ಕಾನ್ ಚಿತ್ರೋತ್ಸವದಲ್ಲಿ ಊರ್ವಶಿ ಧರಿಸಿದ್ದ ಉಡುಪಿನ ಬೆಲೆ 'ವಾರಣಾಸಿ' ಸಿನಿಮಾ ಬಜೆಟ್‌ಗಿಂತ ಹೆಚ್ಚು!

ಬಾಲಿವುಡ್ ನಟಿ, ಮಾಡೆಲ್ ಊರ್ವಶಿ ರೌಟೇಲಾ ದಕ್ಷಿಣದ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ದುಬಾರಿ ಕಾಸ್ಟ್ಯೂಮ್, ವಜ್ರಾಭರಣ ಧರಿಸಿ ಆಕೆ ಪದೇ ಪದೆ ರ್ಯಾಂಪ್ ಏರುತ್ತಾರೆ. ಸದ್ಯ ಕಾನ್ ಚಿತ್ರೋತ್ಸವದಲ್ಲಿ ಐರಾವತ ಸಿನಿಮಾ ಬೆಡಗಿ ಮಿಂಚಿದ್ದಾರೆ. ಕಲರ್‌ಫುಲ್ ಕಾಸ್ಟ್ಯೂಮ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಹುಬ್ಬೇರಿಸಿದ್ದಾರೆ. ಆಕೆ ಧರಿಸಿದ್ದ ಗೌನ್ ದರ ಈಗ ಎಲ್ಲರ ಹುಬ್ಬೇರಿಸಿದೆ.

ಕಾನ್ ಚಿತ್ರೋತ್ಸವದಲ್ಲಿ ಬಾಲಿವುಡ್ ಬೆಡಗಿಯರು ಭಾಗಿ ಆಗುವುದು ಹೊಸದೇನು ಅಲ್ಲ. ಈ ಬಾರಿ ಆಲಿಯಾ ಭಟ್, ಐಶ್ವರ್ಯ ರೈ ಬಚ್ಚನ್, ಮೌನಿ ರಾಯ್, ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಮೇ 12ರಿಂದ ಮೇ 23ರವರೆಗೆ ಚಿತ್ರೋತ್ಸವ ನಡೆಯಲಿದೆ. ಹಾಲಿವುಡ್ ಸಿನಿಮಾ ತಾರೆಯರು ಕೂಡ ಭಾಗಿ ಆಗಿ ಕಮಾಲ್ ಮಾಡುತ್ತಿದ್ದಾರೆ. ಸದ್ಯ ಊರ್ವಶಿ ತೊಟ್ಟಿದ್ದ ಕಾಸ್ಟ್ಯೂಮ್ ವಿಚಾರ ಭಾರೀ ಸದ್ದು ಸದ್ದು ಮಾಡ್ತಿದೆ.

Urvashi s Cannes Dress Price vs Rajamouli s Rs 1400 Crore Varanasi Viral Social Media Debate

ವಿಯೆಟ್ನಾಂ ಮೂಲಕ ಜೋಲಿಪೋಲಿ ಕೌಚರ್ ಈ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಊರ್ವಶಿ ರೌಟೇಲಾ ಅವರ ಈ ಕಂಪ್ಲೀಟ್ ಲುಕ್ ದರ 155.87 ಮಿಲಿಯನ್ ಡಾಲರ್ ಎಂದು ಹೇಳಲಾಗುತ್ತಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ 1400 ಕೋಟಿ ರೂ. ಎಂದು ಅಂದಾಜಿಸಲಾಗುತ್ತಿದೆ. ಹರಳುಗಳಿಂದ ಕೂಡಿದ್ದ ಬೆಳ್ಳಿಯ ಬಣ್ಣದ ಪಾರದರ್ಶಕ ಗೌನ್, ಕುತ್ತಿಗೆಯಲ್ಲಿದ್ದ ನೆಕ್‌ಲೆಸ್, ಬ್ರೇಸ್‌ಲೆಟ್, ಕಿವಿ ಓಲೆ, ಪಕ್ಷಿಯ ಆಕಾರದ ಮಾಂಗ್ ಟಿಕ್ಕಾ ಎಲ್ಲವೂ ಗಮನ ಸೆಳೆಯುವಂತಿತ್ತು.

