ಅದು ನನ್ನದೇ ವೀಡಿಯೋ.. ಆದ್ರೆ,; ಊವರ್ಶಿ ರೌಟೇಲ ಪ್ರತಿಕ್ರಿಯೆ

ಇತ್ತೀಚೆಗೆ ನಟಿ ಊವರ್ಶಿ ರೌಟೇಲ ಬಾತ್‌ರೂಮ್ ವಿಡಿಯೋವೊಂದು ವೈರಲ್ ಆಗಿತ್ತು. ಆಕೆ ಬಾತ್‌ರೂಂ ಒಳಗೆ ಬಂದು ಸ್ನಾನಕ್ಕೆ ಮುಂದಾಗುವ ವೀಡಿಯೋ ಅದು. ಈ ಬಗ್ಗೆ ಭಾರೀ ಚರ್ಚೆ ನಡೀತು. ಕೆಲವರು ಇದು ಪಬ್ಲಿಸಿಟಿ ಸ್ಟಂಟ್ ಎಂದಿದ್ದರು. ಇದೀಗ ಸ್ವತಃ ಊವರ್ಶಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಟಿ ಊವರ್ಶಿ ರೌಟೇಲ ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಐಟಂ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿದ್ದೇ ಹೆಚ್ಚು. ಇನ್ನು ಫ್ಯಾಷನ್ ಶೋಗಳಲ್ಲಿ ದುಬಾರಿ ಕಾಸ್ಟ್ಯೂಮ್, ವಜ್ರಾಭರಣ ಧರಿಸಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ತೆಲುಗು ಸಿನಿಮಾ ಚಿತ್ರೀಕರಣದ ವೇಳೆ ಪೆಟ್ಟಾಗಿ ಚಿಕಿತ್ಸೆ ಪಡೆದಿದ್ದರು. ಕನ್ನಡದ 'ಮಿ. ಐರಾವತ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

Urvashi Rautela opens up on her leaked bathroom video

ಸದ್ಯ ಊವರ್ಶಿ 'ಘುಸ್ಪೈಥಿಯಾ', 'NBK109', 'ಬ್ಲ್ಯಾಕ್ ರೋಸ್', 'ವೆಲ್‌ಕಮ್ ಟು ದಿನ ಜಂಗಲ್' ಹಾಗೂ 'ಕಸೂರ್-2' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೇ ಒಂದಷ್ಟು ಆಲ್ಬಮ್ ಸಾಂಗ್‌ಗಳಲ್ಲಿ ಊರ್ವಶಿ ಹೆಜ್ಜೆ ಹಾಕಿದ್ದು ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

ಸದ್ಯ ವೈರಲ್ ಆಗಿರುವ ಬಾತ್‌ರೂಮ್ ವೀಡಿಯೋ ಬಗ್ಗೆ ಊವರ್ಶಿ ಮಾತನಾಡಿ ಅದು 'ಘುಸ್ಪೈಥಿಯಾ' ಚಿತ್ರದ ದೃಶ್ಯ ಎಂದಿದ್ದಾರೆ. "ಆ ವೀಡಿಯೋ ಕ್ಲಿಪ್ ಹೊರಬಂದ ದಿನ ನಿಜಕ್ಕೂ ನನಗೆ ಬಹಳ ಬೇಸರವಾಯಿತು. ಖಂಡಿತ ಅದು ನನ್ನ ಪರ್ಸನಲ್ ವೀಡಿಯೋ ಅಲ್ಲ. ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕ್ಲಿಪ್ ಅಲ್ಲ. ಇದು 'ಘುಸ್ಪೈಥಿಯಾ' ಚಿತ್ರದ ದೃಶ್ಯ" ಎಂದಿದ್ದಾರೆ.

ಇದಕ್ಕೂ ಮುನ್ನ ಯಾವುದಾದರೂ ವೈಯಕ್ತಿಕ ವೀಡಿಯೊ ಲೀಕ್ ಆಗಿತ್ತಾ? ಎಂದು ಆಕೆಯನ್ನು ಕೇಳಿದಾಗ, "ಇಲ್ಲ, ಇಲ್ಲ, ಯಾವುದೇ ಮಹಿಳೆಗೆ ಈ ರೀತಿ ಆಗಬಾರದು ಎಂದು ನಾನು ಬಯಸುತ್ತೇನೆ" ಎಂದು ಉತ್ತರಿಸಿದ್ದಾರೆ.

ಉತ್ತರಕಾಂಡದ ಹರಿದ್ವಾರದಲ್ಲಿ ಹುಟ್ಟಿ ಬೆಳೆದ ಊವರ್ಶಿ ಬಹಳ ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಆರಂಭಿಸಿದರು. 2009ರ ಮಿಸ್ ಟೀನ್ ಇಂಡಿಯಾ ಟೈಟಲ್ ಸಿಕ್ಕಿತ್ತು. ಬಳಿಕ ಹಲವು ಫ್ಯಾಷನ್ ಶೋಗಳಲ್ಲಿ ಕ್ಯಾಟ್ ವಾಕ್ ಮಾಡಿ ಗಮನ ಸೆಳೆದರು. 'ಸಿಂಗ್ ಸಾಬ್ ದಿ ಗ್ರೇಟ್' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಬಳಿಕ ಕನ್ನಡದ 'ಮಿ. ಐರಾವತ' ಚಿತ್ರದಲ್ಲಿ ಮಿಂಚಿದ್ದರು.

'ಹೇಟ್ ಸ್ಟೋರಿ-4', 'ಪಾಗಲ್‌ಪಂಥಿ', ವರ್ಜಿನ್ 'ಭಾನುಪ್ರಿಯಾ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಊರ್ವಶಿ ನಟಿಸಿದ್ದರು. 'ಭಾಗ್ ಜಾನಿ', 'ಕಾಬಿಲ್', 'ಪೊರೊಬಾಷಿಣಿ', 'ವಾಲ್ತೇರು ವೀರಯ್ಯ', 'ಏಜೆಂಟ್', 'ಬ್ರೋ', 'ಸ್ಕಂದ' ಹೀಗೆ ಹಲವು ಸಿನಿಮಾಗಳಲ್ಲಿ ಸ್ಪೆಷಲ್‌ ಸಾಂಗ್ಸ್‌ಗೆ ಹೆಜ್ಜೆ ಹಾಕಿ ರಂಗೇರಿಸಿದ್ದರು.

More from Filmibeat

English summary
Urvashi Rautela reacts on viral, issue clarification;
Read more about: bollywood hindi urvashi rautela
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X