For Quick Alerts
  ALLOW NOTIFICATIONS  
  For Daily Alerts

  ನೃತ್ಯ ಹೇಳಿಕೊಟ್ಟು ಬಂದ ಐದು ಕೋಟಿ ಹಣ ಕೊರೊನಾ ಸಂಕಷ್ಟಕ್ಕೆ ನೀಡಿದ ನಟಿ

  |

  ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೆ ಆರ್ಥಿಕ ನೆರವು ನೀಡುವುದರಲ್ಲಿ ಸಿನಿಮಾ ಮಂದಿ ಮುಂದಿದ್ದಾರೆ. ಎಲ್ಲಾ ಭಾರತದ ಎಲ್ಲಾ ಸಿನಿಮಾರಂಗಗಳ ನಟ-ನಟಿಯರು ತಮ್ಮ ಕೈಲಾದ ಹಣವನ್ನು ಸರ್ಕಾರಕ್ಕೆ ದೇಣಿಗೆ ನೀಡಿದ್ದಾರೆ.

  Recommended Video

  ಮುಂಬೈನಲ್ಲಿರುವ ಕನ್ನಡಿಗರನ್ನು ಸ್ವಂತ ಖರ್ಚಿನಲ್ಲಿ ಕರ್ನಾಟಕಕ್ಕೆ ಕಳುಹಿಸಿದ ಬಾಲಿವುಡ್ ಸ್ಟಾರ್..? | Sonu Sood

  ಈ ರೀತಿ ಸರ್ಕಾರಕ್ಕೆ ದೇಣಿಗೆ ನೀಡುವುದರಲ್ಲಿ ನಟಿಯರಿಗಿಂತಲೂ ನಟರು ಮುಂದಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು, ಆದರೆ ಇದು ಪೂರ್ಣ ಸತ್ಯವಲ್ಲ. ನಾಯಕಿಯರೂ ಸಹ ಕೋಟ್ಯಂತರ ಹಣವನ್ನು ದೇಣಿಗೆ ನೀಡಿದ್ದಾರೆ.

  'ರಾಬರ್ಟ್' ಸಿನಿಮಾಕ್ಕೆ ಕೋಟಿ-ಕೋಟಿ ಆಫರ್: ಡೀಲ್ ಬೇಡವೆಂದ ನಿರ್ಮಾಪಕ'ರಾಬರ್ಟ್' ಸಿನಿಮಾಕ್ಕೆ ಕೋಟಿ-ಕೋಟಿ ಆಫರ್: ಡೀಲ್ ಬೇಡವೆಂದ ನಿರ್ಮಾಪಕ

  ಇದಕ್ಕೆ ಹೊಸ ಸೇರ್ಪಡೆ ನಟಿ ಊರ್ವಶಿ ರಾಟೆಲ್ಲಾ. ಕನ್ನಡದಲ್ಲಿಯೂ ಒಂದು ಸಿನಿಮಾ ಮಾಡಿರುವ ಊರ್ವಶಿ ಐದು ಕೋಟಿ ಹಣವನ್ನು ಕೊರೊನಾ ವಿರುದ್ಧ ಹೋರಾಟಕ್ಕೆಂದು ದೇಣಿಗೆ ನೀಡಿದ್ದಾರೆ.

  ಟಿಕ್‌ಟಾಕ್‌ನಲ್ಲಿ ಉಚಿತ ಡಾನ್ಸ್ ಕ್ಲಾಸ್‌

  ಟಿಕ್‌ಟಾಕ್‌ನಲ್ಲಿ ಉಚಿತ ಡಾನ್ಸ್ ಕ್ಲಾಸ್‌

  ನಟಿ ಊರ್ವಶಿ ಕೆಲವು ದಿನಗಳ ಹಿಂದೆ ಟಿಕ್‌ಟಾಕ್‌ನಲ್ಲಿ ಉಚಿತವಾಗಿ ನೃತ್ಯ ತರಬೇತಿ ನೀಡುವುದಾಗಿ ಜಾಹೀರಾತು ನೀಡಿದ್ದರು. ನೃತ್ಯದ ಮೂಲಕ ದೇಹತೂಕ ಇಳಿಸಿಕೊಳ್ಳಿ ಎಂಬುದು ಊರ್ವಶಿ ಅವರ ಜಾಹೀರಾತಾಗಿತ್ತು.

