ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥರನ್ನು ಭೇಟಿಯಾದ 'ಐರಾವತ' ಬೆಡಗಿ ಊರ್ವಶಿ

ದರ್ಶನ್ ಅಭಿನಯದ 'ಐರಾವತ' ಸಿನಿಮಾದಲ್ಲಿ ನಟಿಸಿದ್ದ ಬೆಡಗಿ ಊರ್ವಶಿ ರೋಟೆಲ್ಲ ಅಚಾನಕ್ಕಾಗಿ ಉತ್ತರ ಪ್ರದೇಶ ರಾಜ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗಿದ್ದಾರೆ.

ಭೇಟಿ ಸಮಯ ಯೋಗಿ ಆದಿತ್ಯನಾಥರಿಗೆ ಉಡುಗೊರೆಯನ್ನು ನೀಡಿರುವ ಊರ್ವಶಿ ರಾಟೆಲ್ಲಾ, ಸಿಎಂ ಅವರೊಟ್ಟಿಗೆ ಟೀ ಕುಡಿದಿದ್ದಾಗಿ ಸಹ ಹೇಳಿದ್ದಾರೆ.

'ನಿಮ್ಮ ಅತ್ಯಂತ ಬ್ಯುಸಿ ಶೆಡ್ಯೂಲ್‌ನ ನಡುವೆಯೂ ಈ ಮಧ್ಯಾಹ್ನ ನನ್ನನ್ನು ಭೇಟಿಯಾಗಿದ್ದು ಅತೀವ ಸಂತೋಶ ತಂದಿದೆ' ಎಂದು ಊರ್ವಶಿ ರಾಟೆಲ್ಲ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, ಚಿತ್ರವನ್ನು ಹಂಚಿಕೊಂಡಿದ್ದಾರೆ.

Urvasi Rautela Met Uttar Pradesh CM Yogi Adityanath

ಊರ್ವಶಿ ರಾಟೆಲ್ಲಾ, 'ಇನ್‌ಸ್ಪೆಕ್ಟರ್ ಅವಿನಾಶ್' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದು, ಚಿತ್ರೀಕರಣವು ಉತ್ತರ ಪ್ರದೇಶದ ವಿವಿಧ ನಗರಗಳಲ್ಲಿ ನಡೆಯಲಿದೆ. ಮೊದಲ ಬಾರಿಗೆ ಲಖನೌ ನ ಹುಡುಗಿಯ ಪಾತ್ರದಲ್ಲಿ ಊರ್ವಶಿ ಕಾಣಿಸಿಕೊಳ್ಳಲಿದ್ದಾರೆ. 'ನಾನು ನನ್ನ ಅಭಿನಯದಿಂದ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಲಿದ್ದೇನೆ' ಎಂದಿದ್ದಾರೆ ಊರ್ವಶಿ ರಾಟೆಲ್ಲ.

ರಣದೀಪ್ ಹೂಡಾ ನಾಯಕರಾಗಿರುವ ಈ ಸಿನಿಮಾದ ಬಹುತೇಕ ಚಿತ್ರೀಕರಣ ಉತ್ತರ ಪ್ರದೇಶದಲ್ಲಿಯೇ ನಡೆಯಲಿದೆ. ಚಿತ್ರತಂಡಕ್ಕೆ ಉತ್ತರ ಪ್ರದೇಶ ಸರ್ಕಾರವು ವಿಶೇಷ ಅನುಮತಿ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿಯೇ ಊರ್ವಶಿ ಅವರು ಯೋಗಿ ಆದಿತ್ಯನಾಥರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದ್ದಾರೆ ಮತ್ತು ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.

English summary
Actress Urvasi Rautela met Uttar Pradesh CM Yogi Adityanath as she is in UP for 'Inspector Avinash' movie shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X