»   » ಟ್ರೈಲರ್: ಆಲಿಯಾ, ವರುಣ್ ಎಫರ್ಟ್ ಲೆಸ್ ಕೆಮಿಸ್ಟ್ರಿ ಹೇಗಿದೆ ನೋಡಿ!

ಟ್ರೈಲರ್: ಆಲಿಯಾ, ವರುಣ್ ಎಫರ್ಟ್ ಲೆಸ್ ಕೆಮಿಸ್ಟ್ರಿ ಹೇಗಿದೆ ನೋಡಿ!

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಇತ್ತೀಚೆಗೆ ಬಿಗ್ ಸ್ಟಾರ್ ಗಳ ಸ್ಪೋರ್ಟ್ ಡ್ರಾಮಾ ಮತ್ತು ರೊಮ್ಯಾಂಟಿಕ್ ಸ್ಪೋರ್ಟ್ ಡ್ರಾಮಾ ಸಿನಿಮಾಗಳು ಹೆಚ್ಚಾಗಿ ಮೂಡಿಬರುತ್ತಿವೆ. ಅವುಗಳ ಜೊತೆಗೆ ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳು ಪ್ರೇಕ್ಷಕರ ಮನಗೆಲ್ಲುತ್ತ ಬಂದಿವೆ. ಆದರೆ ಈಗ ಸದ್ಯದಲ್ಲಿ ಸಿನಿ ಪ್ರಿಯರಿಗೆ ಕಾಮಿಡಿ ನೀಡಲು ರೆಡಿ ಆಗಿರುವುದು ಬಹು ನಿರೀಕ್ಷಿತ ಸಿನಿಮಾ 'ಬದ್ರಿನಾಥ್ ಕಿ ದುಲ್ಹನಿಯ'.

'ಬದ್ರಿನಾಥ್ ಕಿ ದುಲ್ಹನಿಯ' ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೆ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಟ್ರೆಡಿಂಗ್ ನಲ್ಲಿದ್ದು, ಚಿತ್ರದ ವಿಶೇಷತೆ ಮತ್ತು ಟ್ರೈಲರ್ ಇಲ್ಲಿದೆ..

ಬಾಲಿವುಡ್ ನಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಏಕೆ?

2014 ರಲ್ಲಿ ತೆರೆ ಕಂಡಿದ್ದ 'ಹಂಪ್ಟಿ ಶರ್ಮಾ ಕಿ ದುಲ್ಹನಿಯ' ಚಿತ್ರ ತಂಡವೇ 'ಬದ್ರಿನಾಥ್ ಕಿ ದುಲ್ಹನಿಯ' ಚಿತ್ರವನ್ನು ನಿರ್ಮಿಸಿದೆ.

'ಹಂಪ್ಟಿ ಶರ್ಮಾ ಕಿ ದುಲ್ಹನಿಯ' ಚಿತ್ರದ ನಾಯಕ-ನಾಯಕಿ

'ಹಂಪ್ಟಿ ಶರ್ಮಾ ಕಿ ದುಲ್ಹನಿಯ' ಚಿತ್ರದ ನಾಯಕ ವರುಣ್ ಧವನ್ ಮತ್ತು ನಾಯಕಿ ಆಲಿಯಾ ಭಟ್ ಇಬ್ಬರು ಸಹ 'ಬದ್ರಿನಾಥ್ ಕಿ ದುಲ್ಹನಿಯ' ಚಿತ್ರದಲ್ಲೂ ನಾಯಕ-ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಬಾಲಿವುಡ್ ಮಂದಿಯಲ್ಲಿ ಹೆಚ್ಚಾಗೆ ಇದೆ.

ಸ್ಟಾರ್ ಡಸ್ಟ್ ಪ್ರಶಸ್ತಿ

'ಹಂಪ್ಟಿ ಶರ್ಮಾ ಕಿ ದುಲ್ಹನಿಯ' ಚಿತ್ರದಲ್ಲಿಯ ಉತ್ತಮ ಅಭಿನಯಕ್ಕಾಗಿ ವರುನ್ ಧವನ್ ಮತ್ತು ಆಲಿಯಾ ಭಟ್ ಗೆ ಸ್ಟಾರ್ ಡಸ್ಟ್ ಉತ್ತಮ ನಟ-ನಟಿ ಪ್ರಶಸ್ತಿ ಲಭಿಸಿತ್ತು.

ಎರಡು ಚಿತ್ರಗಳಿಗೂ ಶಶಾಂಕ್ ಆಕ್ಷನ್ ಕಟ್

ಸಕ್ಸಸ್ ಫುಲ್ ಚಿತ್ರ ''ಹಂಪ್ಟಿ ಶರ್ಮಾ ಕಿ ದುಲ್ಹನಿಯ' ಗೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದ ಶಶಾಂಕ್ ಖೈತಾನ್ ಅವರೇ ಈಗ 'ಬದ್ರಿನಾಥ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರ ರಿಲೀಸ್ ಯಾವಾಗ?

ಮೂರು ವರ್ಷಗಳ ಮತ್ತೆ ತೆರೆ ಮೇಲೆ ಒಂದಾಗಿರುವ ವರುಣ್ ಧವನ್ ಮತ್ತು ಆಲಿಯಾ ಭಟ್ ಅಭಿನಯದ 'ಬದ್ರಿನಾಥ್ ಕಿ ದುಲ್ಹನಿಯ' ಚಿತ್ರ ಮಾರ್ಚ್ ತಿಂಗಳಲ್ಲಿ ತೆರೆ ಕಾಣಲಿದೆ. ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಕರಣ್ ಜೋಹರ್ ನಿರ್ಮಾಣಮಾಡುತ್ತಿದ್ದಾರೆ.

'ಬದ್ರಿನಾಥ್ ಕಿ ದುಲ್ಹನಿಯ' ಟ್ರೈಲರ್ ನೋಡಿ

Read more about: alia bhatt bollywood cinema trailer
English summary
‘Badrinath Ki Dulhania’ trailer: Bollywood Actor Varun Dhawan and Actress Alia Bhatt are here to win your hearts

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X