»   » 'ಐರಾವತ'ನ ರಾಣಿಗೆ 5 ಕೋಟಿ ಆಫರ್ ಕೊಟ್ಟಿದ್ದು ಯಾವ ಚಿತ್ರ?

'ಐರಾವತ'ನ ರಾಣಿಗೆ 5 ಕೋಟಿ ಆಫರ್ ಕೊಟ್ಟಿದ್ದು ಯಾವ ಚಿತ್ರ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮಿಸ್ಟರ್ ಐರಾವತ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ್ದ ನಟಿ ಊರ್ವಶಿ ರೌಟೇಲಾ ಸದ್ಯ ಬಾಲಿವುಡ್ ನಲ್ಲಿ ಬೇಡಿಕೆಯ ನಟಿ. ಈ ನಟಿಗೆ ವಿಶಾಲ್ ಪಾಂಡ್ಯೆ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲು ಬರೋಬ್ಬರಿ 5 ಕೋಟಿ ಆಫರ್ ನೀಡಲಾಗಿತ್ತು. ಆದ್ರೆ, ಈ ಚಿತ್ರವನ್ನ ತಿರಸ್ಕರಿಸಿದ್ದಾಳೆ ಎನ್ನಲಾಗಿದೆ.

ಹೌದು, ವಿಶಾಲ್ ಪಾಂಡ್ಯೆ ನಿರ್ದೇಶನದಲ್ಲಿ ಮೂಡಿ ಬರಲಿರುವ 'ಹೇಟ್ ಸ್ಟೋರಿ 4' ಚಿತ್ರಕ್ಕಾಗಿ ಊರ್ವಶಿ ರೌಟೇಲಾ ಅವರಿಗೆ ಆಫರ್ ಮಾಡಲಾಗಿತ್ತಂತೆ. ಆದ್ರೆ, ನಯವಾಗಿ ಈ ಆಫರ್ ನ್ನ ತಳ್ಳಿ ಹಾಕಿದ್ದಾಳೆ ನಟಿ. ಯಾಕಂದ್ರೆ, ಈ ಚಿತ್ರದಲ್ಲಿ ನಾಯಕಿ ಹೆಚ್ಚು ಬೋಲ್ಡ್ ಆಗಿ ಕಾಣಿಸಿಕೊಳ್ಳಬೇಕು ಮತ್ತು ಹಸಿಬಿಸಿ ದೃಶ್ಯಗಳು ಹೆಚ್ಚಾಗಿರುತ್ತೆ ಎಂಬ ಕಾರಣಕ್ಕೆ ಈ ಚಿತ್ರದಿಂದ ದೂರು ಸರಿದಿದ್ದಾರೆ.

 Urvashi Rautela Refused 5 crore Offer For Hate Story 4

ಇದಕ್ಕೂ ಮುಂಚೆ ಹೇಟ್ ಸ್ಟೋರಿ 1, 2, 3 ಭಾಗಗಳು ಬಿಡುಗಡೆಯಾಗಿವೆ. ಮೊದಲ ಭಾಗದಲ್ಲಿ ಪಾವೊಲಿ ಡ್ಯಾಮ್, ಎರಡನೇ ಭಾಗದಲ್ಲಿ ಸುರ್ವಿನ್ ಚಾವ್ಲಾ, ಮೂರನೇ ಭಾಗದಲ್ಲಿ ಜರೀನ್ ಖಾನ್ ಅಭಿನಯಿಸಿದ್ದರು.

ಈಗ ನಾಲ್ಕನೇ ಭಾಗದಲ್ಲಿ ಯಾರು ಅಭಿನಯಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಮುಗಿಸಿದ್ದು, ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ಶುರು ಮಾಡಲಿದ್ದಾರಂತೆ.

English summary
Mr Airavata actress Urvashi Rautela, who was offered a role in Hate Story 4, turned it down despite being offered Rs 5 crore to star in the erotic film that is expected to go on floors soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada