"ಅಖಿಲ್ ಅಕ್ಕಿನೇನಿಯಿಂದ ಊರ್ವಶಿ ರೌಟೇಲಾಗೆ ಕಿರುಕುಳ":ಟ್ವೀಟ್ ಮಾಡಿದ ವಿಮರ್ಶಕನಿಗೆ ಲೀಗ್ ನೋಟಿಸ್!

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ನಟಿ ಊರ್ವಶಿ ರೌಟೇಲಾ ದಕ್ಷಿಣ ಭಾರತೀಯರಿಗೂ ಚಿರಪರಿಚಿತ. ಅದರಲ್ಲೂ ಕನ್ನಡಿಗರಿಗೆ ಊರ್ವಶಿ ರೌಟೇಲಾ ಬಗ್ಗೆ ಹೇಳಬೇಕಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ 'ಐರಾವತ' ಸಿನಿಮಾಗೆ ನಾಯಕಿ ಇವರೇ. ಹೀಗಾಗಿ ಊರ್ವಶಿ ಕನ್ನಡಿಗರಿಗೆ ಚೆನ್ನಾಗಿ ಗೊತ್ತಿದೆ.

ಊರ್ವಶಿ ರೌಟೇಲಾ ದಕ್ಷಿಣ ಭಾರತದಲ್ಲಿ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅದರಲ್ಲೂ ತೆಲುಗು ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಅಕ್ಕಿನೇನಿ ಕುಟುಂಬದ ಎರಡನೇ ಕುಡಿ ಅಖಿಲ್ ಅಕ್ಕಿನೇನಿಯ ಸಿನಿಮಾ 'ಏಜೆಂಟ್' ಸಿನಿಮಾದ ಹಾಡೊಂದಕ್ಕೆ ಊರ್ವಶಿ ಹೆಜ್ಜೆ ಹಾಕಿದ್ದಾರೆ.

ಸದ್ಯ ಬಹುಭಾಷಾ ನಟಿ ಊರ್ವಶಿ ರೌಟೇಲಾ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಊರ್ವಶಿ ಹಾಗೂ ಕ್ರಿಕೆಟ್ ಆಟಗಾರ ರಿಷಬ್ ಪಂತ್ ನಡುವಿನ ಕಿತ್ತಾಟ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಮತ್ತೊಮ್ಮೆ ಊರ್ವಶಿ ಸುದ್ದಿಯಲ್ಲಿದ್ದಾರೆ. ಅಸಲಿಗೆ ಮ್ಯಾಟರ್ ಏನು? ಅಂತ ತಿಳಿಯಲು ಮುಂದೆ ಓದಿ.

Urvashi Rautela sent legal defamation notice to critic umair sandhu for fake news

ವಿಮರ್ಶಕನ ವಿರುದ್ಧ ತಿರುಗಿಬಿದ್ದ ಊರ್ವಶಿ

ಸಿನಿಮಾ ಮಂದಿಗೆ ಸ್ವಯಂ ಘೋಷಿತ ವಿಮರ್ಶಕ ಉಮೈರ್ ಸಂಧು ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದಾರೆ. ಒಂದಲ್ಲ ಒಂದು ಟ್ವೀಟ್ ಮಾಡಿ ಅವರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಬಗ್ಗೆ ವಿವಾದಾತ್ಮಕ ಕಮೆಂಟ್ ಮಾಡಿದ್ದರು. ಆಗ ಉಮೈರ್ ಸಂಧು ವಿರುದ್ಧ ಆ ನಟಿ ತಿರುಗಿಬಿದ್ದಿದ್ದರು. ಈಗ ಊರ್ವಶಿ ವಿಮರ್ಶನನ ವಿರುದ್ಧ ಕಿಡಿ ಕಾರಿದ್ದಾರೆ.

ಸಮಂತಾ, ಸೆಲಿನಾ ಜೇಟ್ಲಿ ಬಳಿಕ ಊರ್ವಶಿ ರೌಟೇಲಾ ಮೇಲೆ ಉಮೈರ್ ಸಂಧು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. 'ಏಜೆಂಟ್' ಸಿನಿಮಾ ವೇಳೆ ಅಖಿಲ್ ಅಕ್ಕಿನೇನಿ ನಟಿ ಊರ್ವಶಿ ರೌಟೇಲಾಗೆ ಕಿರುಕುಳ ನೀಡಿದ್ದರು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡುತ್ತಿದ್ದಂತೆ ಊರ್ವಶಿ ಉರಿದುಬಿದ್ದಿದ್ದು, ಉಮೈರ್ ಸಂಧು ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ.