  ನೃತ್ಯ, ವ್ಯಾಯಾಮ ಹೇಳಿಕೊಟ್ಟಿದ್ದ ಊರ್ವಶಿ

  ನೃತ್ಯ, ವ್ಯಾಯಾಮ ಹೇಳಿಕೊಟ್ಟಿದ್ದ ಊರ್ವಶಿ

  ಅಂತೆಯೇ ಊರ್ವಶಿ ರಾಟೆಲ್ಲಾ ಟಿಕ್‌ಟಾಕ್‌ನಲ್ಲಿ ವಿವಿಧ ರೀತಿಯ ನೃತ್ಯಗಳನ್ನು, ವ್ಯಾಯಾಮಗಳನ್ನು ಹೇಳಿಕೊಟ್ಟರು. ಲಕ್ಷಾಂತರ ಮಂದಿ ಈ ವಿಡಿಯೋಗಳನ್ನು ನೋಡಿದ್ದರು. ಇದರಿಂದ ಸಾಕಷ್ಟು ಆದಾಯ ವನ್ನು ನಟಿ ಊರ್ವಶಿ ಗಳಿಸಿದರು.

  ಟಿಕ್‌ಟಾಕ್ ವಿಡಿಯೋಗಳಿಂದ ಐದು ಕೋಟಿ

  ಟಿಕ್‌ಟಾಕ್ ವಿಡಿಯೋಗಳಿಂದ ಐದು ಕೋಟಿ

  ಊರ್ವಶಿ ಅವರ ಟಿಕ್‌ಟಾಕ್ ವಿಡಿಯೋಗಳಿಂದಾಗಿ ಬಂದ ಐದು ಕೋಟಿ ಹಣವನ್ನು ಟಿಕ್‌ಟಾಕ್ ಊರ್ವಶಿ ಅವರಿಗೆ ನೀಡಿತ್ತು, ಆ ಹಣವನ್ನು ಊರ್ವಶಿ ರಾಟೆಲ್ಲಾ ಕೊರೊನಾ ಸಂಕಷ್ಟಕ್ಕೆ ನೀಡಿದರು.

  ಐರಾವತ ಸಿನಿಮಾದಲ್ಲಿ ನಟಿಸಿದ್ದ ಊರ್ವಶಿ

  ಐರಾವತ ಸಿನಿಮಾದಲ್ಲಿ ನಟಿಸಿದ್ದ ಊರ್ವಶಿ

  ದರ್ಶನ್ ಅವರೊಂದಿಗೆ ಐರಾವತ ಸಿನಿಮಾದಲ್ಲಿ ಊರ್ವಶಿ ನಾಯಕಿಯಾಗಿ ನಟಿಸಿದ್ದರು. ಹೊರತುಪಡಿಸಿ ಗ್ರೇಟ್ ಗ್ರ್ಯಾಂಡ್ ಮಸ್ತಿ, ಭಾಗ್ ಜಾನಿ, ಹೇಟ್‌ ಸ್ಟೋರಿ 4, ಪಾಗಲ್‌ ಪಂತಿ ಹಾಗೂ ಇನ್ನೂ ಕೆಲವು ಹಿಂದಿ ಸಿನಿಮಾಗಳಲ್ಲಿ ಊರ್ವಶಿ ನಟಿಸಿದ್ದಾರೆ. ಪ್ರಸ್ತುತ ವರ್ಜಿನ್ ಭಾನುಪ್ರಿಯಾ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

  English summary
  Actress Urvashi Rautela donate five crore rupees to fight against coronavirus. She earned this money from tiktok video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X