For Quick Alerts
  ALLOW NOTIFICATIONS  
  For Daily Alerts

  ಪಾಕ್‌ ಕ್ರಿಕೆಟಿಗನ ಕಣ್ಣಲ್ಲಿ ಕಣ್ಣಿಟ್ಟು ಊರ್ವಶಿ ರೌಟೇಲಾ ಎಡವಟ್ಟು!

  |

  ಅದ್ಯಾಕೋ ಗೊತ್ತಿಲ್ಲ. ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ಒಂದಲ್ಲ ಒಂದು ವಿಚಾರಕ್ಕೆ ಪದೇ ಪದೇ ಟ್ರೋಲ್ ಆಗ್ತಾನೆ ಇರ್ತಾರೆ. ಈ ಬಾರಿ ಕೂಡ ಇರಲಾರದೇ ಇರುವೆ ಬಿಟ್ಟುಕೊಂಡರು ಅನ್ನವಂತೆ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಪರಿಣಾಮ ಟ್ರೋಲ್ ಪೇಜ್‌ಗಳಿಗೆ ಆಹಾರವಾಗಿದ್ದಾರೆ. ಊರ್ವಶಿ, ಪಾಕ್​ ಆಟಗಾರನ ಜೊತೆಗಿನ ರೊಮ್ಯಾಂಟಿಕ್ ವಿಡಿಯೋ ಶೇರ್ ಮಾಡಿದ್ದೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ.

  ಇತ್ತೀಚೆಗೆ ಭಾರತ-ಪಾಕಿಸ್ತಾನ ಏಷ್ಯಾಕಪ್ ಕ್ರಿಕೆಟ್ ಪಂದ್ಯ ನೋಡಲು ಊರ್ವಶಿ ಸ್ಟೇಡಿಯಂಗೆ ಹೋಗಿದ್ದರು. ಪಂದ್ಯ ವೀಕ್ಷಿಸುತ್ತಿರುವ ಊರ್ವಶಿನ ನೋಡಿ ಪಾಕಿಸ್ತಾನಿ ಬೌಲರ್ ನಸೀಮ್ ಶಾ ನಕ್ಕಂತೆ, ಅದಕ್ಕೆ ಊರ್ವಶಿ ಕೂಡ ಪ್ರತಿಕ್ರಿಯಿದಂತೆ ಹಿಂದಿ ಸಾಂಗ್ ಸೇರಿಸಿ ಯಾರೋ ವಿಡಿಯೋ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ. ಇಷ್ಟೆ ಆಗಿದ್ದರೇ ಸಮಸ್ಯೆ ಇರಲಿಲ್ಲ. ಈ ವಿಡಿಯೋವನ್ನು ಊರ್ವಶಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಇದು ಆಕೆ ಮತ್ತೊಮ್ಮೆ ಟ್ರೋಲ್ ಆಗುವಂತೆ ಮಾಡಿದೆ.

  ಹಿಂದೆ ಮುಂದೆ ಎಲ್ಲಾ ಕಡೆ ಹರಿದ ಜೀನ್ಸ್‌ನಲ್ಲಿ ಫ್ಲೈಟ್ ಏರಿದ 'Mr.ಐರಾವತ'ನ ಊರ್ವಶಿಹಿಂದೆ ಮುಂದೆ ಎಲ್ಲಾ ಕಡೆ ಹರಿದ ಜೀನ್ಸ್‌ನಲ್ಲಿ ಫ್ಲೈಟ್ ಏರಿದ 'Mr.ಐರಾವತ'ನ ಊರ್ವಶಿ

  'ನಿನಗೆ ಭಾರತದವರು ಯಾರು ಬೇಡವೇ, ಪಾಕಿಸ್ತಾನದವನೇ ಬೇಕಾ?' ಅಂತೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ. ಭಾರತ ತಂಡದ ಆಟಗಾರ ರಿಷಬ್ ಪಂತ್, ಊರ್ವಶಿ, ನಸೀಮ್ ಶಾ ಸೇರಿಸಿ ಬಗೆ ಬಗೆಯ ಮೀಮ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಟ್ಟಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಆಗಿ ಎಡವಟ್ಟಿನ ಅರಿವಾಗುತ್ತಿದ್ದಂತೆ ಊವರ್ಶಿ ಆ ವಿಡಿಯೋ ಡಿಲೀಟ್ ಮಾಡಿದ್ದಾರೆ. ಆದರೂ ಅಷ್ಟರಲ್ಲಾಗಲೇ ಆಗಬೇಕಿದ್ದ ನಷ್ಟ ಆಗಿ ಹೋಗಿತ್ತು.

  ಭಾರತ ಕ್ರಿಕೆಟ್ ತಂಡದ ಆಟಗಾರ ರಿಷಬ ಪಂತ್ ಹಾಗೂ ನಟಿ ಊರ್ವಶಿ ರೌಟೇಲಾ ಟ್ವಿಟ್ ವಾರ್ ಭಾರೀ ಸದ್ದು ಮಾಡಿತ್ತು. ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ "ರಿಷಬ್ ಪಂತ್ ನನ್ನ ಹಿಂದೆ ಬಿದ್ದಿದ್ದಾರೆ. ಇನ್ನಿಲ್ಲದಂತೆ ನನ್ನನ್ನು ಕಾಡಿದ್ದರು" ಎಂದು ಹೇಳಿಕೆ ನೀಡಿದ್ದರು. ಟೀಂ ಇಂಡಿಯಾ ಆಟಗಾರ ಪಂತ್ ಇದಕ್ಕೆ ಇನ್‌ಸ್ಟಾಗ್ರಾಂನಲ್ಲಿ ತಿರುಗೇಟು ನೀಡಿದ್ದರು. ನಂತರ ಇಬ್ಬರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಮುಂದುವರೆದಿತ್ತು. ಆದರೆ ಇತ್ತೀಚೆಗೆ ನಡೆದ ಭಾರತ- ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಊರ್ವಶಿ ಹೋಗಿದ್ದರು. ಆದರೆ ಪಂತ್‌ಗೆ ತಂಡದಲ್ಲಿ ಆಡುವ ಅವಕಾಶವೇ ಸಿಗಲಿಲ್ಲ. ಇದನ್ನು ಕೂಡ ತಮಾಷೆಯಾಗಿ ಟ್ರೋಲ್ ಮಾಡಲಾಗಿತ್ತು.

  Urvashi Rautela trolled for her Romantic reel With Pak Bowler Naseem Shah

  ಒಂದಷ್ಟು ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿರುವ ಊರ್ವಶಿ ಫ್ಯಾಷನ್ ಶೋಗಳಲ್ಲಿ ರ್ಯಾಂಪ್‌ ವಾಕ್‌ನಿಂದ ಸಖತ್ ಸದ್ದು ಮಾಡುತ್ತಿದ್ದಾರೆ. ಕನ್ನಡದಲ್ಲೂ ಈಕೆ ನಟಿಸಿದ್ದರು. 'ಮಿಸ್ಟರ್ ಐರಾವತ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ಮಿಂಚಿದ್ದರು.

  English summary
  Urvashi Rautela trolled for her romantic reel With Pak Bowler Naseem Shah. Know More.
  Friday, September 9, 2022, 9:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X