»   » 'ಬಾಹುಬಲಿ' ಪ್ರಭಾಸ್‌ಗೆ ಕತ್ತಿಯಿಂದ ಇರಿದ ಬಾಲಿವುಡ್ ನಟ

'ಬಾಹುಬಲಿ' ಪ್ರಭಾಸ್‌ಗೆ ಕತ್ತಿಯಿಂದ ಇರಿದ ಬಾಲಿವುಡ್ ನಟ

Posted By:
Subscribe to Filmibeat Kannada

ಎಸ್.ಎಸ್.ರಾಜಮೌಳಿ ನಿರ್ದೇಶನದ ಪ್ರಭಾಸ್, ರಾಣಾ ದಗ್ಗುಬಾಟಿ ಮತ್ತು ಅನುಷ್ಕ ಶೆಟ್ಟಿ ಅಭಿನಯದ 'ಬಾಹುಬಲಿ-2' ಚಿತ್ರ ಪ್ರಪಂಚದಾದ್ಯಂತ ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಆದರೆ 'ಬಾಹುಬಲಿ- ದಿ ಬಿಗಿನ್ನಿಂಗ್' ಚಿತ್ರದಲ್ಲಿ ಕಟ್ಟಪ್ಪ ಬಾಹುಬಲಿಗೆ ಕತ್ತಿಯಿಂದ ಇರಿದ ದೃಶ್ಯವನ್ನು ಮಾತ್ರ ಇಂದಿಗೂ ಯಾರು ಮರೆತಿಲ್ಲ. ಕಾರಣ ಅಷ್ಟೊಂದು ರೋಮಾಂಚನ ಕಾರಿಯಾದ ದೃಶ್ಯವದು.

'ಬಾಹುಬಲಿ-2' ಚಿತ್ರದಲ್ಲಿ ಪ್ರಭಾಸ್ ಅಭಿನಯವನ್ನು ನೋಡಿ ಬಾಲಿವುಡ್ ನ ದಿಗ್ಗಜ ನಟರಾದ ರಿಷಿ ಕಪೂರ್, ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್, ರಾಮ್ ಗೋಪಾಲ್ ವರ್ಮಾ ಮತ್ತು ಇತರರು ಪ್ರಶಂಸೆ ನೀಡಿದ್ದಾರೆ. ಚಿತ್ರದಲ್ಲಿ ಕಟ್ಟಪ್ಪ ಬಾಹುಬಲಿಗೆ ಕತ್ತಿಯಿಂದ ಇರಿದ ಹಾಗೆ ನೈಜವಾಗಿ ಪ್ರಭಾಸ್ ಗೆ ಬಾಲಿವುಡ್ ನಟನೊಬ್ಬ ಕತ್ತಿಯಿಂದ ಇರಿದಿದ್ದಾರೆ. ಆ ನಟ ಯಾರು ತಿಳಿದು ಕೊಳ್ಳುವ ಕುತೂಹಲ ನಿಮಗಿದ್ಯಾ..?

ಇವರೇ ಆ ಬಾಲಿವುಡ್ ನಟ

ನೀವು ಅಂದುಕೊಂಡ ಹಾಗೆ ಪ್ರಭಾಸ್ ಗೆ ಕತ್ತಿಯಿಂದ ಇರಿದಿರುವುದು ನೈಜವಾಗಿ ರಕ್ತ ಬರುವ ಹಾಗೆ ಅಲ್ಲ. 'ಬಾಹುಬಲಿ- ದಿ ಬಿಗಿನ್ನಿಂಗ್' ಚಿತ್ರದಲ್ಲಿ ಕಟ್ಟಪ್ಪ ಬಾಹುಬಲಿಗೆ ಹಿಂದಿನಿಂದ ಕತ್ತಿಯಿಂದ ಇರಿದ ದೃಶ್ಯವನ್ನು ಮರೆಯಲು ಸಾಧ್ಯವಾಗದ ಬಾಲಿವುಡ್ ನಟ ವರುಣ್ ಧವನ್ ಆ ದೃಶ್ಯವನ್ನು ರೀಕ್ರಿಯೇಟ್ ಮಾಡಿದ್ದಾರೆ ಅಷ್ಟೆ.

ಪ್ರಭಾಸ್ ಗೆ ಕತ್ತಿಯಿಂದ ಇರಿದ ದೃಶ್ಯ

ನಿನ್ನೆಯಷ್ಟೆ ಬಾಲಿವುಡ್ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ತಮ್ಮ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಪ್ರಭಾಸ್ ಮತ್ತು ವರುಣ್ ಧವನ್ ಪಾಲ್ಗೊಂಡಿದ್ದರು. ಈ ವೇಳೆ ಕಟ್ಟಪ್ಪ ಬಾಹುಬಲಿಗೆ ಕತ್ತಿಯಿಂದ ಇರಿದ ದೃಶ್ಯವನ್ನು ವರುಣ್ ಧವನ್ ರವರು ಪ್ರಭಾಸ್ ರನ್ನು ನಿಲ್ಲಿಸಿ ರೀಕ್ರಿಯೇಟ್ ಮಾಡಿದ್ದಾರೆ. ಪ್ರಭಾಸ್ ಸಹ ನಗುತ್ತಲೇ ಪೋಸ್ ಕೊಟ್ಟಿದ್ದಾರೆ. ಆ ಸೀನ್ ಅನ್ನು ನೀವು ಒಮ್ಮೆ ನೋಡಿ.

ಪ್ರಭಾಸ್ ರನ್ನು ಹೊಗಳಿದ ವರುಣ್

ಕತ್ತಿಯಿಂದ ಇರಿದ ದೃಶ್ಯವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಅಪ್‌ಲೋಡ್ ಮಾಡಿರುವುದಲ್ಲದೇ, ವರುಣ್ ಧವನ್ ಪ್ರಭಾಸ್ ರನ್ನು ಪ್ರಶಂಸಿಸಿ, 'ತುಂಬಾ ಶಾಂತ ಸ್ವಭಾವದವರು ಮತ್ತು ಸರಳ ಜೀವಿ' ಎಂದು ಬರೆದಿದ್ದಾರೆ.

ಹಿಂದಿಯಲ್ಲಿ 'ಬಾಹುಬಲಿ-2'

'ಬಾಹುಬಲಿ-2' ಚಿತ್ರ ಹಿಂದಿ ಭಾಷೆ ಒಂದರಲ್ಲಿಯೇ 500 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಗಳಿಸಿದೆ.

English summary
Bollywood Actor Varun Dhavan recreated the Kattapa killed Baahubali moment by stabbing Prabhas recently at a bash organised by Karan Johar's resident.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada