Urvashi Rautela: "ನಿಮ್ಮ ಗೋಲ್ಡ್ ಐ ಫೋನ್ ನನ್ನ ಬಳಿಯಿದೆ": ನಟಿ ಊರ್ವಶಿಗೆ ಅಜ್ಞಾತವಾಸಿಯ ಮೇಲ್

ಅಹಮದಾಬಾದ್‌ನಲ್ಲಿ ನಡೆದ ಭಾರತ- ಪಾಕ್ ಪಂದ್ಯ ವೀಕ್ಷಣೆ ವೇಳೆ ನಟಿ ಊರ್ವಶಿ ರೌಟೇಲಾ ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿದ್ದರು. ನನ್ನ ಗೋಲ್ಡ್ ಐಫೋನ್ ಕಳೆದು ಹೋಗಿದೆ ದಯವಿಟ್ಟು ಫೋನ್ ತೆಗೆದುಕೊಂಡವರು ವಾಪಸ್ ಕೊಡಿ ಎಂದು ನಟಿ ಮನವಿ ಮಾಡಿದ್ದರು.

ತಮ್ಮ ಫೋನ್ ವಾಪಸ್ ಕೊಟ್ಟವರಿಗೆ ಬಹುಮಾ ಕೊಡುವುದಾಗಿಯೂ ಊರ್ವಶಿ ಹೇಳಿದ್ದರು. ಇದೀಗ ವ್ಯಕ್ತಿಯೊಬ್ಬ ನಟಿಗೆ ಮೇಲ್ ಮಾಡಿ ನಿಮ್ಮ ಫೋನ್ ನನ್ನ ಬಳಿಯಿದೆ. ವಾಪಸ್ ಕೊಡುತ್ತೇನೆ. ಇದಕ್ಕೆ ಬದಲಾಗಿ ನನಗೊಂದು ಸಹಾಯ ಮಾಡಬೇಕು ಎಂದು ಕೇಳಿದ್ದಾನೆ. ಈ ಬಗ್ಗೆ ನಟಿ ಊರ್ವಶಿ ರೌಟೇಲಾ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Urvashi-Rautela-iPhone-found

ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ್- ಪಾಕ್ ನಡುವೆ ಹೈವೋಲ್ಟೇಜ್ ಕ್ರಿಯೇಟ್ ಪಂದ್ಯ ನಡೀತು. ಭಾರತ 7 ವಿಕೆಟ್‌ಗಳ ಗೆಲುವು ಪಡೆಯಿತು. ಟಾಕ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತ್ತು. ಪಾಕ್ 42.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 191 ರನ್ ಮಾತ್ರ ಗಳಿಸಿತು. 117 ಎಸೆತಗಳು ಬಾಕಿ ಇರುವಾಗಲೇ ರೋಹಿತ್ ತಂಡ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.

ಅಮದು ಮೊಟೇರಾದ ಸ್ಟೇಡಿಯಂನಲ್ಲಿ ಸಾವಿರಾರು ಜನ ಪಂದ್ಯ ವೀಕ್ಷಿಸಿದರು. ಮೋಹಕ ತಾರೆ ರಮ್ಯಾ, ಅನುಷ್ಕಾ ಶರ್ಮಾ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು ಈ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಬಾಲಿವುಡ್ ಬಿಂದಾಸ್ ಚೆಲುವೆ ಊರ್ವಶಿ ರೌಟೇಲಾ ಕೂಡ ಪಂದ್ಯ ವೀಕ್ಷಿಸಿದರು. ಸಾಕಷ್ಟು ಜನ ಪಂದ್ಯ ವೀಕ್ಷಣೆ ವೇಳೆ ಗುಂಪಿನಲ್ಲಿ ತಮ್ಮ ವಸ್ತುಗಳನ್ನು ಕಳೆದುಕೊಂಡಿದ್ದರು.

