For Quick Alerts
  ALLOW NOTIFICATIONS  
  For Daily Alerts

  ಸಕಾರಾತ್ಮಕತೆ ಎಂದು ಅರೆಬೆತ್ತಲಾದ ಶಾಹಿದ್ ಕಪೂರ್ ನಟನೆಯ 'ಕಬೀರ್ ಸಿಂಗ್' ನಟಿ

  By ಫಿಲ್ಮ್ ಡೆಸ್ಕ್
  |

  ಶಾಹಿದ್ ಕಪೂರ್ ನಟನೆಯ ಸೂಪರ್ ಹಿಟ್ 'ಕಬೀರ್ ಸಿಂಗ್' ಸಿನಿಮಾದಲ್ಲಿ ಕಬೀರ್ ಸಿಂಗ್ ಮನೆಯ ಸಹಾಯಕಿ ಪಾತ್ರದಲ್ಲಿ ನಟಿಸಿದ್ದ ನಟಿ ವನಿತಾ ಖಾರತ್ ಅರೆಬೆತ್ತಲಾಗಿ ಫೋಟೋ ಶೂಟ್ ಮಾಡಿಸಿ ಅಚ್ಚರಿ ಮೂಡಿಸಿದ್ದಾರೆ. ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಅಂದಹಾಗೆ ಕ್ಯಾಲೆಂಡರ್ ಶೂಟ್ ಗಾಗಿ ವನಿತಾ ಅರೆಬೆತ್ತಲಾಗಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ದೇಹದ ಪಾಸಿಟಿವಿಟಿಯನ್ನು ತೋರಿಸುವ ಸಲುವಾಗಿ ಈ ರೀತಿಯ ಫೋಟೋಶೂಟ್ ಮಾಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಬೆತ್ತಲಾಗಿರುವ ವನಿತಾ ಗಾಳಿಪಟವನ್ನು ಅಡ್ಡ ಇಟ್ಟುಕೊಂಡು ಕ್ಯಮರಾಗೆ ಪೋಸ್ ನೀಡಿದ್ದಾರೆ.

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವನಿತಾ, 'ನನ್ನ ಪ್ರತಿಭೆ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಉತ್ಸಾಹ, ನನ್ನ ಆತ್ಮವಿಶ್ವಾಸ, ನನ್ನ ದೇಹದ ಬಗ್ಗೆ ನನಗೆ ಹೆಮ್ಮೆ ಇದೆ. ಏಕೆಂದರೆ ನಾನು ನಾನೇ' ಎಂದು ಹೇಳಿದ್ದಾರೆ. 'ದೇಹದ ಸಕಾರಾತ್ಮಕ ಆಂದೋಲನ'ದಲ್ಲಿ ಸೇರಲು ನಾವು ಒಟ್ಟಾಗೋಣ ಎಂದು ಹೇಳಿ ಅರೆ ಬೆತ್ತಲಾಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

  ವನಿತಾ ಅವರ ಈ ಫೋಟೋಗೆ ನೆಟ್ಟಿಗರು ಮತ್ತು ಸ್ನೇಹಿತರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಫೋಟೋ ಶೇರ್ ಮಾಡಿ ಕೆಲವೆೇ ಗಂಟೆಯಲ್ಲಿ ಸಿಕ್ಕಾಪಟ್ಟೆಲೈಕ್ಸ್ ಮತ್ತು ಮೆಚ್ಚುಗೆಯ ಕಾಮೆಂಟ್ಸ್ ಹರಿದುಬರುತ್ತಿದೆ.

  ಅಂದಹಾಗೆ ಕಬೀರ್ ಸಿಂಗ್ ಸಿನಿಮಾದಲ್ಲಿ ವನಿತಾ ಪಾತ್ರ ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಗಿದ್ದು. ಈ ಪಾತ್ರಗಳಿಂದ ಸಾಕಷ್ಟು ಮೀಮ್ ಗಳು ಸೃಷ್ಟಿಯಾಗಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಬೀರ್ ಸಿಂಗ್ ಕಂಡು ಭಯ ಬೀಳುವ ಪಾತ್ರದಲ್ಲಿ ವನಿತಾ ನಟಿಸಿದ್ದರು.

  ಅವತ್ತು Dhruva Sarja, ಇವತ್ತು Karunya Ram | Filmibeat Kannada

  ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆದ ಬಳಿಕ ವನಿತಾ 2019ರ ಸ್ಕೀನ್ ಅವಾರ್ಡ್ ಕಾರ್ಯಕ್ರಮದಲ್ಲಿ ಶಾಹಿದ್ ಕಪೂರ್ ಅವರನ್ನು ಭೇಟಿಯಾಗಿದ್ದರು. ಜೊತೆಗೆ ಶಾಹಿದ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಇನ್ನು ವನಿತಾ ಬಾಲಿವುಡ್ ಸಿನಿಮಾ ಮಾತ್ರವಲ್ಲದೆ ಮರಾಠಿಯಲ್ಲೂ ಮಿಂಚುತ್ತಿದ್ದಾರೆ.

  English summary
  Kabir Singh actress Vanita Kharat body positivity photoshoot goes viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X