು!
ಉರ್ಫಿ ಜಾವೇದ್ ಹಂಚಿಕೊಂಡಿರುವ ಫೋಟೋಗಳಲ್ಲಿ ಟಾಪ್‌ಲೆಸ್ ಆಗಿದ್ದು, ಮೈ ತುಂಬಾ ಮುತ್ತುಗಳ ಮಾರ್ಕ್‌ಗಳಿವೆ. ಕೆಂಪು ಲಿಪ್‌ಸ್ಟಿಕ್ ಹಂಚಿಕೊಂಡು ಮೈ ತುಂಬಾ ಲಿಪ್ ಮಾರ್ಕ್ ಮಾಡಲಾಗಿದೆ. ಎಮ್ಮ ಎದೆಯನ್ನು ಎರಡು ಕೈಗಳಿಂದ ಮುಚ್ಚಿಕೊಂಡು ಮಾದಕವಾಗಿ ಫೋಸ್ ನೀಡಿದ್ದಾರೆ. ಟಾಪ್ ಲೆಸ್ ಆಗಿದ್ದು, ಕಪ್ಪು ಪ್ಯಾಂಟ್ ಧರಿಸಿದ್ದಾರೆ.
ಈ ಫೋಟೋಗೆ ನೆಟ್ಟಿಗರು ಸಕತ್ ಟ್ರೋಲ್ ಮಾಡುತ್ತಾ, ಮುತ್ತು ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ. ಕೆಲವರು ಆ ಅವಕಾಶ ನನಗಾದರೂ ಕೊಡಬಾರದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ಫೋಟೋಗಳನ್ನು ಸಕತ್ ಮೆಚ್ಚಿಕೊಂಡಿದ್ದು, "ಈ ಚಿತ್ರವು ಕೆಲವು ಮ್ಯಾಗಜೀನ್‌ಗಳ ಫ್ರೆಂಟ್ ಕವರ್ ಫೋಟೋ ಆಗಬೇಕು" ಎಂದು ಹೇಳಿದ್ದು, ಬೆಂಕಿ ಎಂದು ಎಮೋಜಿ ಹಾಕಿದ್ದಾರೆ.
ಅಕೌಂಟ್ ಡಿಲೀಟ್ ಮಾಡ್ತಿನಿ ಎಂದ ಉರ್ಫಿ
ಇನ್ನು, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್‌ಗಳಿಗೆ ಒಳ್ಳೆ ಕಂಟೆಂಟ್ ನೀಡುತ್ತಿರುವ ಉರ್ಫಿ ತನ್ನ ಇನ್‌ಸ್ಟಾಗ್ರಾಮ್ ಅಕೌಂಟ್ ಡಿಲೀಟ್ ಮಾಡುವುದಾಗಿಯೂ ಹೇಳಿದ್ದಾರೆ. 'ನಾನು ಶೀಘ್ರದಲ್ಲೇ ನನ್ನ ಖಾತೆಯನ್ನು ಡಿಲೀಟ್ ಮಾಡಲಿಲಿದ್ದೇನೆ' ಎಂದು ಟಾಪ್‌ಲೆಸ್ ಫೋಟೋಗಳಿಗೆ ಶೀರ್ಷಿಕೆ ಬರೆದಿದ್ದಾರೆ. ಹೀಗಾಗಿ ಆಕೆಯ ವಿಭಿನ್ನ ಅವತಾರಗಳನ್ನು ನೋಡುತ್ತಿದ್ದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಉರ್ಫಿಯ ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬರುತ್ತಿದೆ. ಕೆಲವರು 'ನಿಮ್ಮ ಖಾತೆಯನ್ನು ಡಿಲೀಟ್ ಮಾಡಿದರೇ ಒಳ್ಳೆಯದು' ಎಂದು...ಮತ್ತೊಬ್ಬರು ಇದು ಒಳ್ಳೆಯ ನಿರ್ಧಾರ ಎಂದೂ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೋಬ್ಬರು ಆಕೆಗೆ ಬೆಂಬಲ ನೀಡಿದ್ದು, " ನಿಮ್ಮ ಖಾತೆಯನ್ನು ಡಿಲೀಟ್ ಮಾಡಿದರೇ ನಾನು ಇನ್‌ಸ್ಟಾಗ್ರಾಮ್ ಬಿಟ್ಟು ಹೋಗುತ್ತೇನೆ" ಎಂದು ಬೇಸರಿಸಿದ್ದಾರೆ.
ಹೊಸ ಅಕೌಂಟ್ ತೆರೆದ ಉರ್ಫಿ!
ಇನ್‌ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡುತ್ತೇನೆ ಎಂದು ಬಳಿಕ ಮತ್ತೊಂದು ಅಕೌಂಟ್ ಓಪನ್ ಮಾಡಿದ್ದಾರೆ. ಕೆಲವು ಸಮಸ್ಯೆಗಳಿಂದಾಗಿ ಅಕೌಂಟ್ ಡಿಲೀಟ್ ಮಾಡಬೇಕಾಗಿದೆ ಎಂದು ಉರ್ಫಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ. ಹೊಸ ಅಕೌಂಟ್‌ಗೆ ಈಗಾಗಲೇ ಹದಿನೈದು ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಬಂದಿದ್ದಾರೆ.


Click it and Unblock the Notifications











