ಊರ್ವಶಿ ರೌಟೆಲ್ಲಾ ತೊಟ್ಟ ಉಡುಗೆ ಬೆಲೆ 40 ಕೋಟಿ! ಏನಿದರ ವಿಶೇಷತೆ?

ನಟಿ ಊರ್ವಶಿ ರೌಟೆಲ್ಲಾ 2013 ರಲ್ಲೇ ಚಿತ್ರರಂಗ ಪ್ರವೇಶಿಸಿದ್ದಾದರೂ ಈವರೆಗೆ ನಟಿಸಿರುವುದು ಏಳು ಸಿನಿಮಾಗಳಲ್ಲಿ ಮಾತ್ರ. ಕೆಲವು ಸಿನಿಮಾಗಳಲ್ಲಿ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಊರ್ವಶಿಗೆ ಸಿನಿಮಾಕ್ಕಿಂತಲೂ ಫ್ಯಾಷನ್‌ ಮೇಲೆ ಹೆಚ್ಚು ಆಸಕ್ತಿ.

Recommended Video

40 ಕೋಟಿ ಉಡುಗೆ ಧರಿಸಿದ್ ದರ್ಶನ್ ಐರಾವತ ಚಿತ್ರದ ನಾಯಕಿ

ಹಲವು ಫ್ಯಾಷನ್ ಶೋಗಳಲ್ಲಿ ಭಾಗವಹಿಸುವ ಊರ್ವಶಿ ರೌಟೆಲಾ ಭಿನ್ನ-ವಿಭಿನ್ನ ಉಡುಗೆಗಳನ್ನು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿತ್ರವನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ. ಈ ಹಿಂದೆ ಹಲವು ಬಾರಿ ಊರ್ವಶಿ ಧರಿಸಿರುವ ಫ್ಯಾಷನೆಬಲ್ ಉಡುಗೆಗಳು ಸದ್ದು ಮಾಡಿವೆ.

ಇದೀಗ ಊರ್ವಶಿ ರೌಟೆಲಾ ಧರಿಸಿರುವ ಉಡುಪು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದಕ್ಕೆ ಕಾರಣ ಊರ್ವಶಿ ಈಗ ಧರಿಸಿರುವ ಉಡುಗೆಯ ಬೆಲೆ ಬರೋಬ್ಬರಿ 40 ಕೋಟಿ ರುಪಾಯಿ!

ದುಬೈನಲ್ಲಿ ಅರಬ್ ಫ್ಯಾಷನ್ ವೀಕ್ ನಡೆದಿದ್ದು, ಫ್ಯಾಷನ್ ಶೋನಲ್ಲಿ ಶೋ ಸ್ಟಾಪರ್ ಆಗಿ ನಟಿ ಊರ್ವಶಿ ರೌಟೆಲ್ಲಾ ಭಾಗವಹಿಸಿದ್ದರು. ಶೋ ಸ್ಟಾಪರ್ ಆಗಿ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ ಊರ್ವಶಿ ಕಣ್ಣು ಕುಕ್ಕುವಂತೆ ಖಚಿತ ಚಿನ್ನ ಹಾಗೂ ವಜ್ರದಿಂದ ತಯಾರಿಸಿದ ಉಡುಗೆಯನ್ನು ಧರಿಸಿದ್ದರು. ಈ ಉಡುಗೆಯ ಬೆಲೆ 40 ಕೋಟಿ ರುಪಾಯಿಗಳು!

