ಬೃಹತ್ ಗೌನ್ ಧರಿಸಿ, ಅದನ್ನ ನಿಭಾಯಿಸಲು ಒದ್ದಾಡಿದ ದರ್ಶನ್ ನಾಯಕಿ ಊರ್ವಶಿ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ 'ಮಿಸ್ಟರ್ ಐರಾವತ' ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ ಚೆಲುವೆ ಊರ್ವಶಿ ರೌಟೇಲಾ. 'ಸಿಂಗ್ ಸಾಬ್ ದಿ ಗ್ರೇಟ್', 'ಭಾಗ್ ಜಾನಿ', 'ಸನಂ ರೇ', 'ಹೇಟ್ ಸ್ಟೋರಿ 4' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಊರ್ವಶಿ ಇದೀಗ ಒಂದು ಗೌನ್ ವಿಚಾರವಾಗಿ ಸದ್ದು ಮಾಡಿದ್ದಾರೆ.
Recommended Video
ಇತ್ತೀಚೆಗೆಷ್ಟೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು ನಿಮಗೆ ಗೊತ್ತೇ ಇದೆ. ಇದೇ ಸಮಾರಂಭಕ್ಕಾಗಿ ಕೆಂಪು ಬಣ್ಣದ ಬೃಹತ್ ಗೌನ್ ಧರಿಸಿದ್ದರು ನಟಿ ಊರ್ವಶಿ. ಈ ಗೌನ್ ತೀರಾ ಭಾರವಾಗಿದ್ದು, ಅದನ್ನ ನಿಭಾಯಿಸಲು ಊರ್ವಶಿ ಹರಸಾಹಸ ಪಟ್ಟಿದ್ದಾರೆ.
ಅಷ್ಟಕ್ಕೂ, ಈ ಗೌನ್ ಧರಿಸಿದ ಮೇಲೆ ಕೂರಲು ಒಂದಲ್ಲ ನಾಲ್ಕು ಕುರ್ಚಿ ಇದ್ದರೂ ಸಾಲಲ್ಲ. ''ಇದು ನನ್ನ ಅತೀ 'ಭಾರ'ವಾದ ರೆಡ್ ಕಾರ್ಪೆಟ್ ಅನುಭವ. ನಾಲ್ಕು ಸೀಟ್ ಮೇಲೆ ಕೂತಿದ್ದೆ'' ಎಂದು ವಿಡಿಯೋವೊಂದನ್ನು ನಟಿ ಊರ್ವಶಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ರೆಡ್ ಗೌನ್ ತೊಟ್ಟು ಊರ್ವಶಿ ಒದ್ದಾಡಿದ್ದನ್ನು ನೋಡಿದ್ಮೇಲೆ, ಕೆಲ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ''ಈ ಗೌನ್ ಧರಿಸಿದ್ಮೇಲೆ ಕೂರಲು ಬೇರೆಯೇ ಸೀಟ್ ಬೇಕಾಗುತ್ತದೆ'', ''ನಿಮಗೆ ಒಂದು ಸೀಟ್ ಸಾಕು, ಗೌನ್ ಗಾಗಿ ನಾಲ್ಕು ಸೀಟ್ ಬೇಕಾಗಿದೆ'' ಅಂತೆಲ್ಲಾ ನೆಟ್ಟಿಗರು ತಲೆಗೊಂಡು ಕಾಮೆಂಟ್ ಮಾಡುತ್ತಿದ್ದಾರೆ.
ಅಂದ್ಹಾಗೆ, 'ಪಾಗಲ್ಪಂತಿ' ಚಿತ್ರದ ಬಳಿಕ ಇನ್ನೂ ಹೆಸರಿಡದ ಹಿಂದಿ ಚಿತ್ರವೊಂದರಲ್ಲಿ ನಟಿ ಊರ್ವಶಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











