ಸುಮಾರು 2 ವರ್ಷಗಳ ಬಳಿಕ ಜನರಿಗೆ ಮುಖ ತೋರಿಸಿದ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ!
ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಕಳೆದ ಎರಡು ವರ್ಷಗಳಿಂದ ತಮ್ಮ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದರು. ಇದಾದ ಬಳಿಕ ಕೆಲವು ದಿನಗಳಿಂದ ಅವರ ಜೈಲುವಾಸದ ಬಗ್ಗೆ ಸಿನಿಮಾ ಮಾಡುವ ಸುದ್ದಿ ಓಡಾಡುತ್ತಿತ್ತು. ಈಗ ರಾಜ್ ಕುಂದ್ರಾ ಅವರ ಅಭಿನಯದ 'UT 69' ಎಂಬ ಶೀರ್ಷಿಕೆಯ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
2021 ರಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಯಸ್ಕ ಚಲನಚಿತ್ರ (ಪೋರ್ನ್ ಸಿನಿಮಾ) ದಂಧೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧಿಸಲಾಗಿತ್ತು. ಅವರು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಬರೋಬ್ಬರಿ 63 ದಿನಗಳನ್ನು ಕಳೆದರು. ಇದೇ ಅನುಭವವನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅದಕ್ಕೆ 'UT 69' ಎಂದು ಹೆಸರಿಡಲಾಗಿದೆ.

ರಾಜ್ ಕುಂದ್ರಾ ಅಭಿನಯದ 'UT 69' ಟ್ರೇಲರ್ ಬಿಡುಗಡೆ
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ತಮ್ಮ ಮುಂಬರುವ ಚಿತ್ರದ ಟ್ರೇಲರ್ ಅನ್ನು ಭರ್ಜರಿಯಾಗಿ ಬಿಡುಗಡೆ ಮಾಡಿದ್ದಾರೆ. 'UT 69' ಎಂಬ ಶೀರ್ಷಿಕೆಯ ಈ ಚಿತ್ರವು ಅಶ್ಲೀಲ ಸಿನಿಮಾ ಮಾಡಿದ ಆರೋಪದ ಮೇಲೆ ಉದ್ಯಮಿಯನ್ನು ಹೇಗೆ ಜೈಲಿಗೆ ಕಳುಹಿಸಲಾಯಿತು, ಅಲ್ಲಿ ಅವರ ಅನುಭವಗಳು ಹೇಗಿದ್ದವು ಎಂಬುದನ್ನು ವಿವರಿಸುತ್ತದೆ.
ಕಳೆದ ಕೆಲವು ತಿಂಗಳುಗಳಿಂದ, ರಾಜ್ ಅವರ ಆರ್ಥರ್ ರೋಡ್ ಜೈಲು ವಾಸವನ್ನು ಶೀಘ್ರದಲ್ಲೇ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದೆ. ಅದರೊಂದಿಗೆ ರಾಜ್ ಕುಂದ್ರಾ ಮೊದಲ ಬಾರಿಗೆ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ತುಂಬಿದ್ದವು. ಅಕ್ಟೋಬರ್ 10 ರಂದು ಫರಾ ಖಾನ್ ಈ ಸಿನಿಮಾವನ್ನು ಘೋಷಿಸಿದ್ದರು.
ಯುಟಿ 69 ಟ್ರೇಲರ್
ಅಶ್ಲೀಲ ಚಿತ್ರಗಳ ರಚನೆ ಮತ್ತು ಪ್ರಸಾರದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು 2021ರಲ್ಲಿ ಬಂಧಿಸಿದ್ದರು. ರಾಜ್ ಕುಂದ್ರಾ ಅವರು ತಮ್ಮ ಚೊಚ್ಚಲ ಚಲನಚಿತ್ರ ಕೇವಲ ಜೈಲುವಾಸದ ಅನುಭವವನ್ನು ಆಧರಿಸಿದೆ. ಅಶ್ಲೀಲ ಪ್ರಕರಣದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಎರಡು ವರ್ಷಗಳ ಬಳಿಕ ಮಾಸ್ಕ್ ತೆಗೆದ ರಾಜ್ ಕುಂದ್ರಾ!
