ಇಬ್ಬರು ನಿರ್ಮಾಪಕರ ಜೊತೆ ಮಲಗಬೇಕು, ನಿನ್ನ ರೇಟ್ ಎಷ್ಟು? ಸಾಕ್ಷಿ ಸಮೇತ ಚಿತ್ರರಂಗದ ಮುಖವಾಡ ಕಳಚಿದ ಬಿಗ್ ಬಾಸ್ ಸ್ಫರ್ಧಿ

'ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.

ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ. ಕೆಲವರು ಇಲ್ಲಿ ನೇರವಾಗಿಯೇ ತಮ್ಮ ಜೊತೆ ಮಲಗಬೇಕೆಂಬ ಬೇಡಿಕೆಯನ್ನು ಮುಂದಿಡುತ್ತಾರೆ. ಇನ್ನೂ ಕೆಲವರು ಅವಕಾಶ ನೀಡುವ ನೆಪದಲ್ಲಿ ಹತ್ತಿರವಾಗುವ ಪ್ರಯತ್ನ ಮಾಡುತ್ತಾರೆ. ಚೂರು ಯಾಮಾರಿದರೂ ಕೂಡ ಸ್ಥಳ ಯಾವುದೇ ಇರಲಿ, ಅಲ್ಲಿಯೇ ಬಲವಂತದಿಂದ ತಮ್ಮ ಕಾ*ಮದಾಹ ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

vada-pav-girl-chandrika-dixit-exposes-casting-couch-offers-in-showbiz

ಒಟ್ನಲ್ಲಿ ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಕನಸೆಂಬ ಕುದುರೆಯನ್ನೇರಿ ಬಂದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಉದಾಹರಣೆಗೆ ಚಂದ್ರಿಕಾ ದೀಕ್ಷಿತ್.

ಹೌದು, , ಚಂದ್ರಿಕಾ ದೀಕ್ಷಿತ್ ..ದೆಹಲಿಯ ''ವಡಾ ಪಾವ್ ಗರ್ಲ್'' ಎಂದೇ ಜನಜನಿತರಾದವರು. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಸೋಶಿಯಲ್ ಮೀಡಿಯಾದ ಸಹಾಯದ ಮೂಲಕ ಭಾರತದೆಲ್ಲೆಡೆ ಮನೆ ಮಾತಾದ ಚಂದ್ರಿಕಾ ದೀಕ್ಷಿತ್, ತಮಗೆ ಸಿಕ್ಕ ಈ ಜನಪ್ರಿಯತೆಯ ಪ್ರಭೆಯಲ್ಲಿಯೇ ''ಬಿಗ್ ಬಾಸ್'' ಮನೆಗೆ ಕೂಡ ಹೋಗಿ ಬಂದರು. ವ್ಯೂವ್ಸ್ ಮತ್ತು ಲೈಕ್ಸ್ ಆಸೆಯಲ್ಲಿ ದಾರಿ ತಪ್ಪಿದರು. ತಮ್ಮ ವ್ಯೆಯಕ್ತಿಕ ಬದುಕನ್ನು ಸಾರ್ವಜನಿಕವಾಗಿ ಪ್ರದರ್ಶನಕಿಟ್ಟರು. ಹಲವರ ಪಾಲಿಗೆ ಮನರಂಜನೆಯ ಸರಕಾದರು.

ರಾಷ್ಟ್ರೀಯ ಮಾಧ್ಯಮಗಳ ವರದಿಯಂತೆ ಸದ್ಯ ಇವರ ನಡೆ ಮತ್ತು ನುಡಿಗಳಿಂದ ಬೇಸತ್ತು ಒಂದ್ಕಾಲದಲ್ಲಿ ಹೆಗಲಿಗೆ ಹೆಗಲಾಗಿದ್ದ ಇವರ ಗಂಡ ಯುಗಮ್ ಗೇರಾ ದೂರವಾಗಿದ್ಧಾರೆ. ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಸೈಫ್ ಎಂಬಾತನ ಜೊತೆ ಮೂರೊತ್ತು ರೀಲ್ಸ್‌ ಮಾಡುವುದನ್ನೇ ಚಂದ್ರಿಕಾ ಸದ್ಯ ಕೆಲಸವನ್ನಾಗಿಸಿಕೊಂಡಿದ್ಧಾರೆ. ರೊಮ್ಯಾಂಟಿಕ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ ತೀರಾ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನನ್ನ ಮಗನ ಭವಿಷ್ಯಕ್ಕಾಗಿ, ಅವನನ್ನು ಸಾಕಲು, ಹಣಕ್ಕಾಗಿ ನಾನು ಯಾರ ಜೊತೆ ಬೇಕಾದರೂ ಮಲಗಲು ಸಿದ್ಧ ಎಂದು ಚಂದ್ರಿಕಾ ದೀಕ್ಷಿತ್ ಹೇಳಿದ್ದರು. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.ವ್ಯಾಪಕವಾಗಿ ವೈರಲ್ ಆಗಿತ್ತು.

ಹಲವರು ಚಂದ್ರಿಕಾ ಅವರ ಈ ನುಡಿಯನ್ನು ಕೇಳಿ ಬೆಚ್ಚಿ ಬಿದ್ದಿದ್ದರು. ಜೀವನೋಪಾಯಕ್ಕೆ ಹಲವಾರು ಕಾನೂನುಬದ್ಧ ಮತ್ತು ಗೌರವಯುತ ಮಾರ್ಗಗಳಿವೆ ಎನ್ನುವುದನ್ನು ಮರೆತು ಇಂತಹ ಅಸಹ್ಯಕರವಾದ ಮಾತುಗಳನ್ನಾಡಲು ನಾಚಿಕೆಯಾಗಲ್ವಾ..? ಎಂದು ಕಿಡಿ ಕಾರಿದ್ದರು.

ಇಂಥಾ ಚಂದ್ರಿಕಾ ದೀಕ್ಷಿತ್ ಸದ್ಯ ಚಿತ್ರರಂಗದ ಕರಾಳ ಮುಖಕ್ಕೆ ಕೈಗನ್ನಡಿ ಹಿಡಿದಿದ್ದಾರೆ. ಸಾಕ್ಷಿ ಸಮೇತ ತಮಗಾದ ಕಾಸ್ಟಿಂಗ್ ಕೌಚ್ ಅನುಭವ ಹಂಚಿಕೊಂಡಿದ್ದಾರೆ. ಈ ಕುರಿತು ವಿಡಿಯೋ ಮೂಲಕ ವಿವರಣೆ ನೀಡಿರುವ ಚಂದ್ರಿಕಾ ದೀಕ್ಷಿತ್ ವ್ಯಕ್ತಿಯೊಬ್ಬ ರಾಜಿ ಮಾಡಿಕೊಳ್ಳುವಂತೆ ತನಗೆ ಹೇಳಿದ ಎಂದು ಹೇಳಿದ್ಧಾರೆ.

ಈ ಕುರಿತು ಮಾತನಾಡಿರುವ ಚಂದ್ರಿಕಾ, ನಮ್ಮ ಜನ ಎಷ್ಟೊಂದು ಕೀಳಾಗಿ ಆಲೋಚನೆ ಮಾಡುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆಯನ್ನು ನಿಮ್ಮೆಲ್ಲರಿಗೆ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಒಂದು ವೇಳೆ ನೀವು ನಟಿಯಾಗಬೇಕೆಂಬ ಕನಸು ಕಂಡರೆ, ಆ ಕನಸಿಗೆ ಕೊಳ್ಳಿ ಇಡಲು ಇಲ್ಲಿ ರಾಕ್ಷಸರು ಕಾಯುತ್ತಿರುತ್ತಾರೆ ಎಂದು ಹೇಳಿರುವ ಚಂದ್ರಿಕಾ ಹಾಸಿಗೆ ಹಂಚಿಕೊಳ್ಳುವಂತೆ ನಿಮ್ಮನ್ನು ಇಲ್ಲಿ ಒತ್ತಾಯಿಸುತ್ತಾರೆ ಎಂದಿದ್ದಾರೆ. ನನಗೆ ಇಂತಹ ಅನುಭವ ಆಗಿದೆ ಎಂದಿದ್ದಾರೆ.

