ಕೇವಲ ಎರಡೇ ವರ್ಷದಲ್ಲಿ ರಂಗೀಲಾ ಊರ್ಮಿಳಾನ ಮರೆತು ಎರಡನೇ ಮದುವೆಯಾದ ಮಾಜಿ ಗಂಡ ; ಹುಡುಗಿ ಯಾರು ಅನ್ನೋದೇ ಚಿಂತೆ

ಮದುವೆ ಬದುಕಿನ ಮಹತ್ವದ ಹಂತ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೆ ಮದುವೆ ಎನ್ನುವುದು ಒಂದೆರಡು ದಿನದ ಆಟ ಅಲ್ಲ, ಜೀವನ ಪೂರ್ತಿ ಸಂಗಾತಿಯ ಜೊತೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ.

ಆದರೆ ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿ ಕೈಮೀರಿ ಹೋಗಿರುತ್ತವೆ. ಆಗ ವಿಚ್ಛೇದನ ಪಡೆಯದೇ ಬೇರೆ ದಾರಿಯೇ ಇಲ್ಲ ಎಂಬ ಭಾವನೆ ಬರುತ್ತೆ. ನಿರೀಕ್ಷೆಯಂತೆ ಸಂಬಂಧ ಕೂಡ ಮುರಿದು ಬೀಳುತ್ತೆ. ಹೀಗೆ ದಾಂಪತ್ಯ ಅಂತ್ಯವಾದಾಗ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ. ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಇನ್ನು ಕೆಲವರು ಅಳೆದು ತೂಗಿ ಹೊಸ ಭರವಸೆಯ ಜೊತೆ ಹೊಸ ಬದುಕಿಗೆ ಇನ್ನೊಮ್ಮೆ ಮುನ್ನುಡಿ ಬರೆಯಲು ಅಣಿಯಾಗುತ್ತಾರೆ. ಉದಾಹರಣೆಗೆ ಮೊಹ್ಸಿನ್ ಅಖ್ತರ್ ಮೀರ್.

Urmila Matondkar s Ex Mohsin Akhtar Secretly Marries Again

ಹೌದು, ಮೊಹ್ಸಿನ್ ಅಖ್ತರ್ ಮೀರ್.. ಕಾಶ್ಮೀರದ ಚೆಲುವ. ಚಿತ್ರರಂಗದಲ್ಲಿ ಮಿಂಚಬೇಕೆಂಬ ಆಸೆಯಲ್ಲಿ ಮುಂಬೈಗೆ ಬಂದಿದ್ದರು ಇವರು. ಆದರೆ.. ಮೋಹ್ಸಿನ್ ಅಖ್ತರ್ ಗೆ ಚಿತ್ರರಂಗ ಕೈ ಹಿಡಿಯಲಿಲ್ಲ. ಬದಲಿಗೆ ಕೈ ಹಿಡಿದಿದ್ದು ಬಾಲಿವುಡ್‌ನ ರಂಗೀಲಾ ಊರ್ಮಿಳಾ ಮಾತೋಂಡ್ಕರ್.

ವಯಸ್ಸಿನಲ್ಲಿ ತಮಗಿಂತ ಹತ್ತು ವರ್ಷ ಚಿಕ್ಕವನಾದರು ಕೂಡ ಮೊಹ್ಸಿನ್‌ಗೆ ಊರ್ಮಿಳಾ ಮನ ಸೋತರು. ಇನ್ನು ಇಬ್ಬರ ಧರ್ಮ ಬೇರೆ ಬೇರೆ. ಇನ್ನು ನಿಮಗೆ ಗೊತ್ತು. ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ.

ಆದರೂ ಕೂಡ ಪ್ರೀತಿ ಮಾಡಿದರೆ ಜಗಕೆ ಹೆದರಬಾರದು ಎಂಬಂತೆ ಮೊಹ್ಸಿನ್ ಜೊತೆ ಮದುವೆಯೂ ಆದರು. 2016ರ ಫೆಬ್ರವರಿ 4ರಂದು ಕೇವಲ ಕೆಲವೇ ಕೆಲ ತಮ್ಮ ಅತ್ಯಾಪ್ತರ ಸಮ್ಮುಖದಲ್ಲಿ ಹೊಸ ಬದುಕಿಗೆ ಮುನ್ನುಡಿ ಬರೆದರು. ಆದರೆ, ಹೀಗೆ ಮನ ಮೆಚ್ಚಿದ ಹುಡುಗನನ್ನು ಮದುವೆಯಾದ ಊರ್ಮಿಳಾಗೆ ಸಂಸಾರದ ಸುಖ ಸಿಕ್ಕಿದ್ದು ಕೇವಲ 8 ವರ್ಷ ಮಾತ್ರ.