ಉಮೈರ್ ಸಂಧು ಟ್ವೀಟ್ ಏನು?

ಉಮೈರ್ ಸಂಧು ಬಾಲಿವುಡ್ ನಟಿ ಊರ್ವಶಿಯನ್ನು ಮುಂದಿಟ್ಟುಕೊಂಡು ಅಖಿಲ್ ಅಕ್ಕಿನೇನಿ ಮೇಲೆ ಕಮೆಂಟ್ ಮಾಡಿದ್ದಾರೆ. " ಏಜೆಂಟ್ ಸಿನಿಮಾದ ಐಟಂ ಸಾಂಗ್ ಅನ್ನು ಯೂರೋಪ್‌ನಲ್ಲಿ ಶೂಟ್ ಮಾಡುವಾಗ ಅಖಿಲ್ ಅಕ್ಕಿನೇನಿ ಬಾಲಿವುಡ್ ನಟಿ ಊರ್ವಶಿ ರೌಟೇಲಾಗೆ ಕಿರುಕುಳ ನೀಡಿದ್ದರು. ಅಖಿಲ್ ಅಕ್ಕಿನೇನಿ ಪ್ರಬುದ್ಧತೆ ಇಲ್ಲದ ನಟ ಮತ್ತು ಅವರೊಂದಿಗೆ ಕೆಲಸ ಮಾಡುವುದ ವೇಳೆ ಮುಜುಗರವೆನಿಸುತ್ತೆ ಎಂದು ಊರ್ವಶಿ ಹೇಳಿದ್ದಾರೆ." ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ನೋಡುತ್ತಿದ್ದಂತೆ ಊರ್ವಶಿ ರೌಟೇಲಾ ಕಣ್ಣುಗಳನ್ನು ಕೆಂಪಗಾಗಿಸಿವೆ. ಈ ಟ್ವೀಟ್ ಮಾಡಿದ್ದಕ್ಕೆ ಉಮೈರ್ ಸಂಧು ವಿರುದ್ಧ ನಟಿ ಊರ್ವಶಿ ರೌಟೇಲಾ ಕಾನೂನು ಸಮರ ಸಾರಿದ್ದಾರೆ. ಜೊತೆಗೆ ಇದು ನಕಲಿ ಎಂದು ಹೇಳಿದ್ದಾರೆ.

ಉಮೈರ್ ಸಂಧುಗೆ ಲೀಗಲ್ ನೋಟಿಸ್

ವಿವಾದಾತ್ಮಕ ವಿಮರ್ಶಕ ಕಮ್ ಗಾಸಿಪ್ ಸುದ್ದಿಗಳನ್ನು ಬಿತ್ತರಿಸುವ ಉಮೈರ್ ಸಂಧುಗೆ ಲೀಗಲ್ ನೋಟಿಸ್ ಕಳುಸುತ್ತಿರುವುದಾಗಿ ಊರ್ವಶಿ ಹೇಳಿಕೊಂಡಿದ್ದಾರೆ. " ನಿನ್ನ ವಿರುದ್ಧ ನನ್ನ ಲೀಗಲ್ ಟೀಂ ಮಾನನಷ್ಟ ಮೊಕದ್ದಮೆ ಹೂಡಲಿದೆ. ನೀನು ನನ್ನ ವಕ್ತಾರ ಅಲ್ಲ. ನೀನು ಒಬ್ಬ ಪ್ರಬುದ್ಧತೆ ಇಲ್ಲದ ಜರ್ನಲಿಸ್ಟ್. ನೀನು ನನ್ನ ಹಾಗೂ ನನ್ನ ಕುಟುಂಬಕ್ಕೆ ಮುಜುಗರ ಉಂಟು ಮಾಡಿದ್ದೀಯಾ" ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಉಮೈರ್ ಸಂಧು ಟ್ವೀಟ್ ಅನ್ನು ಸುಳ್ಳು ಸುದ್ದಿ ಎಂದು ಬರೆದುಕೊಂಡಿದ್ದಾರೆ.

'ಏಜೆಂಟ್' ಸಿನಿಮಾ ಇದೇ ಏಪ್ರಿಲ್ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಇನ್ನೇನು ಒಂದು ವಾರವಿದೆ ಅನ್ನುವಾಗಲೇ ಈ ವಿವಾದ ಎದ್ದಿದೆ. ಕೆಲವರು ಇದು ಏನಾದರೂ ಪ್ರಚಾರದ ಗಿಮಿಕ್ ಇರಬಹುದೇ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Urvashi Rautela sent legal defamation notice to critic Umair Sandhu for fake news,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X