ಮುಂದುವರೆದು ಆಡಿಯೋ ಕ್ಲಿಪ್ ಕೂಡ ಚಂದ್ರಿಕಾ ಅವರು ಪ್ಲೇ ಮಾಡಿದ್ದು ಅದರಲ್ಲಿ ವ್ಯಕ್ತಿಯೊಬ್ಬ ಅವಕಾಶ ಬೇಕು ಅಂದರೆ ನೀವು ರಾಜಿಯಾಗಬೇಕು ಎಂದು ಹೇಳಿದ್ದಾನೆ. ಯಾರ ಜೊತೆ ರಾಜಿ ಮಾಡಿಕೊಳ್ಳಬೇಕೆಂದು ಚಂದ್ರಿಕಾ ಕೇಳಿದಾಗ ಇಬ್ಬರು ನಿರ್ಮಾಪಕರ ಜೊತೆ ನೀವು ಹಾಸಿಗೆ ಹಂಚಿಕೊಳ್ಳಬೇಕು, ಇದಕ್ಕೆ ನಿಮಗೆ ಎಷ್ಟು ಹಣ ಬೇಕು ಎಂದು ಕೇಳಿದ್ದಾನೆ.

vada-pav-girl-chandrika-dixit-exposes-casting-couch-offers-in-showbiz

ಸದ್ಯ ಈ ಆಡಿಯೋವನ್ನು ಹಂಚಿಕೊಂಡಿರುವ ಚಂದ್ರಿಕಾ, ಹಾಸಿಗೆ ಹಂಚಿಕೊಂಡರೆ ನಿಮಗೆ ಚಿತ್ರರಂಗದಲ್ಲಿ ಹಣ ಸಿಗುತ್ತೆ ಎಂದು ಹೇಳಿದ್ದಾರೆ. ಚಿತ್ರರಂಗ ತಲುಪುವ ಮೊದಲು ನೀವು ಇಲ್ಲಿ ತಲುಪಬೇಕು, ಈ ಪ್ರಯಾಣವನ್ನು ಬಹುತೇಕರು ಮಾಡಿದ್ದಾರೆ, ಬಹುತೇಕರಿಗೆ ಈ ಅನುಭವ ಆಗಿರುತ್ತೆ ಎಂದು ಹೇಳಿರುವ ಚಂದ್ರಿಕಾ ಕನಸುಗಳಿಗೆ ಹಲವರು ತಮ್ಮನ್ನೂ ಮಾರಿಕೊಳ್ಳುತ್ತಾರೆ ಎಂದು ಕೂಡ ಹೇಳಿದ್ದಾರೆ.

ಚಂದ್ರಿಕಾ ದೀಕ್ಷಿತ್ ಹಂಚಿಕೊಂಡ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದ್ದು ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಚಂದ್ರಿಕಾ ದೀಕ್ಷಿತ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಚಿತ್ರರಂಗ ಇರುವುದೇ ಹೀಗೆ ಎಂದಿದ್ದಾರೆ. ಇನ್ನೂ ಕೆಲವರು ಮೊನ್ನೆ ನೀವಾಡಿದ ಮಾತುಗಳಿಂದಲೇ ನಿಮಗೆ ಈ ತರಹದ ಫೋನ್ ಕರೆಗಳು ಬರುತ್ತಿವೆ ಎಂದು ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

More from Filmibeat

English summary
Chandrika Dixit slams industry predators! The Vada Pav Girl opens up about facing indecent proposals from producers and her brave stand against casting couch culture.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X