ಪಂದ್ಯ ವೀಕ್ಷಣೆಯಲ್ಲಿ ಮೈಮರೆತ ನಟಿ ಊರ್ವಶಿ ತಮ್ಮ 24 ಕ್ಯಾರೆಟ್ ಗೋಲ್ಡ್ ಐ ಫೋನ್ ಕಳೆದುಕೊಂಡಿದ್ದರು. ಕೊನೆಯದಾಗಿ ಮಾಲ್‌ವೊಂದರಲ್ಲಿ ಫೋನ್ ಲಾಸ್ಟ್ ಲೊಕೇಶನ್ ದಾಖಲಾಗಿತ್ತು. ಫೋನ್ ಕಳೆದುಕೊಂಡಿದ್ದು ಹುಡುಕಿ ಕೊಡುವಂತೆ ಪೊಲೀಸರಿಗೂ ನಟಿ ದೂರು ನೀಡಿದ್ದರು. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋನ್ ವಾಸಪ್ ಕೊಡುವಂತೆ ಕೇಳಿಕೊಂಡಿದ್ದರು. ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ಇದೀಗ ಅಜ್ಞಾತ ವ್ಯಕ್ತಿಯಿಂದ ನಟಿ ಊರ್ವಶಿಗೆ ಮೇಲ್ ಬಂದಿದೆ. ನಿಮ್ಮ ಫೋನ್ ನನ್ನ ಬಳಿಯಿದೆ. ವಾಪಸ್ ಕೊಡುತ್ತೇನೆ. ಆದರೆ ನನಗೊಂದು ಸಹಾಯ ಮಾಡಿದೆ ಎಂದಿದ್ದಾನೆ. ಅದಕ್ಕೆ ನಟಿ ಕೂಡ ಒಪ್ಪಿಕೊಂಡಿದ್ದಾರೆ. "ಆ ಫೋನ್ ನನ್ನ ಬಳಿ ಇದೆ. ನಿಮಗೆ ಬೇಕಾದರೆ, ನೀವು ನನಗೆ ಸಹಾಯ ಮಾಡಬೇಕು. ನನ್ನ ಸಹೋದರ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ. ನೀವು ಅವನ ಚ ಕ್ಯಾನ್ಸರ್‌ ಚಿಕಿತ್ಸೆ ಸಹಾಯ ಮಾಡಬೇಕು" ಎಂದಿದ್ದಾನೆ. ಈ ಮೇಲ್‌ಗೆ ಸರಿ (ಥಮ್ಸ್‌ ಅಪ್‌ ಎಮೋಜಿ) ಎಂದು ಊರ್ವಶಿ ಒಪ್ಪಿಕೊಂಡಿದ್ದಾರೆ.

ನಟಿ ಊರ್ವಶಿ ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಬೇರೆ ಬೇರೆ ವಿಚಾರಗಳಿಗೆ ಸುದ್ದಿ ಆಗಿದ್ದೇ ಹೆಚ್ಚು. ಇನ್ನು ದುಬಾರಿ ಬೆಲೆಯ ಕಾಸ್ಟ್ಯೂಮ ಹಾಗೂ ಆಕ್ಸಸರೀಸ್ ಧರಿಸಿ ರ್ಯಾಂಪ್ ವಾಕ್ ಮಾಡುವ ಮೂಲಕವೂ ಸುದ್ದಿಯಲ್ಲಿ ಇರುತ್ತಾರೆ. ಒಂದಷ್ಟು ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕಿ ಗಮನ ಸೆಳೆದಿರುವುದು ಇದೆ.

ಕನ್ನಡದಲ್ಲಿ 'ಮಿಸ್ಟರ್ ಐರಾವತ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದ್ದರು. ಕ್ರಿಕೆಟಿಗ ರಿಷಬ್ ಪಂತ್ ಜೊತೆಗಿನ ಕಿರಿಕ್‌ನಿಂದಲೂ ಊರ್ವಶಿ ಸುದ್ದಿಯಾಗಿದ್ದರು. ಇತ್ತೀಚೆಗೆ 'ವಾಲ್ತೇರು ವೀರಯ್ಯ', 'ಏಜೆಂಟ್', 'ಬ್ರೋ' ಹೀಗೆ ತೆಲುಗಿನ ಮೂರು ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್‌ಗೆ ಊರ್ವಶಿ ಹೆಜ್ಜೆ ಹಾಕಿದ್ದರು. ಇನ್ನು ಹಿಂದಿಯ 'ದಿಲ್ ಹೈ ಗ್ರೇ' ಹಾಗೂ ತೆಲುಗಿನ 'ಬ್ಲ್ಯಾಕ್ ರೋಸ್' ಸಿನಿಮಾಗಳಲ್ಲಿ ಚೆಲುವೆ ನಟಿಸುತ್ತಿದ್ದಾರೆ. ಊರ್ವಶಿ ಐ ಫೋನ್ ವಿಚಾರ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

More from Filmibeat

English summary
Urvashi Rautela gets email from person who has her iPhone;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X