ಚಿನ್ನ-ವಜ್ರದಿಂದ ಮಾಡಿದ ಉಡುಗೆ

ಚಿನ್ನ-ವಜ್ರದಿಂದ ಮಾಡಿದ ಉಡುಗೆ

ಬಿಯಾನ್ಸೆ, ಜೆನಿಫರ್ ಲೊಫೆಜ್ ಇನ್ನೂ ಹಲವು ಜಗತ್‌ಪ್ರಸಿದ್ಧ ಸೆಲೆಬ್ರಿಟಿಗಳಿಗೆ ಫ್ಯಾಷನ್ ಡಿಸೈನ್ ಮಾಡುವ ಫುರ್ನೊ ಒನ್ ಅಮಾಟೊ ಊರ್ವಶಿ ತೊಟ್ಟಿದ್ದ ಉಡುಗೆಯನ್ನು ಡಿಸೈನ್ ಮಾಡಿದ್ದರು. ಊರ್ವಶಿ ರೌಟೆಲ್ಲ ತೊಟ್ಟಿದ್ದ ಉಡುಗೆ ಕ್ಲಿಯೋಪಾತ್ರಾಳನ್ನು ನೆನಪಿಸುವಂತಿತ್ತು. ಮುಡಿಯಿಂದ ಅಡಿಯವರೆಗೆ ಕೇವಲ ಶುದ್ಧ ಚಿನ್ನದಲ್ಲಿ ಉಡುಗೆಯನ್ನು ಮಾಡಲಾಗಿದ್ದು, ವಜ್ರವನ್ನು ಸಹ ಬಳಸಲಾಗಿದೆ. ಉಡುಗೆ ಮಾತ್ರವಲ್ಲ ಊರ್ವಶಿಯ ತಲೆಗೂ ಚಿನ್ನದ ಆಭರಣವನ್ನು ತೊಡಿಸಲಾಗಿದೆ. ಈ ಉಡುಪಿಗೆ ಗ್ಲಾಮರ್ ಟಚ್‌ ಸಹ ನೀಡಲಾಗಿದೆ. ಊರ್ವಶಿಯ ಈ ದುಬಾರಿ ಉಡುಗೆಯ ಚಿತ್ರಗಳು ಸಾಮಾಜಿಕ ಜಾಲತಾಣದ ಇದೀಗ ವೈರಲ್ ಆಗಿದೆ.

37 ಕೋಟಿ ಮೌಲ್ಯದ ಉಡುಗೆ ಧರಿಸಿದ್ದ ಊರ್ವಶಿ

37 ಕೋಟಿ ಮೌಲ್ಯದ ಉಡುಗೆ ಧರಿಸಿದ್ದ ಊರ್ವಶಿ

ಊರ್ವಶಿ ರೌಟೆಲ್ಲ ಹೀಗೆ ದುಬಾರಿ ಉಡುಗೆಗಳನ್ನು ಧರಿಸುತ್ತಿರುವುದು ಮೊದಲೇನೂ ಅಲ್ಲ. ಅತ್ಯುತ್ತಮ ಮಾಡೆಲ್ ಎಂದು ಗುರುತಿಸಿಕೊಂಡಿರುವ ಊರ್ವಶಿ ಈ ಹಿಂದೆ 37 ಕೋಟಿ ಮೌಲ್ಯದ ಉಡುಗೆ ತೊಟ್ಟಿದ್ದರು. 'ಡಿವೈನ್ ಇಂಡ್‌ವೆಲ್ಲಿಂಗ್' ಹೆಸರಿನ ಫ್ಯಾಷನ್ ಕಿರು ಚಿತ್ರದಲ್ಲಿ ಚಿನ್ನ ಹಾಗೂ ವಜ್ರದಿಂದ ಮಾಡಲ್ಪಟ್ಟಿದ್ದ 37 ಕೋಟಿ ಮೌಲ್ಯದ ಉಡುಗೆಯನ್ನು ಊರ್ವಶಿ ತೊಟ್ಟಿದ್ದರು. ಅದಕ್ಕೂ ಮುನ್ನ ಅರಬ್‌ನ ಮೊಹಮ್ಮದ್ ರಮಾದಾನ್ ಮಾಡಿದ್ದ 'ವರ್ಸೆಸ್ ಬೇಬಿ' ಹಾಡಿನಲ್ಲಿ ಕಾಣಿಸಿಕೊಂಡಿದ್ದ ಊರ್ವಶಿ ಆ ಹಾಡಿನಲ್ಲಿ 15 ಕೋಟಿ ಮೌಲ್ಯದ ವರ್ಸೆಸ್ ಉಡುಗೆ ತೊಟ್ಟಿದ್ದರು.

