ಅಬ್ಬರ.. ಆಡಂಬರ ; 24 ಕ್ಯಾರೆಟ್ ಗೋಲ್ಡ್ ಕೇಕ್ ಕಟ್ ಮಾಡಿದ ಊರ್ವಶಿ ರೌಟೇಲಾ...!

ಮಾಡಿದ್ದು ಬೆರಳಣಿಕೆಯಷ್ಟು ಸಿನಿಮಾಗಳಾದರೂ, ಭಾರತದೆಲ್ಲೆಡೆ ಜನಪ್ರಿಯರಾದವರು ಊವರ್ಶಿ ರೌಟೇಲಾ. ತೋರ್ಪಡಿಕೆಯ ಜೀವನವನ್ನ ನಡೆಸುತ್ತಾ, ದುಡ್ಡನ್ನ ನೀರಿನಂತೆ ಚೆಲ್ಲುವ ಊವರ್ಶಿ, ಸದ್ಯಕ್ಕೆ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಅದು ಎಂದಿನಂತೆ ಅದ್ಧೂರಿಯಾಗಿ. ಆಡಂಬರದಿಂದ.

24 ಕ್ಯಾರೆಟ್ ಚಿನ್ನದ ಕೇಕ್ ನ್ನ ಊವರ್ಶಿ ರೌಟೇಲಾ ಈ ಬಾರಿ ಕಟ್ ಮಾಡಿದ್ದಾರೆ. ಸಿಂಗರ್ - ರ್ಯಾಪರ್ ಹನಿ ಸಿಂಗ್ ಗೆ ಗೋಲ್ಡ್ ಪ್ಲೇಟೆಡ್ ಕೇಕ್ ತಿನಿಸಿ ಸಂಭ್ರಮಿಸಿದ್ದಾರೆ.ನೆನಪಿಗೆ ಇರಲಿ ಎಂದು ಫೋಟೋವನ್ನೂ ಕ್ಲಿಕಿಸಿಕೊಂಡಿದ್ದಾರೆ. ಸದ್ಯಕ್ಕೆ ಊವರ್ಶಿ ಅವರ ಬರ್ತ್ ಡೇ ಸೆಲಬ್ರೇಶನ್ ನ ಈ ಫೋಟೋಗಳೂ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಬದುಕಿದರೆ ಹೀಗೆ ಬದುಕಬೇಕು ಎಂಬ ಮಾತು ಕೂಡ ಕೇಳಿ ಬರುತ್ತಿದೆ

Urvashi Rautela cuts 24 carat gold cake on 30th birthday with rapper honey singh

ಹುಟ್ಟುಹಬ್ಬ ಊವರ್ಶಿಯದ್ದಾದರೂ, ಸಂಭ್ರಮ ನಾಲ್ಕು ಲಕ್ಷಕ್ಕೂ ಅಧಿಕ ಜನರ ಮುಖದಲ್ಲಿ ಸಂಭ್ರಮ ಮನೆ ಮಾಡಿದೆ. ಊವರ್ಶಿಯ ಇನ್ಸ್ಟಾ ಗ್ರಾಂ ಅಕೌಂಟ್ ಹುಟ್ಟುಹಬ್ಬದ ಶುಭಾಶಯಗಳಿಂದ ತುಂಬಿ ತುಳುಕುತ್ತಿದೆ. ಇನ್ನೂ ಊವರ್ಶಿಯ ಬ್ರಾಡ್ ನೆಕ್​​ ಸ್ಟೈಲ್​ ಹಾಗೂ ರೆಡ್ ಗೌನ್ ಮೇಲೆ ಕೂಡ ಅನೇಕರ ಕಣ್ಣು ಬಿದ್ದಿದೆ

