For Quick Alerts
  ALLOW NOTIFICATIONS  
  For Daily Alerts

  ಉರಿ ಖ್ಯಾತಿಯ ನಟ ನವ್ತೇಜ್ ಹಂಡಲ್ ನಿಧನ

  |

  ಬಾಲಿವುಡ್ ನಟ ನವ್ತೇಜ್ ಹಂಡಲ್ ಸೋಮವಾರ ಸಂಜೆ ನಿಧನರಾಗಿದ್ದಾರೆ. ಸಾವಿಗೆ ಖಚಿತವಾದ ಕಾರಣ ಏನು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಆದ್ರೆ, ಟಿವಿ ಮತ್ತು ಸಿನಿ ಕಲಾವಿದರ ಸಂಘ ಈ ಸುದ್ದಿಯನ್ನ ಸ್ಪಷ್ಟಪಡಿಸಿದೆ.

  ವಿಕ್ಕಿ ಕೌಶಲ್ ಅಭಿನಯದ ಉರಿ ಸರ್ಜಿಕಲ್ ಸ್ಟ್ರೈಕ್ ಚಿತ್ರದಲ್ಲಿ ನವ್ತೇಜ್ ನಟಿಸಿದ್ದರು. ಹೋಮ್ ಮಿನಿಸ್ಟರ್ (ಅಂದಿನ ಗೃಹ ಮಂತ್ರಿ ರಂಜಿತ್ ಸಿಂಗ್) ಪಾತ್ರದಲ್ಲಿ ನಟಿಸಿದ್ದ ನವ್ತೇಜ್ ಗೆ ಇದೇ ಕೊನೆಯ ಚಿತ್ರ.

  ಖಳನಾಯಕ್, ತೇರೆ ಮೇರೆ ಸಪ್ನೆ ಅಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದ ನವ್ತೇಜ್, ನಟನೆ ಮಾತ್ರವಲ್ಲದೇ ನಟನೆ ತರಬೇತಿಯ ಕ್ಲಾಸ್ ಕೂಡ ನಡೆಸುತ್ತಿದ್ದರು.

  ನವ್ತೇಜ್ ಹಂಡಲ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನ ಅಗಲಿದ್ದಾರೆ. ನವ್ತೇಜ್ ಅವರ ಒಬ್ಬ ಮಗಳು ಟಿವಿ ಜಾಹೀರಾತಿನಲ್ಲಿ ನಟಿಸಿದ್ದಾರೆ. ಹಿಂದಿ ಚಿತ್ರರಂಗದ ಅನುಭವಿ ನಟನ ಅಗಲಿಕೆ ಅನೇಕ ಕಲಾವಿದರು ಕಂಬನಿ ಮಿಡಿದಿದ್ದಾರೆ.

  English summary
  Navtej Hundal, who played the home minister in Uri: The Surgical Strike, died in Mumbai on Monday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X