ಅರ್ಧ ಕೋಟಿ ಬೆಲೆಯ ಸೀರೆ ಉಟ್ಟಿದ್ದ ಊರ್ವಶಿ

ಅರ್ಧ ಕೋಟಿ ಬೆಲೆಯ ಸೀರೆ ಉಟ್ಟಿದ್ದ ಊರ್ವಶಿ

ಅದಕ್ಕೂ ಮುನ್ನ 58 ಲಕ್ಷ ಮೌಲ್ಯದ ಪಟೋಲಾ ಸೀರೆಯನ್ನು ಉಟ್ಟು ಕಂಗೊಳಿಸಿದ್ದರು ಊರ್ವಶಿ ರೌಟೆಲ್ಲಾ. ಈ ಸೀರೆ 300 ವರ್ಷವಾದರೂ ಹಾಳಾಗುವುದಿಲ್ಲ, ಬಣ್ಣ ಕಳೆದುಕೊಳ್ಳುವುದಿಲ್ಲ. ಊರ್ವಶಿ ಉಟ್ಟಿದ್ದ ಸೀರೆಯನ್ನು ತಯಾರಿಸಲು ಆರು ತಿಂಗಳು ಹಿಡಿದಿದೆ. ಅದಕ್ಕೆ ಬಣ್ಣ ತುಂಬಲು 75 ದಿನ. ಅದನ್ನು ನೇಯಲು 25 ದಿನ ತೆಗೆದುಕೊಳ್ಳಲಾಗಿದೆ. 600 ಗ್ರಾಂಗಿಂತಲೂ ಹೆಚ್ಚು ಶುದ್ಧ ರೇಷಿಮೆ. ಸಾಮಾನ್ಯವಾಗಿ 27 ಪಟೋಲಾ ಸೀರೆಗೆ ಖರ್ಚು ಮಾಡುವಷ್ಟು ವಸ್ತುಗಳು, ಶ್ರಮವನ್ನು ಈ ಒಂದು ಸೀರೆ ತಯಾರಿಸಲು ಖರ್ಚು ಮಾಡಲಾಗಿದೆ ಎಂದು ಊರ್ವಶಿ ರೌಟೆಲಾರ ಸ್ಟೈಲಿಷ್ ತುಷಾರ್ ಕಪೂರ್ ಹೇಳಿದ್ದರು.

ಜಾಕ್ವೆಲಿನ್‌ರ ಚಿನ್ನದ ಉಡುಗೆ

ಜಾಕ್ವೆಲಿನ್‌ರ ಚಿನ್ನದ ಉಡುಗೆ

ಚಿನ್ನದ ಉಡುಗೆಗಳನ್ನು ಧರಿಸುವುದು ಹೊಸದೇನೂ ಅಲ್ಲ ಹಲವು ಫ್ಯಾಷನ್‌ ಶೋಗಳಲ್ಲಿ ಹೀಗೆ ಚಿನ್ನದ ಉಡುಗೆಗಳನ್ನು ಧರಿಸಲಾಗಿದೆ. ಕೆಲವು ದಿನಗಳ ಹಿಂದೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸಹ ಚಿನ್ನದ ಉಡುಗೆಯನ್ನು ಡಿಸೈನ್ ಮಾಡಿಸಿಕೊಂಡಿದ್ದರು. 'ಡ್ಯಾನ್ಸ್ ಪ್ಲಸ್ 6' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅವರು ಚಿನ್ನ ಲೇಪಿತ ಜಾಕೆಟ್ ಹಾಗೂ ಮಿನಿ ಸ್ಕರ್ಟ್ ಧರಿಸಿದ್ದರು. ಜಾಕ್ವೆಲಿನ್‌ರ ಈ ಉಡುಗೆ ಸಹ ಸಖತ್ ಸದ್ದು ಮಾಡಿತ್ತು.

More from Filmibeat

English summary
Actress Urvasi Rautela wore 40 core rs worth gold and diamond dress in Arab Fashion week. Her pics with golden dress went viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X