ಅಂದ್ಹಾಗೇ ಊವರ್ಶಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತ ಮಾತ್ರವಲ್ಲ ವಿದೇಶದಲ್ಲಿಯೂ ಇವರಿಗೆ ಅಭಿಮಾನಿಗಳಿದ್ದಾರೆ. ಇನ್ನೂ ಊರ್ವಶಿ ರೌಟೇಲಾ ಹಿಂದಿ ನಟಿಯಾದರೂ ಹೆಚ್ಚು ಮಿಂಚಿದ್ದು ದಕ್ಷಿಣದಲ್ಲಿ. ಅದರಲ್ಲಿಯೂ ಐಟಂ ಸಾಂಗ್ ವಿಚಾರದಲ್ಲಿ ಇವರಿಗೆ ಭಾರೀ ಬೇಡಿಕೆ ಇದೆ.

Urvashi Rautela cuts 24 carat gold cake on 30th birthday with rapper honey singh

ಇನ್ನೂ ಊವರ್ಶಿ ಅದ್ಧೂರಿ ಹುಟ್ಟುಹಬ್ಬವನ್ನ ಇದೇ ಮೊದಲ ಬಾರಿ ಆಚರಿಸಿಕೊಂಡಿಲ್ಲ. ವರ್ಷ ವರ್ಷ ಇವರ ಈ ಸಂಭ್ರಮ..ಸಡಗರ.. ಸಿಕ್ಕಾಪಟ್ಟೆ ಕಾಸ್ಟ್ಲೀಯಾಗಿರುತ್ತೆ. ಕಳೆದ ವರ್ಷವೂ ಇವರು ಡೈಮಂಡ್ ಕೇಕ್ ಕತ್ತರಿಸಿದ್ದರು ಅನ್ನುವುದು ನಿಮ್ಮ ಗಮನಕ್ಕಿರಲಿ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಊವರ್ಶಿ ಹೇಳಿದ್ದೇನು..?

ಲವ್​ ಡೋಸ್ 2 ಸೆಟ್​ನಲ್ಲಿ ಬರ್ತ್​ಡೇ ಸೆಲೆಬ್ರೇಷನ್. 24 ಕ್ಯಾರೆಟ್ ಗೋಲ್ಡ್ ಕೇಕ್. ಥಾಂಕ್ಯೂ ಹನಿಸಿಂಗ್ ಎಂದು ನಟಿ ಬರೆದುಕೊಂಡಿದ್ದಾರೆ. ರೆಡ್ ರೋಸ್ ಹಾಗೂ ರೆಡ್ ಹಾರ್ಟ್ ಎಮೋಜಿಯನ್ನು ಕೂಡಾ ನಟಿ ಕ್ಯಾಪ್ಶನ್​ನಲ್ಲಿ ಸೇರಿಸಿಕೊಂಡಿದ್ದಾರೆ.

ನನ್ನ ಪ್ರಯಾಣದ ಉಡುಪು ನಿಮ್ಮ ಉಪಸ್ಥಿತಿಯು ಕೃತಜ್ಞತೆಯ ಎಳೆಗಳಿಂದ ನೇಯಲ್ಪಟ್ಟಿದೆ. ನಿಮ್ಮ ದಣಿವರಿಯದ ಪ್ರಯತ್ನಗಳು ಮತ್ತು ನನ್ನ ಬಗ್ಗೆ ನಿಜವಾದ ಕಾಳಜಿ ನನ್ನ ವೃತ್ತಿಜೀವನದಲ್ಲಿ ಅದ್ಭುತ ಅಧ್ಯಾಯವನ್ನು ರಚಿಸಿದೆ. ನನ್ನ ಭಾವನೆಗಳ ಆಳವನ್ನು ನಿನಗಾಗಿ ಹಿಡಿದಿಡುವಲ್ಲಿ ಪದಗಳು ತತ್ತರಿಸುತ್ತವೆ ಎಂದು ಊವರ್ಶಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ

More from Filmibeat

English summary
Bollywood Actress Urvashi Rautela, who is known for Mr.Airavata and Great Grand Masti cuts 24 carat gold cake on 30th birthday with rapper honey singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X