2024ರಲ್ಲಿ ಮೊಹ್ಸಿನ್ ಅವರಿಂದ ಊರ್ಮಿಳಾ ದೂರ ಆದರು. ಈಗ ವಿಚ್ಚೇದನ ಪಡೆದ ಒಂದೂವರೆ ಎರಡು ವರ್ಷದ ನಂತರ, ಮೊಹ್ಸಿನ್ ಸದ್ದಿಲ್ಲದೇ ಎರಡನೇ ಮದುವೆಯಾಗಿದ್ದಾರೆ.ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ
ಫೋಟೊ ಹಂಚಿಕೊಂಡು ಎಲ್ಲರ ತಲೆಗೆ ಹುಳ ಬಿಟ್ಟಿದ್ಧಾರೆ.

Urmila Matondkar s Ex Mohsin Akhtar Secretly Marries Again

ಹಂಚಿಕೊಂಡ ಫೋಟೊದಲ್ಲಿ ಮೊಹ್ಸಿನ್, ಹುಡುಗಿಯ ಮುಖ ತೋರಿಸಿಲ್ಲ. ತಮ್ಮ ಅಭಿಮಾನಿಗಳಿಗೆ ಪರಿಚಯವೂ ಕೂಡ ಮಾಡಿಸಿಲ್ಲ. ಬದಲಿಗೆ ಕೇವಲ ಮೆಹಂದಿ ಹಾಕಿಕೊಂಡ ಫೋಟೊವನ್ನು ಮಾತ್ರ ಹಂಚಿಕೊಂಡಿದ್ಧಾರೆ. ಕೈಯಲ್ಲಿರುವ ಡೈಮಂಡ್ ರಿಂಗ್ ಮಾತ್ರ ಎದ್ದು ಕಾಣ್ತಿದೆ.

ಸದ್ಯ ಈ ಫೋಟೋ ವೈರಲ್ ಆಗಿದ್ದು, ಮೊಹ್ಸಿನ್ ಜೀವನದಲ್ಲಿ ಬಂದಿರುವ ಈ ಮಿಸ್ಟರಿ ಗರ್ಲ್ ಯಾರು? ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಕೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಮಾಡುತ್ತಿದ್ಧಾರೆ. ಕೇವಲ ಒಂದೂವರೆ ಎರಡು ವರ್ಷಕ್ಕೆ ಊರ್ಮಿಳಾನ ಮರೆತು ಮೊಹ್ಸಿನ್ ಮುಂದೆ ಹೋಗಿದ್ದಕ್ಕೆ ಇನ್ನೂ ಕೆಲವರು ಬೇಸರವನ್ನು ಕೂಡ ವ್ಯಕ್ತಪಡಿಸುತ್ತಿದ್ಧಾರೆ.

ಇನ್ನುಳಿದಂತೆ ವಿಚ್ಛೇದನದ ನಂತರ ಊರ್ಮಿಳಾ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ಚಿತ್ರರಂಗದಿಂದ ಊರ್ಮಿಳಾ ಅಂತರವನ್ನು ಕಾಪಾಡಿಕೊಂಡಿದ್ದು ಹಲವರು ಇವರ ಕಂಬ್ಯಾಕ್ ಎದುರು ನೋಡುತ್ತಿದ್ಧಾರೆ. ಇದೇ ವೇಳೆ ಮೊಹ್ಸಿನ್ ತಮ್ಮ ಬದುಕಿನಲ್ಲಿ ಮುಂದುವರೆದಂತೆ ಊರ್ಮಿಳಾ ಕೂಡ ಮೂವ್ ಆನ್ ಆಗಿ ಎರಡನೇ ಮದುವೆಯಾಗ್ತಾರಾ..? ಎನ್ನುವ ಚಿಂತೆಯನ್ನು ಕೂಡ ಹಲವರು ಸದ್ಯ ಮಾಡುತ್ತಿದ್ದಾರೆ.

urmila-matondkar-s-ex-mohsin-akhtar-secretly-marries-again

English summary
Urmila Matondkar’s ex Mohsin Akhtar sparks second marriage rumors after sharing a cozy pic flaunting rings with a mystery bride. Click for the full story!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X