Urfi Javed: ಬಾಳೆ ಹಣ್ಣಿನ ಸಿಪ್ಪೆಯನ್ನು ಹೀಗೂ ಬಳಸುತ್ತಾರಾ ಉರ್ಫಿ ಜಾವೇದ್?
ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಕಿಚ್ಚು ಹಚ್ಚುವವರಲ್ಲಿ ಮೊದಲಿಗರು ಬಿಗ್ ಬಾಸ್‌ನ ಮಾಜಿ ಸ್ಪರ್ಧಿ, ನಟಿ ಉರ್ಫಿ ಜಾವೇದ್. ವಿಚಿತ್ರ ಮತ್ತು ಬೋಲ್ಡ್ ಬಟ್ಟೆಗಳಿಂದ ಯಾವಾಗಲು ಸುದ್ದಿಯಲ್ಲಿರುತ್ತಾರೆ. ಸದ್ಯಕ್ಕೆ ತಿಂದು ಎಸೆಯುವ ಬಾಳೆ ಹಣ್ಣಿನ ಸಿಪ್ಪೆಯನ್ನು ಬಟ್ಟೆ ಮಾಡಿಕೊಂಡಿದ್ದಾರೆ ಉರ್ಫಿ ಜಾವೇದ್.
ಬಾಳೆಹಣ್ಣಿನ ಸಿಪ್ಪೆಯನ್ನು ಧರಿಸಿ ವಿಡಿಯೋ ಮಾಡಿದ್ದು, ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಜೊತೆಗೆ ಆಕೆಯನ್ನು ಸಕತ್ ಟ್ರೋಲ್ ಮಾಡಲಾಗುತ್ತಿದೆ. ಹಲವು ಮಂದಿ ವಿಡಿಯೋಗೆ ಕಾಮೆಂಟ್ ಮಾಡುವ ಮೂಲಕ ಟೀಕಿಸುತ್ತಿದ್ದಾರೆ.

ಬಾಳೆ ಹಣ್ಣಿನ ಸಿಪ್ಪೆ ಮತ್ತು ಉರ್ಫಿ ಜಾವೇದ್
ನಟಿ ಉರ್ಫಿ ಜಾವೇದ್ ಯಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎರಡು ಬಾಳೆ ಹಣ್ಣಿನ ಸಿಪ್ಪೆಯನ್ನು ತಮ್ಮ ಎದೆಯ ಭಾಗವನ್ನು ಮುಚ್ಚಿಕೊಳ್ಳಲು ಬಳಸಿದ್ದಾರೆ. ಒಂದು ಬಾಳೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ತಿನ್ನುತ್ತಿದ್ದಾರೆ. ನೆಲದ ಮೇಲೆ ಮಲಗಿರುವ ಅವರು ಕೈಯಲ್ಲಿ ಬಾಳೆ ಹಣ್ಣನ್ನು ಹಿಡಿದುಕೊಂಡು ಮಾದಕ ನೋಟ ನೀಡಿದ್ದಾರೆ.
ಹಲವಾರು ಇಂಟರ್‌ನೆಟ್ ಬಳಕೆದಾರರು ಉರ್ಫಿಯ ಈ ವಿಡಿಯೋವನ್ನು ಟ್ರೋಲ್ ಮಾಡುತ್ತಿದ್ದಾರೆ. ಬಳಕೆದಾರರಲ್ಲಿ ಒಬ್ಬರು ಆಕೆಯ ಫ್ಯಾಶನ್ ಸೆನ್ಸ್ ಅನ್ನು ಪ್ರಶ್ನಿಸಿದ್ದಾರೆ. "12 ರೂಪಾಯಿಯ ಬಟ್ಟೆ ಇದು.... ಸೇಲ್ ಸೇಲ್ ಸೇಲ್" ಎಂದು ಬರೆದಿದ್ದಾರೆ. ಮತ್ತೊಬ್ಬರು "ಹಣ್ಣುಗಳು ಮುಗಿದಿವೆ... ಈಗ ಬೇಳೆಕಾಳು ಮತ್ತು ಅಕ್ಕಿಯಿಂದ ಬಟ್ಟೆಗಳನ್ನು ಮಾಡಿಕೊಳ್ಳಿ" ಎಂದು ವ್ಯಂಗ್ಯವಾಡಿದ್ದಾರೆ.
ನಟಿ ಉರ್ಫಿ ಜಾವೇದ್, ತನ್ನದೆ ಒಂದು ಫ್ಯಾನ್ ಬೇಸ್ ಕಟ್ಟುಕೊಂಡಿದ್ದಾರೆ. ತಮ್ಮ 'ಕ್ರಿಯೇಟಿವ್' ಯೋಚನೆಗಳಿಂದ ಹಲವು ಜನರನ್ನು ಬೆಕ್ಕಸ ಬೆರಗಾಗಿಸಿದ್ದು, ಹಾಗೆಯೇ ಟ್ರೋಲ್‌ಗಳಿಗೂ ಆಹಾರವಾಗುತ್ತಾರೆ. ಅವರಿಗೆ ಏನೇ ಕೊಟ್ಟರು ಅದನ್ನು ಬಟ್ಟೆಯಂತೆ ಧರಿಸಿಕೊಳ್ಳುತ್ತಾರೆ. ಪೇಪರ್, ಗೋಣಿಚೀಲ, ಬಾಚಣಿಕೆ ಎಲ್ಲವೂ ಬಟ್ಟೆಯಾಗಿ ಬದಲಾಯಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಕೂಡ ಉರ್ಫಿ ಜಾವೇದ್ ಅವರ ಫ್ಯಾಶನ್ ಅನ್ನು ಶ್ಲಾಘಿಸಿದ್ದರು. ಉರ್ಫಿಯ ಆತ್ಮವಿಶ್ವಾಸವನ್ನು ಇಷ್ಟಪಟ್ಟಿದ್ದರು. "ಆಕೆ ಬಯಸಿದಂತೆ ಆಕೆ ಬದುಕುತ್ತಾರೆ. ನಿಮ್ಮ ನಿಮ್ಮನ್ನು ಇಷ್ಟಪಡುವಾಗ ಮತ್ತು ಕಂಫರ್ಟ್ ಆಗಿ ಇದ್ದಾಗ ಏನೇ ಧರಿಸಿದರು ಅದು ಫ್ಯಾಷನ್ ಆಗಿಯೇ ಇರುತ್ತದೆ. ನಾನು ಆಕೆಯ ಆತ್ಮವಿಶ್ವಾಸವನ್ನು ಪ್ರೀತಿಸುತ್ತೇನೆ" ಎಂದಿದ್ದರು.
ನಟಿ ಉರ್ಫಿ ಜಾವೇದ್ ಬಿಗ್ ಬಾಸ್‌ಗೆ ಬರುವ ಮುನ್ನ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಮತ್ತು ಕಸೌಟಿ ಜಿಂದಗಿ ಕೇ ಸೇರಿದಂತೆ ಹಲವಾರು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ ನಂತರ ಉರ್ಫಿ ಖ್ಯಾತಿ ಗಳಿಸಿದರು. ಇತ್ತೀಚೆಗೆ, ಉರ್ಫಿ ಜಾವೇದ್ ರಿಯಾಲಿಟಿ ಟಿವಿ ಶೋ ಸ್ಪ್ಲಿಟ್ಸ್ವಿಲ್ಲಾದ 14 ನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











