'ಬೆಲ್ ಬಾಟಮ್' ಸಿನಿಮಾಗೆ ನಾಯಕಿ ಫಿಕ್ಸ್: ಅಕ್ಷಯ್ ಜೊತೆ ರೊಮ್ಯಾನ್ಸ್ ಮಾಡುವ ನಟಿ ಇವರೆ

ಬೆಲ್ ಬಾಟಮ್, ಸಿನಿಮಾ ಅಂದರೆ ಕನ್ನಡಿಗರಿಗೆ ರಿಷಬ್ ಶೆಟ್ಟಿ, ಹರಿಪ್ರಿಯಾ ನೆನಪಾಗುತ್ತಾರೆ. ಕಳೆದ ವರ್ಷ ರಿಲೀಸ್ ಆದ ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಅಲ್ಲದೆ ಬೇರೆ ಬೇರೆ ಭಾಷೆಗೂ ಸಿನಿಮಾ ರಿಮೇಕ್ ಆಗುತ್ತಿದೆ.

Recommended Video

Saroj Khan once slapped Shahrukh Khan on set ಸೆಟ್‌ನಲ್ಲಿ ಶಾರುಖ್ ಖಾನ್ ಕೆನ್ನೆಗೆ ಬಾರಿಸಿದ್ದರು ಈ ಮಹಿಳೆ

ಆದರೆ ಇದೆ ಹೆಸರಿನಲ್ಲಿ ಬಾಲಿವುಡ್ ನಲ್ಲಿಯೂ ಸಿನಿಮಾ ಸೆಟ್ಟೇರಿದೆ. ಅಕ್ಷಯ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಈ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ಕೂಡ ನಡೆದಿದೆ. ಕನ್ನಡದ ಸಿನಿಮಾದ ರಿಮೇಕ್ ಎನ್ನುವ ವಾದ ಕೂಡ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಅಕ್ಷಯ್ ಕುಮಾರ್ ಸ್ಪಷ್ಟನೆ ನೀಡಿ, ಇದು ಯಾವ ಭಾಷೆಯ ಸಿನಿಮಾದ ರಿಮೇಕ್ ಆಲ್ಲ ಎಂದು ಹೇಳಿದ್ದಾರೆ. ಸದ್ಯ ಚಿತ್ರ ಮತ್ತೆ ಸದ್ದು ಮಾಡುತ್ತಿದೆ. ಅದೂ ನಾಯಕಿ ವಿಚಾರವಾಗಿ. ಮುಂದೆ ಓದಿ...

ಅಕ್ಷಯ್ ಕುಮಾರ್ ಜೊತೆ ವಾಣಿ ಕಪೂರ್ ರೊಮ್ಯಾನ್ಸ್

ಅಕ್ಷಯ್ ಕುಮಾರ್ ಜೊತೆ ವಾಣಿ ಕಪೂರ್ ರೊಮ್ಯಾನ್ಸ್

ಸದ್ಯ ಅಕ್ಷಯ್ ಕುಮಾರ್ ಬೆಲ್ ಬಾಟಮ್ ಗೆ ನಾಯಕಿ ಫಿಕ್ಸ್ ಆಗಿದ್ದಾರೆ. ಬಾಲಿವುಡ್ ನಟಿ ವಾಣಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಕ್ಷಯ್ ಕುಮಾರ್ ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ಈ ಬಗ್ಗೆ ನಟಿ ವಾಣಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

ಸಖತ್ ಎಕ್ಸೈಟ್ ಆಗಿರುವ ವಾಣಿ

ಸಖತ್ ಎಕ್ಸೈಟ್ ಆಗಿರುವ ವಾಣಿ

ಅಕ್ಷಯ್ ಮತ್ತು ವಾಣಿ ಇಬ್ಬರು ಕಪ್ಪು ಬಣ್ಣದ ಬಟ್ಟೆ ಧರಿಸಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಸಖತ್ ಎಕ್ಸಾಯಿಟ್ ಆಗಿರುವ ವಾಣಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿ "ತುಂಬಾ ರೋಮಾಂಚನವಾಗುತ್ತಿದೆ ಮತ್ತು ಉತ್ಸುಕಳಾಗಿದ್ದೇನೆ. ಅಕ್ಷಯ್ ಕುಮಾರ್ ಜೊತೆ ನಟಿಸುತ್ತಿದ್ದೇನೆ. ಕಾಯಲು ಸಾಧ್ಯವಿಲ್ಲ. ಪ್ರಾರಂಭಿಸೋಣ" ಎಂದು ಬರೆದುಕೊಂಡಿದ್ದಾರೆ.

ವಾಣಿ ಬುದ್ದಿವಂತ ನಟಿ

ವಾಣಿ ಬುದ್ದಿವಂತ ನಟಿ

ಹಿಂದಿ ಬೆಲ್ ಬಾಟಮ್ ಗೆ ನಿರ್ದೇಶಕ ರಂಜಿತ್ ಎಂ ತಿವಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾಣಿ ಕಪೂರ್ ತುಂಬಾ ಬುದ್ದಿವಂತ ಮತ್ತು ಪರಿಣಾಮಕಾರಿ ನಟಿ. ಅವರ ಎಲ್ಲಾ ಸಿನಿಮಾದ ಪಾತ್ರಗಳು ಇಷ್ಟವಾಗಿದೆ. ಬೆಲ್ ಬಾಟಮ್ ಸಿನಿಮಾದಲ್ಲಿ ವಾಣಿ ತನ್ನ ಪಾತ್ರವನ್ನು ಅದ್ಭುತವಾಗಿ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ" ಎಂದು ಚಿತ್ರತಂಡ ಹೇಳಿದ್ದಾರೆ.

ಮುಂದಿನ ವರ್ಷ ಸಿನಿಮಾ ರಿಲೀಸ್

ಮುಂದಿನ ವರ್ಷ ಸಿನಿಮಾ ರಿಲೀಸ್

ಅಂದ್ಹಾಗೆ ಬೆಲ್ ಬಾಟಮ್ ಮುಂದಿನ ವರ್ಷ ತೆರೆಗೆ ಬರುತ್ತಿದೆ. ಈ ಮೊದಲು ಸಿನಿಮಾತಂಡ ಅನೌನ್ಸ್ ಮಾಡಿದ ಹಾಗೆ ಮುಂದಿನ ವರ್ಷ ಏಪ್ರಿಲ್ 2ರಂದು ಸಿನಿಮಾ ರಿಲೀಸ್ ಆಗುವುದಾಗಿ ಹೇಳಿದ್ದಾರೆ. ಅಕ್ಷಯ್ ಕುಮಾರ್ ಬಳಿ ಈಗಾಗಲೆ ಸಾಕಷ್ಟು ಸಿನಿಮಾಗಳಿವೆ. ಸದ್ಯ ಲಕ್ಷ್ಮಿ ಬಾಂಬ್ ರಿಲೀಸ್ ಗೆ ರೆಡಿಯಾಗಿದೆ. ಅಲ್ಲದೆ ಸೂರ್ಯವಂಶಿ ಮತ್ತು ಪೃಥ್ವಿರಾಜ್ ಸಿನಿಮಾ ಶೂಟಿಂಗ್ ಹಂತದಲ್ಲಿದೆ.

More from Filmibeat

English summary
Actress Vaani Kapoor To playLeading lady in Akshay kumar starrer Bell Bottom movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X