'ಐರಾವತ' ನಾಯಕಿ ಜೊತೆ ಶ್ರೀದೇವಿ ಪತಿ ಅಸಭ್ಯ ವರ್ತನೆ: ನಟಿ ಹೇಳಿದ ಸತ್ಯ
ಮೀಟೂ, ಕಾಸ್ಟಿಂಗ್ ಕೌಚ್ ಅಭಿಯಾನಗಳು ಆರಂಭವಾದ ಮೇಲಂತೂ ಸಿನಿಮಾ ಇಂಡಸ್ಟ್ರಿಯಲ್ಲಿ ಹತ್ತು ಹಲವು ದೌರ್ಜನ್ಯದ ಪ್ರಕರಣಗಳು ಬೆಳಕಿಗೆ ಬಂದವು. ಹತ್ತು ವರ್ಷ, ಇಪ್ಪತ್ತು ವರ್ಷದ ಹಿಂದೆ ನಡೆದ ಘಟನೆಗಳು ಕೂಡ ಬಹಿರಂಗವಾದವು.
ಈಗ ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಅವರ ಮೇಲೆ ಒಂದು ಆರೋಪ ಕೇಳಿ ಬಂದಿದೆ. ಇದು ಐದು ತಿಂಗಳ ಹಿಂದೆ ನಡೆದ ಘಟನೆ ಎಂದು ಹೇಳಲಾಗುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದ ಐರಾವತ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಊರ್ವಶಿ ರೌಟೇಲಾ ಅವರ ಬಳಿ ಬೋನಿ ಕಪೂರ್ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಆದರೆ, ಈ ಬಗ್ಗೆ ನಟಿ ಹೇಳೋದೆ ಬೇರೆ. ಮುಂದೆ ಓದಿ....

ಮದುವೆ ಕಾರ್ಯಕ್ರಮದಲ್ಲಿ ಬೋನಿ-ಊರ್ವಶಿ
ಐದು ತಿಂಗಳ ಹಿಂದೆ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ನಿರ್ಮಾಪಕ ಬೋನಿ ಕಪೂರ್ ಮತ್ತು ಊರ್ವಶಿ ರೌಟೇಲಾ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬೋನಿ ಕಪೂರ್ ಕಂಡ ಕೂಡಲೇ ಊರ್ವಶಿ ಹತ್ತಿರ ಹೋಗಿ ಆತ್ಮಿಯವಾಗಿ ಅಪ್ಪುಗೆ ನೀಡಿ ಬರಮಾಡಿಕೊಂಡರು. ಬಳಿಕ ಕ್ಯಾಮೆರಾಗೆ ಫೋಸ್ ಕೊಟ್ಟರು. ಈ ವೇಳೆ ಬೋನಿ ಕಪೂರ್ ನಟಿಯ ಹಿಂಭಾಗಕ್ಕೆ ಕೈ ತಾಕಿಸಿದ್ದಾರೆ. ಈ ವಿಡಿಯೋ ಈಗ ಭಾರಿ ಚರ್ಚೆ ಆಗ್ತಿದೆ.

ಅಸಭ್ಯವಾಗಿ ವರ್ತಿಸಿದ್ರಾ?
ಊರ್ವಶಿ ರೌಟೇಲಾ ಅವರ ಬಳಿ ಬೋನಿ ಕಪೂರ್ ಉದ್ದೇಶಪೂರ್ವಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ. ಬೇಕು ಅಂತಲೇ ನಟಿಯ ಹಿಂಭಾಗಕ್ಕೆ ಕೈ ತಾಕಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿ ಟೀಕಿಸುತ್ತಿದ್ದಾರೆ.

ಮೌನ ಮುರಿದ ನಟಿ ಊರ್ವಶಿ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ನಟಿ ಊರ್ವಶಿ, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ''ಬೋನಿ ಕಪೂರ್ ಸರ್ ನಿಜಕ್ಕೂ ಜಂಟಲ್ ಮ್ಯಾನ್, ಈ ವಿಡಿಯೋವನ್ನ ತಪ್ಪಾಗಿ ಅರ್ಥೈಸಲಾಗುತ್ತಿದೆ. ಇಲ್ಲಿ ಯಾವುದೇ ಅಸಭ್ಯ ವರ್ತನೆಯೂ ಆಗಿಲ್ಲ'' ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಬೋನಿ ಕಪೂರ್ ಬೇಸರ
ಈ ವಿಡಿಯೋ ಬಗ್ಗೆ ಬೋನಿ ಕಪೂರ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಬಂದ ಆರೋಪದ ಬಗ್ಗೆ ಬೇಸರವಾಗಿದ್ದಾರೆ ಎಂದು ಹೇಳಲಾಗಿದೆ. ಕೊನೆಯದಾಗಿ ಹೇಟ್ ಸ್ಟೋರಿ 4 ಚಿತ್ರದಲ್ಲಿ ನಟಿಸಿದ್ದ ಊರ್ವಶಿ ರೌಟೇಲಾ ಈಗ ಪಾಗಲ್ ಪಂತಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











