ಶಿವಸೇನಾ ಸೇರುವ ವದಂತಿ ತಳ್ಳಿ ಹಾಕಿದ ಊರ್ಮಿಳಾ ಮತೋಡ್ಕರ್

ಕಾಂಗ್ರೆಸ್‌ನಿಂದ ಚುನಾವಣೆ ಸ್ಪರ್ಧಿಸಿ ಸೋಲುಂಡು, ನಂತರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ನಟಿ ಊರ್ಮಿಳಾ ಮತೋಡ್ಕರ್, ಶಿವಸೇನಾ ಪಕ್ಷ ಸೇರ್ಪಡೆಗೊಳ್ಳುತ್ತಾರೆ ಎನ್ನಲಾಗಿತ್ತು, ಆ ಬಗ್ಗೆ ಸ್ವತಃ ಊರ್ಮಿಳಾ ಮತೋಡ್ಕರ್ ಸ್ಪಷ್ಟನೆ ನೀಡಿದ್ದಾರೆ.

ಗಾಳಿಸುದ್ದಿಗಳಿಗೆ ತೆರೆ ಎಳೆದಿರುವ ಊರ್ಮಿಳಾ ಮತೋಡ್ಕರ್, 'ಶಿವಸೇನಾ ಪಕ್ಷ ಸೇರುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಶಿವಸೇನಾ ಪಕ್ಷವು ಊರ್ಮಿಳಾ ಮತೋಡ್ಕರ್ ಅವರನ್ನು ಎಂಎಲ್‌ಸಿ ಅನ್ನಾಗಿ ಮಾಡುತ್ತಿದೆ ಎಂಬ ಸುದ್ದಿ ದಟ್ಟವಾಗಿ ಹರಿದಾಡಿತ್ತು. ಮಹಾರಾಷ್ಟ್ರ ಸಿಎಂ ಆಪ್ತ, ಹರ್ಷಲ್ ಪ್ರಧಾನ್, 'ಸಿಎಂ ಉಪಸ್ಥಿತಿಯಲ್ಲಿ ಊರ್ಮಿಳಾ ಮತೋಡ್ಕರ್ ಶಿವಸೇನಾ ಪಕ್ಷ ಸೇರಲಿದ್ದಾರೆ' ಎಂದಿದ್ದರು.

 Urmila Mathodkar Denies That She Is Joing Shiv Sena Party

ಆದರೆ ಎಲ್ಲವನ್ನೂ ಸುಳ್ಳುಸುದ್ದಿ ಎಂದು ಕರೆದಿರುವ ಊರ್ಮಿಳಾ ಮತೋಡ್ಕರ್, 'ನಾನು ಶಿವಸೇನಾ ಪಕ್ಷ ಸೇರುತ್ತಿಲ್ಲ' ಎಂದು ಹೇಳಿದ್ದಾರೆ. ಆಂಗ್ಲ ಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದಾರೆ.

ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟಿ ಊರ್ಮಿಳಾ ಮತೋಡ್ಕರ್ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಸೋಲನುಭವಿಸಿದರು ಊರ್ಮಿಳಾ. ನಂತರ ಪಕ್ಷದ ಆಂತರಿಕ ಕಾರಣದ ನೆಪವೊಡ್ಡಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದರು ಊರ್ಮಿಳಾ.

ಕೆಲವು ದಿನಗಳ ಹಿಂದೆ ಕಂಗನಾ ಜೊತೆ ಟ್ವಿಟ್ಟರ್‌ ವಾಗ್ವಾದದಲ್ಲಿ ಸಿಲುಕಿದ್ದರು ಊರ್ಮಿಳಾ, ನಟಿ ಊರ್ಮಿಳಾರನ್ನು 'ಸಾಫ್ಟ್ ಪಾರ್ನ್' ನಟಿ ಎಂದು ಕರೆದಿದ್ದರು ಕಂಗನಾ.

More from Filmibeat

English summary
Actress Urmila Mathodkar denies reports that she is joining Shiv Sena party. She was with congress then resigned to the party.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X