For Quick Alerts
  ALLOW NOTIFICATIONS  
  For Daily Alerts

  ಸೈನಿಕರ ಜೊತೆ 'ಉರಿ' ನೋಡುವ ಅವಕಾಶ, ಈಗಲೇ ಟಿಕೆಟ್ ಕಾಯ್ದಿರಿಸಿ

  |

  ಸ್ಟಾರ್ ನಟರ ಕಮರ್ಷಿಯಲ್ ಚಿತ್ರಗಳ ನಡುವೆ ಇಡೀ ದೇಶದ ಗಮನ ಸೆಳೆಯುತ್ತಿರುವ ಸೂಪರ್ ಹಿಟ್ ಸಿನಿಮಾ 'ಉರಿ'. 2016ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ಸೈನಿಕರು ಪಾಕ್ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸ್ತಾರೆ. ಈ ಘಟನೆಯ ಕುರಿತು ಈ ಸಿನಿಮಾ ಮಾಡಲಾಗಿದ್ದು, ಚಿತ್ರಪ್ರೇಮಿಗಳ ಮನಗೆದ್ದಿದೆ.

  ವಿಕ್ಕಿ ಕೌಶಲ್, ಪರೇಶ್ ರಾವಲ್, ಯಾಮಿ ಗೌತಮ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿರುವ ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ನೋಡಿದ ಪ್ರತಿಯೊಬ್ಬರು ಎದ್ದು ನಿಂತು ಭಾರತೀಯ ಸೈನಿಕರಿಗೆ ಸಲಾಂ ಹೇಳುತ್ತಿದ್ದಾರೆ.

  2016ರ ಸೆಪ್ಟೆಂಬರ್​ 18ರಂದು ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ನಾಲ್ವರು ಭಯೋತ್ಪಾದಕರು ದಾಳಿ ಮಾಡ್ತಾರೆ. ಈ ವೇಳೆ 19 ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರ ನೀಡಲು ಭಾರತದ ಯೋಧರು ಸೆಪ್ಟೆಂಬರ್ 28-29ರಂದು ಸರ್ಜಿಕಲ್​ ಸ್ಟ್ರೈಕ್​ ನಡೆಸುತ್ತಾರೆ. ಇದಕ್ಕಾಗಿ ಭಾರತೀಯ ಸೇನೆಯ ಸಿದ್ಧತೆ ಹೇಗಿತ್ತು, ದಾಳಿ ವೇಳೆ ಎದುರಾದ ಕಷ್ಟಗಳೇನು ಎಂಬುದೇ ಉರಿ ಸಿನಿಮಾ.

  Uri Movie Review: ದೇಶಭಕ್ತಿ ಮತ್ತು ಸೇಡಿನ ಜ್ವಾಲೆ

  ಇಂತಹ ದೇಶಭಕ್ತಿಯ ಚಿತ್ರವನ್ನ ಭಾರತದ ಮಾಜಿ ಸೈನಿಕರ ಜೊತೆ ನೋಡುವ ಸದಾವಕಾಶ ಈಗ ಸಿಕ್ಕಿದೆ. ಬೆಂಗಳೂರಿನ ಬೆಳ್ಳಂದೂರು ಪಿವಿಆರ್ ಸೆಂಟ್ರಲ್ ಮಾಲ್ ನಲ್ಲಿ ಜನವರಿ 27ರಂದು ವಿಶೇಷ ಪ್ರದರ್ಶನ ಏರ್ಪಡಿಸಲಾಗಿದ್ದು, ಈ ಶೋನಲ್ಲಿ ನೀವು ಭಾಗವಹಿಸಬಹುದು.

  'ಉರಿ' ಸಿನೆಮಾ ನೋಡಿದ ನಂತರ ಹಳೆಯ ನೆನಪುಗಳ ಮೆರವಣಿಗೆ

  ಜನವರಿ 27 ರ ಮಧ್ಯಾಹ್ನ 12.50 ಶೋ ಇದೆ. ಈ ಶೋಗಾಗಿ ನೀವು ಆನ್ ಲೈನ್ ನಲ್ಲಿ ಈಗಲೇ ಟಿಕೆಟ್ ಬುಕ್ ಮಾಡಿ. 12 ಗಂಟೆಗೆ ಸೈನಿಕರ ಜೊತೆ ಸಂವಾದವೂ ನಡೆಸಬಹುದು. ಸೈನಿಕರು ತಮ್ಮ ಅನುಭವಗಳನ್ನ ಹಂಚಿಕೊಳ್ಳಲಿದ್ದಾರೆ.

  English summary
  Don't miss the amazing experience watching a movie with ex army men. Tickets are getting sold out quickly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X