ರಾಜಮೌಳಿ 1300 ಕೋಟಿ ರೂ. ಬಜೆಟ್‌ನಲ್ಲಿ 'ವಾರಣಾಸಿ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ತರುತ್ತಿದ್ದಾರೆ. ಮಹೇಶ್ ಬಾಬು, ಪ್ರಿಯಾಂಕ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಾನ್ ಚಿತ್ರೋತ್ಸವದಲ್ಲಿ ಊರ್ವಶಿ ಧರಿಸಿದ್ದ ಕಾಸ್ಟ್ಯೂಮ್ ಬೆಲೆ 'ವಾರಣಾಸಿ' ಚಿತ್ರದ ಬಜೆಟ್‌ಗಿಂತ ಹೆಚ್ಚಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

8 ತಿಂಗಳ ಕಾಲ ಈ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ ಎಂದು ವರದಿಯಾಗಿದೆ. ಇವರೆಗೆ ಊರ್ವಶಿ ಕಾನ್ ಚಿತ್ರೋತ್ಸವಕ್ಕೆ ತೊಟ್ಟಿರುವ ಕಾಸ್ಟ್ಯೂಮ್‌ಗಳಲ್ಲಿ ಇದು ಬಹಳ ದುಬಾರಿ ಎನ್ನಲಾಗ್ತಿದೆ. ಕಳೆದ ವರ್ಷ ಕಾನ್ ಚಿತ್ರೋತ್ಸವದಲ್ಲಿ ಆಕೆ ಧರಿಸಿದ ಕಾಸ್ಟ್ಯೂಮ್, ಆಭರಣಗಳ ದರ 1300 ಕೋಟಿ ರೂ. ಎಂದು ವರದಿ ಆಗಿತ್ತು. ಉತ್ತರಪ್ರದೇಶದ ಹರಿದ್ವಾರ ಮೂಲದ ಊರ್ವಶಿ ಮಾಡೆಲ್ ಆಗಿ ಗುರ್ತಿಸಿಕೊಂಡಿದ್ದರು. 'ಸಿಂಗ್ ಸಾಬ್ ದಿ ಗ್ರೇಟ್' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು.

'ಐರಾವತ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆಕೆ ನಟನೆಗಿಂತ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದೇ ಹೆಚ್ಚು. ಇತ್ತೀಚೆಗೆ ಸ್ಪೆಷಲ್ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿ ಗಮನ ಸೆಳೆಯುತ್ತಿದ್ದಾರೆ. ದೊಡ್ಡ ಅವಕಾಶಗಳು ಮಾತ್ರ ಸಿಗುತ್ತಿಲ್ಲ. ಆದರೆ ದೇಶ ವಿದೇಶದ ಫ್ಯಾಷನ್ ಶೋಗಳಲ್ಲಿ ದುಬಾರಿ ಕಾಸ್ಟ್ಯೂಮ್ ಧರಿಸಿ ಮಿಂಚುತ್ತಿದ್ದಾರೆ.

ಇನ್ನು ಊರ್ವಶಿ ಕಾನ್ ಚಿತ್ರೋತ್ಸವ ಲುಕ್ ಟ್ರೋಲ್ ಆಗ್ತಿದೆ. ಮೆಟ್ ಗಾಲಾ ಉತ್ಸವಕ್ಕೆ ಇಂತಹ ವಿಚಿತ್ರ ವೇಷಭೂಷಣ ಧರಿಸುತ್ತಾರೆ. ಕಾನ್ ಚಿತ್ರೋತ್ಸವಕ್ಕೆ ಇದು ಸೂಟ್ ಆಗ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.

ಸದ್ಯ ಊರ್ವಶಿ ಕೈಯಲ್ಲಿ 3 ಸಿನಿಮಾಗಳಿವೆ. 'ಬ್ಲ್ಯಾಕ್ ರೋಸ್' ಎಂಬ ಸಿನಿಮಾ ಕಾರಣಾಂತರಗಳಿಂದ ತಡವಾಗ್ತಿದೆ. 'ವೆಲ್‌ ಕಮ್ ಟು ದಿ ಜಂಗಲ್' ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. 'ಕಸೂರ್-2' ಎಂಬ ಮತ್ತೊಂದು ಸಿನಿಮಾ ಚಿತ್ರೀಕರಣ ನಡೀತಿದೆ.

Read more about: urvashi rautela cannes lifestyle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X