ಕಳೆದ ಕೆಲವು ವರ್ಷಗಳಿಂದ ತನ್ನ ಮುಖವನ್ನು ಮುಚ್ಚಿಕೊಳ್ಳಲು ಫುಲ್ ಮಾಸ್ಕ್ ಬಳಸುತ್ತಿದ್ದ ರಾಜ್ ಕುಂದ್ರಾ ಕೊನೆಗೂ ಮಾಸ್ಕ ತೆಗೆದು ಮುಖ ತೋರಿಸಿದ್ದಾರೆ. ಯುಟಿ 69 ನ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ತಮ್ಮ ಮಾಸ್ಕ್ ತೆಗೆದು ಮಾಧ್ಯಮಗಳ ಮುಂದೆ ಮುಖ ತೋರಿಸಿದ್ದಾರೆ. ಬರೋಬ್ಬರಿ ಎರಡು ವರ್ಷಗಳ ನಂತರ ಸಾರ್ವಜನಿಕವಾಗಿ ರಾಜ್ ಕುಂದ್ರಾ ಮುಖ ತೋರಿಸಿದ್ದಾರೆ.
ಹೆಂಡತಿ ಶಿಲ್ಪಾ ಶೆಟ್ಟಿಯನ್ನು ಹಾಡಿ ಹೊಗಳಿದ ರಾಜ್ ಕುಂದ್ರಾ
ಸಮಾರಂಭದಲ್ಲಿ ಮಾತನಾಡಿರುವ ರಾಜ್ ಕುಂದ್ರಾ ಅವರು ತಮ್ಮ ಪತ್ನಿ ಶಿಲ್ಪಾ ಶೆಟ್ಟಿಯನ್ನು ಹೊಗಳಿದ್ದಾರೆ. ಶಿಲ್ಪಾ ಶೆಟ್ಟಿ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿರುವ ಅವರು ಆಕೆ ತಮ್ಮ ಜೊತೆಗೆ ಗಟ್ಟಿಯಾಗಿ ನಿಂತರು ಎಂದಿದ್ದಾರೆ. "ಆ 63 ದಿನಗಳು ನನ್ನ ಜೀವನದ ಅತ್ಯಂತ ಕಠಿಣ ದಿನಗಳು ಮತ್ತು ಇದನ್ನು ಯಾರೂ ಅನುಭವಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಎಲ್ಲದಕ್ಕೂ ನಾನು ಶಿಲ್ಪಾಗೆ ಧನ್ಯವಾದ ಹೇಳಲು ಬಯಸುತ್ತೇನೆ. ಆಕೆ ನನ್ನ ಪ್ರಪಂಚ, ಕಷ್ಟದಲ್ಲಿ ಕಲ್ಲು ಬಂಡೆಯಂತೆ ನನ್ನ ಜೊತೆಗೆ ನಿಂತರು" ಎಂದು ಹೇಳಿದ್ದಾರೆ.
ಜೊತೆಗೆ ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಅನಗತ್ಯವಾಗಿ ಈ ಪ್ರಕರಣದಲ್ಲಿ ಎಳೆಯಬೇಡಿ ಎಂದು ಮಾಧ್ಯಮದವರನ್ನು ಮನವಿ ಮಾಡಿದ್ದು, ಈ ವೇಳೆ ತೀವ್ರ ಭಾವುಕರಾಗಿದ್ದಾರೆ. ಇನ್ನು, ರಾಜ್ ಕುಂದ್ರಾ ಅವರು ತಮ್ಮ ಜೈಲು ವಾಸದ ಸಮಯದಲ್ಲಿ ಎದುರಿಸಿದ ಕಠಿಣ ದಿನಗಳನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











