»   » ದರ್ಶನ್ ಜೊತೆ ಕಾಣಿಸಿಕೊಂಡಿದ್ದ ಈ ನಟಿ ಹಾಲಿವುಡ್ ಚಿತ್ರವನ್ನೇ ರಿಜೆಕ್ಟ್ ಮಾಡಿದ್ದಾರೆ!

ದರ್ಶನ್ ಜೊತೆ ಕಾಣಿಸಿಕೊಂಡಿದ್ದ ಈ ನಟಿ ಹಾಲಿವುಡ್ ಚಿತ್ರವನ್ನೇ ರಿಜೆಕ್ಟ್ ಮಾಡಿದ್ದಾರೆ!

Posted By:
Subscribe to Filmibeat Kannada

ಒಬ್ಬ ಬಾಲಿವುಡ್ ನಟಿಗೆ ಹಾಲಿವುಡ್ ಸಿನಿಮಾ ಆಫರ್ ಬಂದರೆ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುತ್ತಾರೆ. ಆದರೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮಾತ್ರ ಹಾಗೆ ಮಾಡಿಲ್ಲ. ಬಂದ ದೊಡ್ಡ ಅವಕಾಶವನ್ನು ತಿರಸ್ಕರಿಸಿದ್ದಾರೆ.

ವಾವ್.! 'ಐರಾವತ' ಬೆಡಗಿಯ ಬೊಂಬಾಟ್ ಬೆಕ್ಕಿನ ನಡಿಗೆ.!

'ಐರಾವತ' ಚಿತ್ರದಲ್ಲಿ ದರ್ಶನ್ ಜೊತೆ ನಟಿಸಿದ್ದ ಊರ್ವಶಿ ಬಾಲಿವುಡ್ ನಲ್ಲಿ ಕೆಲ ಸಿನಿಮಾ ಮಾಡಿದ್ದಾರೆ. ಈ ನಟಿಗೆ ಈಗ 'ಹೇಟ್ ಸ್ಟೋರಿ' ಸಿನಿಮಾ ಸರಣಿಗಾಗಿ ಹಾಲಿವುಡ್ ನಿಂದ ಅವಕಾಶ ಹುಡುಕಿಕೊಂಡು ಬಂದಿದೆ. ಆದರೆ ಅವರು 'ಆ ಸಿನಿಮಾಗಳಿಗೆ ಬೇಕಾಗುವ ಸ್ಕಿನ್ ಶೋ ಮಾಡಲು ನನಗೆ ಇಷ್ಟ ಇಲ್ಲ' ಎಂದು ಹೇಳಿ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ.

Urvashi Rautela rejected hollywood project.

ಊರ್ವಶಿ ರೌಟೇಲಾ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಹಾಲಿವುಡ್ ಸಿನಿಮಾದ ಸಹವಾಸ ಬೇಡ ಎಂದು ಬಂದ ಅವಕಾಶವನ್ನು ಪಕ್ಕಕ್ಕೆ ತಳ್ಳಿದ್ದಾರೆ. ಈ ಮೂಲಕ ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಕ್ಕೆ ಹಾತೋರೆಯುವ ನಟಿಯರಿಗಿಂತ ಊರ್ವಶಿ ಭಿನ್ನವಾಗಿದ್ದಾರೆ.

English summary
Bollywood Actress Urvashi Rautela rejected Hollywood project.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X