For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲಿ ಮದುವೆ ಸಂಭ್ರಮ: ಬಹುಕಾಲದ ಗೆಳತಿ ಜೊತೆ ಹಸೆಮಣೆ ಏರಲು ಸಜ್ಜಾದ ವರುಣ್ ಧವನ್

  |

  ಬಾಲಿವುಡ್ ನ ಖ್ಯಾತ ನಟ ವರುಣ್ ಧವನ್ ಮದುವೆ ವಿಚಾರ ಕಳೆದ ಎರಡು ವರ್ಷಗಳಿಂದ ಸದ್ದು ಮಾಡುತ್ತಲೇ ಇದೆ. ವರುಣ್ ಮದುವೆ ಯಾವಾಗ ಎನ್ನುವ ಪ್ರಶ್ನೆ ಆಗಾಗ ಎದುರಾಗುತ್ತಲೇ ಇತ್ತು. ಕೊನೆಗೂ ವರುಣ್ ಮದುವೆ ವಿಚಾರ ಬಹಿರಂಗವಾಗಿದೆ.

  ವರುಣ್ ಧವನ್ ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಂದಹಾಗೆ ವರುಣ್ ಧವನ್ ಮತ್ತು ನತಾಶಾ ಇದೇ ತಿಂಗಳ ಕೊನೆಯಲ್ಲಿ ಹಸಮಣೆ ಏರುತ್ತಿದ್ದಾರೆ. 2021 ಪ್ರಾರಂಭದಲ್ಲೇ ಮದುವೆ ಸಂಭ್ರಮ ಕೇಳಿ ಬಾಲಿವುಡ್ ಮಂದಿ ಜೊತೆಗೆ ಅಭಿಮಾನಿಗಳು ಸಹ ಸಂತಸ ಪಡುತ್ತಿದ್ದಾರೆ.

  ಮತ್ತೆ ತಮ್ಮದೇ ಹಳೆಯ ಸಿನಿಮಾ ರೀಮೇಕ್ ಮಾಡಲಿದ್ದಾರೆ ನಿರ್ದೇಶಕ ಧವನ್ಮತ್ತೆ ತಮ್ಮದೇ ಹಳೆಯ ಸಿನಿಮಾ ರೀಮೇಕ್ ಮಾಡಲಿದ್ದಾರೆ ನಿರ್ದೇಶಕ ಧವನ್

  ಮೂಲಗಳ ಪ್ರಾರಂಭ ವರುಣ್ ಮತ್ತು ನತಾಶಾ ಜನವರಿ 24ರಂದು ಮದುವೆ ಆಗುತ್ತಿದ್ದಾರೆ. ಇಬ್ಬರ ಮದುವೆ ಸಮಾರಂಭ ಸುಮಾರು 5 ದಿನಗಳು ನಡೆಯುತ್ತಿದೆ. ಇಬ್ಬರ ಮದುವೆಗೆ ಕೇವಲ ಕುಟುಂಬದವರು ಮತ್ತು ತೀರ ಆಪ್ತರಿಗೆ ಮಾತ್ರ ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

  ಅಂದಹಾಗೆ ವರುಣ್ ಮದುವೆ ಸಂಭ್ರಮ ಮುಂಬೈನಿಂದ 90 ಕಿ.ಮೀ ದೂರದಲ್ಲಿರುವ ಆಲಿಗಡ್ ನಲ್ಲಿ ನೆರವೇರಲಿದೆ. ಜನವರಿ 22ರಿಂದ 26ರ ವರೆಗೆ ಮದುವೆ ಸಡಗರ ಇರಲಿದೆ. ಸಂಗೀತ ಸಮಾರಂಭ, ಮೆಹಂದಿ ಶಾಸ್ತ್ರ ಸೇರಿದಂತೆ ಎಲ್ಲಾ ಶಾಸ್ತ್ರ, ಸಂಪ್ರದಾಯಗಳೊಂದಿಗೆ ವರುಣ್ ಮತ್ತು ನತಾಶಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪಂಜಾಬಿ ಸಂಪ್ರದಾಯದ ಪ್ರಕಾರ ಇಬ್ಬರು ಹಣೆಮಣೆ ಏರುತ್ತಿದ್ದಾರೆ.

  ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada

  ಮದುವೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ. ಈಗಾಗಲೇ ಇಬ್ಬರು ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವರುಣ್ ಮತ್ತು ನತಾಶಾ ಮದುವೆಗೆ ಬಾಲಿವುಡ್ ನಿಂದ ಯಾರಿಗೆಲ್ಲ ಆಹ್ವಾನ ನೀಡಲಾಗಿದೆ, ಯಾರೆಲ್ಲ ಬರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Bollywood Actor varun dhawan and his girl friend Natasha Dalal to marry on 24th january 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X